ಛಲವಾದಿ ಸಮುದಾಯಕ್ಕೆ ಪ್ರಾಶಸ್ತ್ಯ ನೀಡುವ ಮೂಲಕ ಮುಂಬರುವ ಲೋಕಸಭೆ ಟಿಕೆಟ್ ಕಲ್ಪಿಸುವಂತೆ ಕೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ವರಿಷ್ಠರಿಗೆ ಮನವಿ ಸಲ್ಲಿಸಿರುವುದಾಗಿ ಇಲ್ಲಿನ ಚಿತ್ರದುರ್ಗ ಲೋಕಸಭಾ ಚುನಾವಣಾ ಟಿಕೆಟ್ ಆಕಾಂಕ್ಷಿ, ಕೆಪಿಸಿಸಿ ಸದಸ್ಯ ಹಾಗೂ ಮಾಜಿ ಸಚಿವ ದಿವಂಗತ ಕೆ.ಎಚ್. ರಂಗನಾಥ್ ಅವರ ಆಳಿಯ ಎಸ್. ವಿಜಯಕುಮಾರ್ ತಿಳಿಸಿದರು.
ಪಾವಗಡ: ಛಲವಾದಿ ಸಮುದಾಯಕ್ಕೆ ಪ್ರಾಶಸ್ತ್ಯ ನೀಡುವ ಮೂಲಕ ಮುಂಬರುವ ಲೋಕಸಭೆ ಟಿಕೆಟ್ ಕಲ್ಪಿಸುವಂತೆ ಕೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ವರಿಷ್ಠರಿಗೆ ಮನವಿ ಸಲ್ಲಿಸಿರುವುದಾಗಿ ಇಲ್ಲಿನ ಚಿತ್ರದುರ್ಗ ಲೋಕಸಭಾ ಚುನಾವಣಾ ಟಿಕೆಟ್ ಆಕಾಂಕ್ಷಿ, ಕೆಪಿಸಿಸಿ ಸದಸ್ಯ ಹಾಗೂ ಮಾಜಿ ಸಚಿವ ದಿವಂಗತ ಕೆ.ಎಚ್. ರಂಗನಾಥ್ ಅವರ ಆಳಿಯ ಎಸ್. ವಿಜಯಕುಮಾರ್ ತಿಳಿಸಿದರು.
ಶುಕ್ರವಾರ ತಾಲೂಕಿನ ಚಲವಾದಿ ಸಮಾಜದ ಅಭಿವೃದ್ಧಿ ಹಾಗೂ ಸ್ಥಿತಿಗತಿ ಆಧ್ಯಯನದ ಹಿನ್ನೆಯಲ್ಲಿ ಪಾವಗಡಕ್ಕೆ ಆಗಮಿಸಿ ಚಲವಾದಿ ಸಮಾಜದ ಮುಖಂಡರ ಜತೆ ಚರ್ಚಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
undefined
ಚಲವಾದಿ ಸಮಾಜದ ಶೈಕ್ಷಣಿಕ, ಅರ್ಥಿಕ ಹಾಗೂ ಸಾಮಾಜಿಕವಾಗಿ ಸುಧಾರಣೆ ಕಾಣಬೇಕಿದೆ. ಕಳೆದ ಎರಡು ವಾರಗಳಿಂದ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ ಹಲವು ಛಲವಾದಿ ಸಮಾಜದ ಕಾಲೋನಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಛಲವಾದಿ ಸಮಾಜದ ಇನ್ನೂ ಪ್ರಗತಿ ಕಂಡಿಲ್ಲ. ಬಹುತೇಕ ಬಡವರು ಗುಡಿಸಲು ಮನೆಗಳಲ್ಲಿಯೇ ವಾಸವಿದ್ದಾರೆ. ವ್ಯವಸಾಯ ಮಾಡಲು ಜಮೀನುಗಳಿಲ್ಲ. ಸಮಾಜದ ಪ್ರಗತಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು. ಈ ಬಗ್ಗೆ ಸಂಬಂಧಪಟ್ಟ ಸಚಿವರ ಗಮನ ಸೆಳೆಯಲಾಗಿದೆ ಎಂದರು.
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ವಂಚಿತ ಛಲವಾದಿ ಸಮಾಜಕ್ಕೆ ನ್ಯಾಯ ಸಿಗಬೇಕು. ಎಐಸಿಸಿ ಕೆಪಿಸಿಸಿ ಗಂಭೀರವಾಗಿ ಪರಿಗಣಿಸಿ ಸಮಾಜಕ್ಕೆ ಪ್ರಾಶಸ್ತ್ಯ ನೀಡಬೇಕು. ಚಿತ್ರದುರ್ಗ ಕೋಲಾರ ಈ ಎರಡು ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರಗಳ ಪೈಕಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಛಲವಾದಿ ಸಮುದಾಯವರಿಗೆ ಲೋಕಸಭಾ ಟಿಕೆಟ್ ನೀಡಬೇಕು. ನಾನು ಸಹ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಕೋಲಾರದಲ್ಲಿ ಕೊಟ್ಟರೂ ಪರವಾಗಿಲ್ಲ. ಛಲವಾದಿ ಎಸ್‌ಸಿ, ಎಸ್‌ಟಿ ಹಾಗೂ ಇತರೆ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆಯುವ ಮೂಲಕ ಚುನಾವಣೆಗೆ ಎದುರಿಸಲು ಬದ್ಧನಾಗಿದ್ದೇನೆ. ಅಲ್ಲದೇ ಛಲವಾದಿ ಸಮುದಾಯದ ಯಾರಿಗಾದರೂ ಟಿಕೆಟ್ ನೀಡಲಿ, ಅವರ ಗೆಲುವಿಗೆ ಸಹಕಾರ ನೀಡಿ ಒಮ್ಮತದಿಂದ ಕೆಲಸ ಮಾಡಲು ಸಿದ್ಧರಿದ್ದೇವೆ. ಒಟ್ಟಾರೆ ಛಲವಾದಿ ಸಮುದಾಯಕ್ಕೆ ಎಂಪಿ ಚುನಾವಣೆಯಲ್ಲಿ ಪ್ರಾಶಸ್ತ್ಯ ನೀಡುವಂತೆ ಕೇಂದ್ರ ಮತ್ತು ರಾಜ್ಯ ಕೆಪಿಸಿಸಿ ಹಿರಿಯ ನಾಯಕರಲ್ಲಿ ಮನವಿ ಮಾಡಿರುವುದಾಗಿ ಹೇಳಿದರು.