ಸಿಎಂ BSYಗೆ ಮುರುಘಾ ಶರಣರಿಂದ ರಾಜಕಾರಣದ ಅದ್ಭುತ ಸಲಹೆ

Published : Oct 06, 2019, 10:34 PM ISTUpdated : Oct 06, 2019, 10:44 PM IST
ಸಿಎಂ BSYಗೆ ಮುರುಘಾ ಶರಣರಿಂದ ರಾಜಕಾರಣದ ಅದ್ಭುತ ಸಲಹೆ

ಸಾರಾಂಶ

ಸಮಾಜ ಸುಧಾರಣೆ, ಪರಿವರ್ತನೆ ಮಾಡುವವರಿಗೆ ಅಸಹಕಾರ, ಅವಮಾನ ಸಾಮಾನ್ಯ/ ಎಲ್ಲವನ್ನು  ಎದುರಿಸಿ ಯಶಸ್ಸಿನ ಕಡೆ ಹೆಜ್ಜೆ ಇಡಬೇಕು/ ಬಿಎಸ್‌ ವೈಗೆ  ಚಿತ್ರದುರ್ಗದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರ ಕಿವಿಮಾತು

ಚಿತ್ರದುರ್ಗ[ಅ. 06]  ಸಮಾಜ ಸುಧಾರಣೆ, ಪರಿವರ್ತನೆ ಮಾಡುವವರಿಗೆ ಅಸಹಕಾರ ಅವಮಾನಗಳು, ನಿಂದನೆಗಳು ಇದ್ದೇ ಇರುತ್ತವೆ ಎಂದು ಚಿತ್ರದುರ್ಗದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.

ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಆಶೀರ್ವಚನ ನೀಡಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಕಿವಿಮಾತು ಹೇಳಿದರು.

ಸಮಾಜ ಸುಧಾರಣೆ, ಪರಿವರ್ತನೆ ಮಾಡುವವರಿಗೆ ಅಸಹಕಾರ, ಅವಮಾನ ಸಾಮಾನ್ಯ. ಸಿಎಂ‌ ಬಿಎಸ್ ವೈ ಅವರಿಗೂ ನಿರ್ಣಾಯಕ ಸಂದರ್ಭವಿದೆ.ಎಲ್ಲಾ ಹಂತದಲ್ಲೂ ಧೈರ್ಯದಿಂದ ಮುನ್ನಡೆಯಬೇಕು. ಅಧಿಕಾರ ಚಲಾಯಿಸಿ ಉತ್ತಮ ಆಡಳಿತ ನೀಡುವ ಪ್ರಯತ್ನ ಮಾಡಬೇಕಿದೆ ಎಂದು ಸಲಹೆ  ನೀಡಿದ್ದಾರೆ.

ತಂತಿ ನಡಿಗೆ: ವಯಸ್ಸಾಗಿದೆ, ಜಾರಿ ಬಿದ್ದೀರಿ..! ಬಿಎಸ್‌ವೈಗೆ ಸಿದ್ದು ಟಾಂಗ್..!

ಯಾವುದೇ ಸಮಸ್ಯೆ ಬರಲಿ  ತೆಗೆದುಕೊಳ್ಳಬೇಕು. ಎಲ್ಲರ ‌ಬದುಕಿನಲ್ಲೂ ಅವಮಾನ, ನಿಂದೆ, ಅಸಹಕಾರಗಳಿವೆ. ಎಲ್ಲದರ ನಡುವೆ ನಿಮ್ಮತನ ತೋರುವ ಸಂದರ್ಭ ಬಂದಿದೆ. ಸವಾಲಾಗಿ ಸ್ವೀಕರಿಸಿ ಯಶಸ್ವಿ ಆಗುವ ಸಂದರ್ಭ ತಂದುಕೊಳ್ಳಬೇಕು ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡುತ್ತ ನಾನು ತಂತಿ ಮೇಲೆ ನಡೆಯುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ನಂತರ  ಅನೇಕ ರಾಜಕೀಯ ತಿರುವು ಪಡೆದುಕೊಂಡಿತ್ತು.

PREV
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!