ಚಿತ್ರದುರ್ಗ: ಯುವಕನ ಕಿಡ್ನಾಪ್‌ ಮಾಡಿ ಗುಪ್ತಾಂಗ ಕತ್ತರಿಸಿದ ಮಂಗಳಮುಖಿಯರು!

Published : Oct 10, 2026, 08:14 AM IST
Chitradurga challakere transgenders

ಸಾರಾಂಶ

ಚಿತ್ರದುರ್ಗದಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ಯುವಕನನ್ನು ಮಂಗಳಮುಖಿಯರು ಕಿಡ್ನಾಪ್ ಮಾಡಿ ಬಲವಂತವಾಗಿ ಗುಪ್ತಾಂಗ ಆಪರೇಷನ್ ಮಾಡಿಸಿದ್ದಾರೆ. ದಾವಣಗೆರೆಯಲ್ಲಿ ಈ ಕೃತ್ಯವೆಸಗಿ, ಚಿತ್ರಹಿಂಸೆ ನೀಡಿದ್ದಲ್ಲದೆ, ಆಪರೇಷನ್ ಖರ್ಚು 3 ಲಕ್ಷ ರೂ. ನೀಡುವಂತೆ ಯುವಕನ ಮನೆಬಳಿ ಬಂದು ಗಲಾಟೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಳ್ಳಕೆರೆ (ಅ.10): ತಾಲೂಕಿನ ಪರಶುರಾಂಪುರ ಹೋಬಳಿಯ ಗ್ರಾಮವೊಂದರ ಯುವಕನನ್ನು ಚಿತ್ರದುರ್ಗದ ಕೆಲವು ಮಂಗಳಮುಖಿಯರು ಕಿಡ್ನಾಪ್ ಮಾಡಿ ಗುಪ್ತಾಂಗ ಅಪರೇಷನ್ ಮಾಡಿಸಿ ವಿಕೃತ ಕ್ರೌರ್ಯ ಮೆರೆದಿರುವ ಆರೋಪ ಕೇಳಿ ಬಂದಿದೆ.

ಹಳ್ಳಿಯಿಂದ ಹೋಗಿ ಚಿತ್ರದುರ್ಗದಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ಯುವಕ ಅದ್ಹೇಗೋ ಮಂಗಳಮುಖಿಯರಿಗೆ ಪರಿಚಯವಾಗಿದ್ದಾನೆ. ಇಂತಹ ಪರಿಚಯವನ್ನೆ ಬಂಡವಾಳ ಮಾಡಿಕೊಂಡು ಬಲವಂತದಿಂದ ಗುಪ್ತಾಂಗ ಆಪರೇಷನ್ ಮಾಡಿಸಿದ್ದಾರೆ. ಇದರಿಂದಾಗಿ ಯುವಕ ಚಿತ್ರಹಿಂಸೆ ಅನುಭವಿಸುತ್ತಿದ್ದಾನೆ ಎಂದು ಕುಟುಂಬಸ್ಥರು ಆತಂಕಗೊಂಡಿದ್ದಾರೆ.

ಕಾಲಿನ ತೊಡೆಗಳಿಗೆ ಬಿಸಿ ನೀರು ಹಾಕಿ, ಸುಟ್ಟು ಬರೆ ಎಳೆದು ಚಿತ್ರಹಿಂಸೆ ನೀಡಿರುವುದು ಯುವಕನ ಪೋಟೋಗಳನ್ನು ನೋಡಿದರೆ ಯುವಕನ ಯಾತನೆ ಅರ್ಥವಾಗುತ್ತದೆ. ಪರಶುರಾಂಪುರ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು ಯುವಕನ ನರಳಾಟ ಹೇಳ ತೀರದಾಗಿದೆ. ಮಂಗಳಮುಖಿಯರ ಕೃತ್ಯ ಕಂಡು ಕಣ್ಣಿರಿಡುತ್ತಿರುವ ಯುವಕನ ಪೋಷಕರು ದಾರಿ ತೋಚದಂತಹ ಸ್ಥಿತಿಯಲ್ಲಿದ್ದಾರೆ.

ಚಿತ್ರದುರ್ಗದ ಇಬ್ಬರು ಮಂಗಳಮುಖಿರು ಸೆ.1ರಂದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಒಮ್ನಿ ಕಾರಲ್ಲಿ ದಾವಣಗೆರೆಗೆ ಕರೆದೊಯ್ದು ಮತ್ತು ಬರಿಸಿ ಆಪರೇಷನ್ ಮಾಡಿಸಿರುವ ಬಗ್ಗೆ ಯುವಕ ಭಯದಿಂದಲೇ ಹೇಳಿದ್ದಾನೆ.

ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಗುಪ್ತಾಂಗ ಆಪರೇಷನ್ ಮಾಡಿಸಿದ ಮೇಲೆ ಕಾದ ಬಿಸಿನೀರು ಗಾಯದ ಮೇಲೆ ಹಾಕಿದ ಬಳಿಕ ಯುವಕ ಚಿತ್ರಹಿಂಸೆಗೊಂಡು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಸ್ವಗ್ರಾಮಕ್ಕೆ ಬಂದಿದ್ದಾನೆ. ಮನೆಯಲ್ಲಿ ಪೋಷಕರಿಗೆ ಎಲ್ಲವನ್ನೂ ವಿವರಿಸಿದ್ದಾನೆ ಯುವಕ. ಮರ್ಯಾದೆಗೆ ಅಂಜಿ ಪೋಷಕರು ತಮ್ಮ ನೋವನ್ನು ಅದುಮಿಟ್ಟುಕೊಂಡಿದ್ದಾರೆ. ತಪ್ಪಿಸಿಕೊಂಡು ಊರಿಗೆ ಹೋಗಿರುವುದನ್ನು ಖಚಿತ ಪಡಿಸಿಕೊಂಡು ಮಂಗಳಮುಖಿಯರು ಗ್ರಾಮಕ್ಕೆ ಬಂದು ಯುವಕನ ಮನೆಯ ಮುಂದೆ ಗಲಾಟೆ ಮಾಡಿದ್ದಾರೆ. ಆಫರೇಷನ್ ಮಾಡಿಸಲು ಮೂರು ಲಕ್ಷ ಹಣ ಖರ್ಚಾಗಿದೆ ಕೊಡಿ ಎಂದು ತಗಾದೆ ತೆಗೆದಿದ್ದಾರೆ. ಇದಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ ಅಸಭ್ಯ ವರ್ತನೆಯನ್ನೂ ಮಾಡಿ ಹೋದ ಮೇಲೆ ಈ ವಿಷಯ ಬೆಳೆಕಿಗೆ ಬಂದಿದೆ.

ಇದೀಗ ಪರಶುರಾಂಪುರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನಿಗೆ ಹೆಚ್ಚಿನ ಚಿಕಿತ್ಸೆ ಬೇಕು ಎಂಬ ಅಭಿಪ್ರಾಯವನ್ನು ಪ್ರತ್ಯಕ್ಷ ದರ್ಶಿಗಳು ವ್ಯಕ್ತಪಡಿಸುತ್ತಾರೆ. ಪರಶುರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

PREV
Read more Articles on
click me!

Recommended Stories

KSRTC Smart Card: ಇನ್ಮುಂದೆ ರಾಜ್ಯದ ಸರ್ಕಾರಿ ಬಸ್‌ಗಳಿಗೂ ಮೆಟ್ರೋ ರೀತಿ ಸ್ಮಾರ್ಟ್‌ಕಾರ್ಡ್‌! ಹೇಗೆ ರೀಚಾರ್ಜ್ ಮಾಡುವುದು?
Bengaluru: ಮನೆ ಮುಂದೆ ವಾಹನ ನಿಲ್ಲಿಸುವ ಮುನ್ನ ಈ ಹೊಸ ನಿಯಮ ತಿಳಿಯಿರಿ! ಸಂಚಾರ ದಟ್ಟಣೆ ನಿಯಂತ್ರಣ