ರಾಜ್ಯಾದ್ಯಂತ ಮೆದುಳು ಜ್ವರ ನಿರೋಧಕ ಶಕ್ತಿಯಾಗಿ ಕೆಲಸ ಮಾಡಲು ಜೆಇ ಲಸಿಕೆಯನ್ನು ನೀಡುತ್ತಿದ್ದು 10 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಮಧುಗಿರಿಯಲ್ಲಿ ನಡೆದಿದೆ.
ಮಧುಗಿರಿ (ಡಿ.07): ರಾಜ್ಯಾದ್ಯಂತ ಮೆದುಳು ಜ್ವರ ನಿರೋಧಕ ಶಕ್ತಿಯಾಗಿ ಕೆಲಸ ಮಾಡಲು ಜೆಇ ಲಸಿಕೆಯನ್ನು ನೀಡುತ್ತಿದ್ದು 10 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಮಧುಗಿರಿಯಲ್ಲಿ ನಡೆದಿದೆ.
ಪಟ್ಟಣದ ಎಂಜಿಎಂ ಬಾಲಕಿಯರ ಪ್ರೌಢ ಶಾಲೆಯ ಮಕ್ಕಳು (Children) ಅಸ್ವಸ್ಥಗೊಂಡಿದ್ದು ಕೂಡಲೇ ಸಾರ್ವಜನಿಕ ಗೆ (Hospital) ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ವಿಷಯ ತಿಳಿದು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎಂ.ವಿ.ವೀರಭದ್ರಯ್ಯ ಮಕ್ಕಳ ಆರೋಗ್ಯ ವಿಚಾರಿಸಿದರು. ಪ್ರತಿ ಮಕ್ಕಳನ್ನು ಪ್ರತ್ಯೇಕವಾಗಿ ಮಾತನಾಡಿಸಿದ ಶಾಸಕರು ಯಾವುದೇ
ಸಮಸ್ಯೆಯಾಗಲ್ಲ. ಎಲ್ಲರೂ ಧೈರ್ಯವಾಗಿರಿ ಎಂದು ಆತ್ಮವಿಶ್ವಾಸ ತುಂಬಿದರು. ನಂತರ ತಜ್ಞರ ಜೊತೆ ಸಮಾಲೋಚಿಸಿ ಯಾವುದೇ ಸಮಸ್ಯೆಯಾಗದಂತೆ ಮುಂದಿನ ಕ್ರಮವಹಿಸಲು ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಮಾತನಾಡಿದರು. ಈ ಸಂದರ್ಭದಲ್ಲಿ ಲಸಿಕೆ ಅಭಿಯಾನದ ಆರ್‌ಸಿಎಚ್‌ಡಿ ಕೇಶವರಾವ್, ಟಿಎಚ್‌ಓ ಡಾ.ರಮೇಶ್‌ಬಾಬು, ವೈದ್ಯಾಧಿಕಾರಿ ಸಂತೋಷ್ ಸಿಂಗ್, ಬಿಇಓ ಕೃಷ್ಣಪ್ಪ, ಬಿಆರ್‌ಸಿ ಹನುಮಂತರಾಯಪ್ಪ, ಶಾಲಾ ಸಮಿತಿ ಕಾರ್ಯದರ್ಶಿ ಶಂಕರನಾರಾಯಣ್, ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ, ಹಾಗೂ ಇತರರು ಇದ್ದರು.
..26 ಸಾವಿರ ಮಕ್ಕಳಿಗೆ ಜೆಇ ಲಸಿಕೆ ಗುರಿ: ಡಾ.ಸುಪ್ರಿಯಾ
ತುರುವೇಕೆರೆ : ತಾಲೂಕಿನಲ್ಲಿ ಸುಮಾರು 26 ಸಾವಿರ ಮಕ್ಕಳಿಗೆ ಜಪಾನೀಸ್ ಎನ್‌ಸೆಫಲೈಟಿಸ್ (ಜೆಇ) ಲಸಿಕೆಯನ್ನು ಹಾಕುವ ಗುರಿಯನ್ನು ಹೊಂದಲಾಗಿದೆ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ತಾಲೂಕು ವೈದ್ಯಾಧಿಕಾರಿ ಡಾ.ಸುಪ್ರಿಯಾ ತಿಳಿಸಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಜೆಇ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಎಲ್ಲಾ ಮಕ್ಕಳಿಗೂ ಅವರ ಶಾಲೆಯಲ್ಲೇ ಲಸಿಕೆ ಹಾಕಿಸುವ ಕಾರ್ಯ ಮಾಡಲಾಗಿದೆ. 330 ಶಾಲೆಗಳು, 375 ಅಂಗನವಾಡಿ ಕೇಂದ್ರಗಳಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲಸಿಕೆ ಹಾಕಲು 69 ಸಿಬ್ಬಂದಿ, 178 ಆಶಾ ಕಾರ್ಯಕರ್ತರು, ಮೇಲ್ವಿಚಾರಕರಾಗಿ 18 ಮಂದಿಯ ಸೇವೆಯನ್ನು ಪಡೆಯಲಾಗಿದೆ. ಈ ದಿನ ಪಟ್ಟಣದಲ್ಲಿ ಒಟ್ಟು 3,739 ಶಾಲಾ ಮಕ್ಕಳಿಗೆ ಜೆಇ ಲಸಿಕೆಯನ್ನು ಹಾಕುವ ಮೂಲಕ ಶೇ.88ರಷ್ಟುಗುರಿ ಸಾಧಿಸಲಾಗಿದೆ ಎಂದು ಡಾ.ಸುಪ್ರಿಯಾ ತಿಳಿಸಿದ್ದಾರೆ.
ತಹಸೀಲ್ದಾರ್ ವೈ. ರೇಣುಕುಮಾರ್ ಮಾತನಾಡಿ, ಪ್ರತಿ ಮಕ್ಕಳೂ ಜೆಇ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಮೆದುಳು ಜ್ವರವನ್ನು ದೂರ ಮಾಡಬೇಕು. ಪೋಷಕರು ಇದರ ಸದುಪಯೋಗವನ್ನು ಪಡೆದುಕೊಂಡು ತಮ್ಮ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಬೇಕೆಂದರು.
ಜಿಲ್ಲಾ ಮಲೇರಿಯಾಧಿಕಾರಿ ಹಾಗೂ ನೋಡಲ್ ಅಧಿಕಾರಿಗಳಾದ ಡಾ. ಪುರುಷೋತ್ತಮ್ ಲಸಿಕಾ ತಂಡಗಳನ್ನು ಪರಿವೀಕ್ಷಿಸಿದರು. ಆ ಸಂದರ್ಭದಲ್ಲಿ ಸೂಕ್ತ ಸಲಹೆಗಳನ್ನು ನೀಡಿ ಮಕ್ಕಳಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಶೇಖರ್, ಬಿ.ಆರ್.ಸಿ ವೀಣಾ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಲಕ್ಷ್ಮಣ್ ಕುಮಾರ್, ಪಟ್ಟಣ ಪಂಚಾಯ್ತಿ ಸದಸ್ಯ ಚಿದಾನಂದ್, ಡಾ. ಉಪೇಂದ್ರ, ಡಾ. ವಿಂದ್ಯ, ಸಿ.ಎಚ್.ಒ. ತಸ್ಮಿಯ, ಮೇಘ, ಆರ್‌ಬಿಎಸ್‌ಕೆ. ರೇಖಾ, ಪುಷ್ಪ, ಎಚ್‌ಬಿಒ ಮಂಜೇಗೌಡ, ಶರತ್, ಗಿಡ್ಡೇಗೌಡ, ಮುಖ್ಯೋಪಾಧ್ಯಾಯ ಟಿ.ಎನ್. ಸತೀಶ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ರಾಜ್ಯಾದ್ಯಂತ ಮೆದುಳು ಜ್ವರ ನಿರೋಧಕ ಶಕ್ತಿಯಾಗಿ ಕೆಲಸ ಮಾಡಲು ಜೆಇ ಲಸಿಕೆಯನ್ನು ನೀಡುತ್ತಿದ್ದು 10 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಮಧುಗಿರಿಯಲ್ಲಿ ನಡೆದಿದೆ.
ಪಟ್ಟಣದ ಎಂಜಿಎಂ ಬಾಲಕಿಯರ ಪ್ರೌಢಶಾಲೆಯ ಮಕ್ಕಳು ಅಸ್ವಸ್ಥಗೊಂಡಿದ್ದು ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ವಿಷಯ ತಿಳಿದು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎಂ.ವಿ.ವೀರಭದ್ರಯ್ಯ ಮಕ್ಕಳ ಆರೋಗ್ಯ ವಿಚಾರಿಸಿದರು.