ಕೊರೋನಾ ಆತಂಕ: ಸಿದ್ಧಗಂಗಾ ಮಠ ಖಾಲಿ ಖಾಲಿ, ಮನೆಗೆ ಹೊರಟುನಿಂತ ಮಕ್ಕಳು

Suvarna News   | Asianet News
Published : Mar 14, 2020, 08:50 AM ISTUpdated : Mar 14, 2020, 03:52 PM IST
ಕೊರೋನಾ ಆತಂಕ: ಸಿದ್ಧಗಂಗಾ ಮಠ ಖಾಲಿ ಖಾಲಿ, ಮನೆಗೆ ಹೊರಟುನಿಂತ ಮಕ್ಕಳು

ಸಾರಾಂಶ

ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಏಳನೇ ತರಗತಿ ಹೊರತು ಪಡಿಸಿ ಉಳಿದ ಮಕ್ಕಳು ಮನೆಯತ್ತ ಮುಖ ಮಾಡಿದ್ದಾರೆ.  

ತುಮಕೂರು(ಮಾ.14): ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಏಳನೇ ತರಗತಿ ಹೊರತು ಪಡಿಸಿ ಉಳಿದ ಮಕ್ಕಳು ಮನೆಯತ್ತ ಮುಖ ಮಾಡಿದ್ದಾರೆ.

"

ರಾಜ್ಯದಲ್ಲಿ ಕೊರೊನಾ ಹರಡುವ ಭೀತಿಯಿಂದ ಈಗಾಗಲೇ ರಾಜ್ಯ ಸರ್ಕಾರ ಒಂದು ವಾರ ಬಂದ್ ಘೋಷಣೆ ಮಾಡಿದ್ದು, ಸಿದ್ದಗಂಗಾ ಮಠದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳನ್ನು ಊರಿಗೆ ಕಳುಹಿಸಲಾಗಿದೆ.

ಕೊರೋನಾಗೆ 1 ವಾರ ಅಘೋಷಿತ ಕರ್ನಾಟಕ ಬಂದ್ : ಏನೇನು ಇರಲ್ಲ..?

ನಾಳೆಯಿಂದ ಮಕ್ಕಳನ್ನು ಮಠದಿಂದ ಮನೆಗೆ ಕಳುಹಿಸಲು ನಿರ್ಧಾರ ಮಾಡಲಾಗಿದ್ದು, ಎಸ್.ಎಸ್.ಎಲ್.ಸಿ ಹಾಗೂ 7ನೇ ತರಗತಿ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಎಲ್ಲಾ ಮಕ್ಕಳನ್ನು ವಾಪಸ್ ಕಳುಹಿಸಲು ತೀರ್ಮಾನಿಸಲಾಗಿದೆ.

ಮಠದಲ್ಲಿ 10 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮಠದಲ್ಲಿರುವ ಅಂಗಡಿಗಳನ್ನು ಮುಚ್ಚಲು ನಿರ್ಧಾರ ಮಾಡಿದ್ದು, ಮಠಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಕೆಲ ಪೋಷಕರು ಸ್ವಪ್ರೇರಣೆಯಿಂದ ಮಕ್ಕಳನ್ನು ವಾಪಸ್ ಕರೆದುಕೊಂಡು ಹೋಗುತ್ತಿದ್ದಾರೆ.

PREV
click me!

Recommended Stories

ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!
ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!