ಭದ್ರಾ ಮೇಲ್ದಂಡೆ ಯೋಜನೆ ಮಧ್ಯ ಕರ್ನಾಟಕದ ರೈತರ ಪಾಲಿನ ಬರದನಾಡಿನ ಭಗೀರಥ ಯೋಜನೆ. ಸದ್ಯ ಕೋಟೆನಾಡಿಗೆ ಭದ್ರೆ ಹರಿಯುತ್ತಿರೋದಕ್ಕೆ ಅನ್ನದಾತರಲ್ಲಿ ಮಂದಹಾಸ ಮೂಡಿದೆ. ಆದರೆ ಆಂಧ್ರ ಸಿಎಂ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಆಕ್ಷೇಪ ಎತ್ತಿರೋದಕ್ಕೆ ರೈತರು ಆಕ್ರೋಶ ಹೊರಹಾಕಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಫೆ.13): ಭದ್ರಾ ಮೇಲ್ದಂಡೆ ಯೋಜನೆ ಮಧ್ಯ ಕರ್ನಾಟಕದ ರೈತರ ಪಾಲಿನ ಬರದನಾಡಿನ ಭಗೀರಥ ಯೋಜನೆ. ಸದ್ಯ ಕೋಟೆನಾಡಿಗೆ ಭದ್ರೆ ಹರಿಯುತ್ತಿರೋದಕ್ಕೆ ಅನ್ನದಾತರಲ್ಲಿ ಮಂದಹಾಸ ಮೂಡಿದೆ. ಇನ್ನೇನು ರಾಷ್ಟ್ರೀಯ ಯೋಜನೆ ಇವತ್ತಲ್ಲ ನಾಳೆ ಆಗುವ ಸನಿಹ ಇರುವಾಗಲೇ ಪಕ್ಕದ ಆಂಧ್ರ ಸರ್ಕಾರದ ಸಿಎಂ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಆಕ್ಷೇಪ ಎತ್ತಿರೋದಕ್ಕೆ ರೈತರು ಆಕ್ರೋಶ ಹೊರಹಾಕಿದ್ದಾರೆ.
undefined
ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಚಿತ್ರದುರ್ಗ ಜಿಲ್ಲೆಯ ರೈತರು ಸಾಕಷ್ಟು ಹೋರಾಟ ಮಾಡಿದ್ದರು. ಹೆಚ್ಚು ಕಡಿಮೆ ಮೂರು ದಶಕಗಳಿಂದ ಈ ಹೋರಾಟ ನಡೆದಿತ್ತು. ಅದರಂತೆ ರೈತರ ಹೋರಾಟ ಜಾಗೂ ಯೋಜನೆಯ ಲಾಭ ಮನಗಂಡ ಕೇಂದ್ರ ಸರಕಾರ ಬಜೆಟ್ ನಲ್ಲಿ ಮೊನ್ನೆ 5300 ಕೋಟಿ ಮೀಸಲಿರಿಸಿತ್ತು. ಬಜೆಟ್ ವೇಳೆ ಈ ಕೊಡುಗೆಯನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದರು. ಇದಕ್ಕೆ ಚಿತ್ರದುರ್ಗ ಜಿಲ್ಲೆಯ ರೈತರು ಹರ್ಷ ವ್ಯಕ್ತಪಡಿಸಿದ್ದರು.
ಆದರೆ ಈ ಯೋಜನೆ ಅನುಷ್ಠಾನವಾಗಬಾರದು. ಆದರೆ ಆಂಧ್ರಪ್ರದೇಶದ ಕುಡಿಯುವ ನೀರಿಗೆ ಹೊಡೆತ ಬೀಳಲಿದೆ. ಹಾಗಾಗಿ ಕೇಂದ್ರಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು ಸುಪ್ರಿಂ ಕೋರ್ಟಿನಲ್ಲಿ ದಾವೆ ಹೂಡುವುದಾಗಿ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಹೇಳಿರುವ ಬೆನ್ನಲ್ಲೇ ಚಿತ್ರದುರ್ಗ ರೈತರು ಇಂದು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಕೇಂದ್ರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೂ ಆಂಧ್ರದ ಕ್ಯಾತೆ: ಕರ್ನಾಟಕದ ಯೋಜನೆ ವಿರುದ್ಧ ಸುಪ್ರೀಂಕೋರ್ಟ್ ಮೊರೆ..!
ಈಗಾಗಲೇ ಆಂಧ್ರಪ್ರದೇಶಕ್ಕೆ ಕರ್ನಾಟಕದ ಟಿಬಿ ಡ್ಯಾಂನಿಂದ ಸಾಕಷ್ಟು ಅನುಕೂಲವಿದೆ. ಚಿತ್ರದುರ್ಗ ಬಯಲು ಸೀಮೆ ಜಿಲ್ಲೆ. ಇಂತಹದ್ದರಲ್ಲಿ ಕಳೆದ ಎರಡೂವರೆ ದಶಕಗಳಿಂದ ಮಾಡಿಕೊಂಡು ಬಂದ ಹೋರಾಟದ ಫಲವಾಗಿ ಕೇಂದ್ರ ಯೋಜನೆ ಘೋಷಿಸಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ದಾವಣಗೆರೆಯ ಜಗಳೂರು, ಚಿತ್ರದುರ್ಗದ ಎಲ್ಲ ತಾಲೂಕುಗಳು ಸಹ ನೀರಿನ ಬವಣೆಯಿಂದ ಬಚಾವಾಗಿ, ಉಳುಮೆಗೂ ಅನುಕೂಲವಾಗಲಿದೆ. ಆದರೆ
ಈಗ ವರಾತ ತೆಗೆದಿರುವ ಜಗನ್ಮೋಹನ್ ರೆಡ್ಡಿ ಅವರ ನಡೆ ಸರಿಯಾದುದಲ್ಲ. ಈ ಬಗ್ಗೆ ಕೋರ್ಟ್ ಗೆ ಸಹ ವಸ್ತುಸ್ಥಿತಿ ತಿಳಿಸುವ ಕೆಲಸ ಮಾಡಲಿದ್ದೇವೆ ಎಂಬುದು ಚಿತ್ರದುರ್ಗ ಜಿಲ್ಲೆಯ ರೈತ ಮುಖಂಡರ ಅಭಿಪ್ರಾಯ.
Upper Bhadra Project: ತಿಪ್ಪಾರೆಡ್ಡಿ ಕೋಟ್ಯಂತರ ರು. ಕಮಿಷನ್?: ತನಿಖೆಗೆ ಬಿ.ಕಾಂತರಾಜ್ ಆಗ್ರಹ
ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರ ಸರಕಾರ ಯೋಚಿಸಿದೆ ಎನ್ನಲಾಗುತ್ತಿದೆ. ಅದಕ್ಕೂ ಮೊದಲು ಬಜೆಟ್ಟಿನಲ್ಲಿ 5300 ಕೋಟಿ ರೂಪಾಯಿಗಳನ್ನು ಸಹ ಮೀಸಲಿರಿಸಿದೆ. ಈಗ ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಈ ಯೋಜನೆಯ ಕುರಿತು ವರಾತ ತೆಗೆದಿರುವುದು ಕೋಟೆ ನಾಡಿನ ರೈತರನ್ನು ಕೆರಳಿಸಿದೆ.