ಅಮೆರಿಕಾದ ಮೋದಿ ಅರೈವಲ್ ಸೆರಮನಿಯಲ್ಲಿ ಚಿಕ್ಕಮಗಳೂರ ಹಳ್ಳಿ ಹೈದ!

By Suvarna News  |  First Published Jun 21, 2023, 10:08 PM IST

ಚಿಕ್ಕಮಗಳೂರಿನ ಅವೇಜ್ ಅಹಮದ್ ಅಮೇರಿಕಾದಲ್ಲಿ ನಡೆಯುವ ಮೋದಿ ಅರೈವಲ್ ಸೆರಮನಿಯಲ್ಲಿ ಭಾಗಿಯಾಗಲಿದ್ದಾರೆ. 


ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜೂ.21): ಕಾಫಿನಾಡ ಕಣ್ಮಣಿ ಎಂದು ಬಿರುದು ಪಡೆದಿರುವ ಚಿಕ್ಕಮಗಳೂರಿನ ಅವೇಜ್ ಅಹಮದ್ ನಾಳೆ ಅಮೇರಿಕಾದಲ್ಲಿ ನಡೆಯುವ ಮೋದಿ ಅರೈವಲ್ ಸೆರಮನಿಯಲ್ಲಿ ಭಾಗಿಯಾಗಲಿದ್ದಾರೆ. ಆ ಕ್ಷಣವನ್ನ ಕಣ್ತುಂಬಿಕೊಳ್ಳಲು ಕುಟುಂಬಸ್ಥರಲ್ಲಿ ಎದುರು ನೋಡುತ್ತಿದ್ದಾರೆ. ಅವೇಜ್ ಜಸ್ಟ್ 25 ವರ್ಷದ ಯುವಕ. ಹಳ್ಳಿಯಲ್ಲಿ ಹುಟ್ಟಿ, ಗಲ್ಲಿಯಲ್ಲಿ ಬೆಳ್ದೋನು. ಅಸಾಮಾನ್ಯ ತಲೆಯ ಆ ಯುವಕ ಅಸಂಖ್ಯಾತ ಕನಸು ಕಂಡಿದ್ದ. ವಿಜ್ಞಾನಿ ಆಗ್ತೀನಿ, ವಿಜ್ಞಾನಿ ಅಂತಿದ್ದ. ಕೊನೆಗೊಂದ್ ದಿನ ವಿಜ್ಞಾನಿ ಆಗೇಬಿಟ್ಟ. ಕಡಲ ದಾಟಿ ಉಪಗ್ರಹ ಉಡಾಯಿಸಿ ದೇಶಕ್ಕೂ ಕೀರ್ತಿ ತಂದ. ರೈತರ ಬಾಳಿಗೂ ಬೆಳಕಾದ. ಇದೀಗ ಅಮೇರಿಕಾದ ವಾಷಿಂಗ್ಟನ್‌ನಲ್ಲಿ ಮೋದಿ ಅರೈವಲ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.  

Tap to resize

Latest Videos

undefined

ಮೋದಿ ಅರೈವಲ್ ಸೆರಮನಿಯಲ್ಲಿ ಚಿಕ್ಕಮಗಳೂರ ಹಳ್ಳಿ ಹೈದ  
ಅವೇಜ್ ಅಹಮದ್ ಕಾಫಿನಾಡ ಕಣ್ಮಣಿ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ನಿವಾಸಿ. ಇವ್ನಿಗೆ ಚಿಕ್ಕಂದಿನಿಂದ ಸೈಟಿಂಸ್ಟ್ ಆಗಬೇಕೆಂಬ ಬಯಕೆ. ಇಂದು ತಾನೊಬ್ಬ ಫೇಮಸ್ ಸೈಟಿಂಸ್ಟ್ ಆಗಿದ್ದಾರೆ. ತನ್ನ 25ನೇ ವಯಸ್ಸಿಗೆ ಕಡಲ ದಾಟಿ ಉಪಗ್ರಹವನ್ನ ಹಾರಿಸಿ ಹೊಸ ಮೈಲಿಗಲ್ಲು ಸೃಷ್ಠಿಸಿದ್ದಾರೆ. ಈ ವಯಸ್ಸಲ್ಲಿ ಅಮೆರಿಕದ ಸ್ಪೇಸ್ ಏಕ್ಸ್ನಿಂದ ಶಕುಂತಲಾ ಎಂಬ ಉಪಗ್ರಹವೊಂದನ್ನ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಹಾರಿಸಿದ್ದಾನೆ. ಬೇರೆಲ್ಲಾ ಉಪಗ್ರಹಗಳಿಗಿಂತ ಹಳ್ಳಿ ಹೈದನ ಈ ಶಕುಂತಲಾ ಉಪಗ್ರಹ ಶೇಕಡ 50ಕ್ಕಿಂತ ಹೆಚ್ಚು ಡೇಟಾವನ್ನ ಬಿಡುಗಡೆ ಮಾಡುತ್ತೆ. ಭೂಮಿಯ ಚಲನವಲನದ ಪೋಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತೆ. ಎಳೆ ವಯಸ್ಸಲ್ಲೇ ಮಗನ ಸಾಧನೆ ಕಂಡು ಅವೇಜ್ ಅಪ್ಪ ನದೀಮ್ ಮಗನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಇಂದಿನ ಮೋದಿ ಅರೈವಲ್ ಕಾರ್ಯಕ್ರಮದಲ್ಲಿ ಮಗನ ನೋಡಲು ಉತ್ಸುಕರಾಗಿದ್ದಾರೆ.

ಬರಿದಾದ ಭಾಗಮಂಡಲ ತ್ರಿವೇಣಿ ಸಂಗಮ, ಪಿಂಡ ಪ್ರದಾನಕ್ಕೂ ನದಿಯಲ್ಲಿ ನೀರಿಲ್ಲ!

ಆ ಕ್ಷಣವನ್ನ ಕಣ್ತುಂಬಿಕೊಳ್ಳಲು ಕುಟುಂಬಸ್ಥರಲ್ಲಿ ಸಂತಸ : 
ಅವೇಜ್ ತಂದೆ ನದೀಮ್ ಆಲ್ದೂರಿನಲ್ಲಿ ಮೆಡಿಕಲ್ ಸ್ಟೋರ್ ಇಟ್ಟುಕೊಂಡಿದ್ದಾರೆ. ಆಲ್ದೂರಿನ ಗಲ್ಲಿಯಲ್ಲಿ ಓಡಾಡ್ಕೊಂಡಿದ್ದ ಹುಡ್ಗ ಇಂದು ಜಗತ್ತನ್ನೇ ಭಾರತದತ್ತ ತಿರುಗಿಸಿದ್ದಾನೆ. ಪೋಷಕರು ನೀನು ಇದೇ ಆಗಬೇಕೆಂದು ಎಂದೂ ಒತ್ತಡ ಹೇರಿರಲಿಲ್ಲ. ನಿನಗೆ ಇಷ್ಟ ಬಂದದ್ದು ಓದು ಎಂದು ಫ್ರಿಯಾಗಿ ಬಿಟ್ಟಿದ್ದಕ್ಕೆ ಇಂದು ದೇಶದ ಹೆಮ್ಮೆಯ ಮಗನಾಗಿದ್ದಾನೆ. ಪಿಲಾನಿ, ಗೋವಾ ಯುನಿವರ್ಸಿಟಿಯಲ್ಲಿ ಓದಿದ ಈ ಯುವಕ ಇಂದು ಏರೋಸ್ಪೆಸ್ ಪಿಕ್ಸಲ್ ಅನ್ನೋ ಉಪಗ್ರಹ ತಯಾರಿಕಾ ಸ್ವಂತ ಕಂಪೆನಿಯನ್ನೂ ತೆರೆದಿದ್ದಾನೆ.

Yadgiri: ಕಳೆದು ಹೋದ ಹಣ ವಾರಸುದಾರರಿಗೆ ಮರಳಿಸಿದ ಪೋಲಿಸ್ ಕಾನ್ಸ್ ಟೇಬಲ್,

ಮೊದಲು ರಷ್ಯಾದಿಂದ ಉಪಗ್ರಹ ಉಡಾವಣೆಗೆ ಸಿದ್ದತೆ ನಡೆದಿತ್ತಾದ್ರು, ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿ ತನ್ನ ಕನಸಿನ ಯೋಜನೆಯನ್ನ ದೇಶದ ದೊರೆಯ ಮುಂದಿಟ್ಟಿದ್ದ. ಇದೀಗ ಜಗತ್ತಿನ ಗಮನ ಸೆಳೆದಿರುವ ಅವೇಜ್ ಇಂದು ಅಮೇರಿಕಾದ ವಾಷಿಂಗ್‌ನಲ್ಲಿ ಮೋದಿ ಅರೈವಲ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾಗಲಿದ್ದಾನೆ. ಆ ಕ್ಷಣವನ್ನ ಕಣ್ತುಂಬಿಕೊಳ್ಳಲು ಅವರ ತಾಯಿ ತಶ್ವಿನ್ ರಲ್ಲೂ ಕುತೂಹಲದ ಜೊತೆಗೆ ಸಂತಸವೂ ಮನೆ ಮಾಡಿದೆ.

click me!