
ಚಿಕ್ಕಮಗಳೂರು (ಅ.25): ಸ್ನೇಹಿತೆಯ ಎಂಗೇಜ್‌ಮೆಂಟ್ ನೋಡುವ ಸಲುವಾಗಿ ಬೆಂಗಳೂರಿನಿಂದ ಬಂದಿದ್ದ ಸ್ನೇಹಿತೆ, ನಿಶ್ಚಿತಾರ್ಥದ ಹಿಂದಿನ ದಿನವೇ ಹೋಮ್‌ಸ್ಟೇಯಲ್ಲಿ ಅನುಮಾನಾಸ್ಪದವಾಗಿ ಸಾವು ಕಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಹೋಮ್‌ಸ್ಟೇಯ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು 27 ವರ್ಷದ ರಂಜಿತಾ ಹೆಸರಿನ ಯುವತಿ ಸಾವು ಕಂಡಿದ್ದಾಳೆ.
ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದ ಖಾಸಗಿ ಹೋಂ ಸ್ಟೇಯಲ್ಲಿ ಘಟನೆ ನಡೆದಿದೆ. ಮೂಲತಃ ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ಯುವತಿ ಎನ್ನಲಾಗಿದ್ದು, ಭಾನುವಾರ ಸ್ನೇಹಿತೆಯ ಎಂಗೇಜ್‌ಮೆಂಟ್ ಇದ್ದ ಕಾರಣಕ್ಕಾಗಿ ಬೆಂಗಳೂರಿನಿಂದ ಬಂದಿದ್ದಳು ಎನ್ನಲಾಗಿದೆ.
ಎಂಎಸ್ಸಿ ಪದವೀಧರೆಯಾಗಿರುವ ರಂಜಿತಾ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದರು. ಸ್ನೇಹಿತೆಯ ಎಂಗೇಜ್ ಮೆಂಟ್‌ಗಾಗಿ ರೇಖಾ ಹಾಗೂ ರಂಜಿತಾ ಹೋಂ ಸ್ಟೇಗೆ ಬಂದಿದ್ದರು. ಇಂದು ಸ್ನಾನಕ್ಕೆ ಹೋದಾಗ ಬಾತ್ ರೂಂನಲ್ಲಿ ಕುಸಿದು ಬಿದ್ದು ಸಾವು ಎಂದು ರೇಖಾ ದೂರು ನೀಡಿದ್ದಾರೆ.
ಇದರ ನಡುವೆ ರಂಜಿತಾ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಗೀಸರ್ ನಲ್ಲಿ ಅನಿಲ ಸೋರಿಕೆಯಿಂದ ಆಕೆ ಸಾವನ್ನಪ್ಪಿದ್ದಾರೆಯೇ ಎನ್ನುವ ಪ್ರಶ್ನೆ ವ್ಯಕ್ತವಾಗಿದೆ. ಹೃದಯಾಘಾತವೋ... ಅನಿಲ ಸೋರಿಕೆಯಿಂದ ಸಾವೋ ಎನ್ನುವುದು ಸ್ಪಷ್ಟವಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.