ಉತ್ತರಕನ್ನಡ‌: ಸುಸಜ್ಜಿತ ಆಸ್ಪತ್ರೆಗೆ ಮಕ್ಕಳ ಬೇಡಿಕೆ

By Girish GoudarFirst Published Nov 2, 2023, 1:00 AM IST
Highlights

ಕಾರವಾರದ ಹಿಂದು ಹೈಸ್ಕೂಲಿನ ಮಕ್ಕಳು ಕನ್ನಡ ಹಾಡುಗಳಿಗೆ ನೃತ್ಯ ಮಾಡುವಾಗ ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಅಗತ್ಯವಿದೆ ಎಂದು ಬ್ಯಾನರ್ ಪ್ರದರ್ಶಿಸುವ ಮೂಲಕ ಆಸ್ಪತ್ರೆ ಬೇಕು ಎಂದು ಸಚಿವರ ಮುಂದೆ ಮನವಿ ಮಾಡಿಕೊಂಡರು. 

ಉತ್ತರಕನ್ನಡ‌(ನ.02):  ಉತ್ತರಕನ್ನಡ‌ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವ ಆಗ್ರಹ ಹಿಂದಿನಿಂದ ಇದೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಮಕ್ಕಳ ನೃತ್ಯದಲ್ಲಿ ಕೂಡ ಸುಸಜ್ಜಿತ ಆಸ್ಪತ್ರೆ ಅಗತ್ಯವಿದೆ ಎಂದು ಬ್ಯಾನರ್ ಪ್ರದರ್ಶಿಸುವ ಮೂಲಕ ಸಚಿವರ ಮುಂದೆ ವಿಭಿನ್ನವಾಗಿ ಬೇಡಿಕೆ ಇಡುವ ಕಾರ್ಯ ಮಾಡಲಾಗಿದೆ.

ಹೌದು, 50ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯಿತು. ಧ್ವಜಾರೋಹಣ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೈದಾನದಲ್ಲಿ ಗಣ್ಯರ ಮುಂದೆ ನಡೆಯಿತು. ಕಾರವಾರದ ಹಿಂದು ಹೈಸ್ಕೂಲಿನ ಮಕ್ಕಳು ಕನ್ನಡ ಹಾಡುಗಳಿಗೆ ನೃತ್ಯ ಮಾಡುವಾಗ ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಅಗತ್ಯವಿದೆ ಎಂದು ಬ್ಯಾನರ್ ಪ್ರದರ್ಶಿಸುವ ಮೂಲಕ ಆಸ್ಪತ್ರೆ ಬೇಕು ಎಂದು ಸಚಿವರ ಮುಂದೆ ಮನವಿ ಮಾಡಿಕೊಂಡರು. 

ಲೋಕಸಭೆ ಚುನಾವಣೆ ಸತ್ಯ-ಸುಳ್ಳಿನ ನಡುವಿನ ಹೋರಾಟ: ಸಚಿವ ಎಚ್.ಕೆ.ಪಾಟೀಲ್

ವಿದ್ಯಾರ್ಥಿಗಳು ನೃತ್ಯದ ವೇಳೆ ಸುಸಜ್ಜಿತ ಆಸ್ಪತ್ರೆ ಬೇಕು ಎಂದು ಬ್ಯಾನರ್ ಪ್ರದರ್ಶಿಸಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ್ ಸೈಲ್ ಹಾಗೂ ಅಧಿಕಾರಿಗಳ ಮುಂದೆ ಮಕ್ಕಳು ಮನವಿ ಮಾಡಿಕೊಂಡರು‌. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ವೈದ್ಯ, ಆಸ್ಪತ್ರೆ ಮಾಡುವುದು ಶತಃಸಿದ್ಧ ಎಂದು ಪ್ರತಿಕ್ರಿಯಿಸಿದ್ದಾರೆ. 

click me!