Chikkamagaluru ಐತಿಹಾಸಿಕ ಅಯ್ಯನಕೆರೆ ಕೆರೆ ಕೋಡಿ, ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್

Published : Jul 14, 2022, 10:58 PM IST
Chikkamagaluru ಐತಿಹಾಸಿಕ ಅಯ್ಯನಕೆರೆ ಕೆರೆ ಕೋಡಿ, ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್

ಸಾರಾಂಶ

ಕೋಡಿ ಬಿದ್ದ ಐತಿಹಾಸಿಕ ಅಯ್ಯನಕೆರೆ, ಏಳು ಗುಡ್ಡಗಳ ಮಧ್ಯೆ ಇರೋ ಬೃಹತ್ ಕೆರೆ,ಕೊಡಿ ಬಿದ್ದಿರೋದ್ರಿಂದ ಕಡೂರು ರೈತರಲ್ಲಿ ಸಂತಸ ಮೂಡಿಸಿದೆ. ಮತ್ತೊಂದೆಡೆ  ಅಯ್ಯನಕೆರೆ ವೀಕ್ಷಣೆಗೆ ಬಂದ ಕೆಲ ಪ್ರವಾಸಿಗರಿಂದ ಹುಚ್ಚಾಟಕ್ಕೆ ಇದೀಗ ಬ್ರೇಕ್ ಬಿದ್ದಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು, (ಜುಲೈ.14)
: ಮಲೆನಾಡಿನಲ್ಲಿ ಮಳೆಯಿಂದ ಜನರು ಬದುಕು ಮೂರಾಬಟ್ಟೆಯಾದ್ರೆ, ಬಯಲುಸೀಮೆ ಜನರಿಗೆ ಬದುಕುವ ಚೈತನ್ಯ ತಂದಿದೆ. ಮಲೆನಾಡಿನ ಜನರು ಮನೆ, ಕಾಫಿ ತೋಟಗಳನ್ನು ಕಳೆದುಕೊಂಡ್ರೆ ಬಯಲು ಭಾಗದಲ್ಲಿ ಹರ್ಷೋದ್ಘಾರ ಕೇಳಿಬಂದಿದೆ. ಮೂರು ಹವಾಗುಣ ಹೊಂದಿರೋ ಕಾಫಿನಾಡಲ್ಲಿ ಒಂದೊಂದು ಭಾಗದಲ್ಲಿ ಒಂದೊಂದು ರೀತಿ. ಬಯಲುಸೀಮೆ ಜೀವನನಾಡಿ ಐತಿಹಾಸಿಕ ಅಯ್ಯನಕೆರೆ ಕೆರೆ ಕೋಡಿ ಬಿದ್ದಿರುವುದು ರೈತರಲ್ಲಿ ಸಂತಸ ಮೂಡಿಸಿದೆ.  ಆದ್ರೆ, ಕೆಲ ಪ್ರವಾಸಿಗರ ಹುಚ್ಚಾಟ ಮಿತಿ ಮೀರಿ ಹೋಗಿದೆ.

ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್, ಏಷ್ಯಾನೆಟ್ ಸುವರ್ಣ ನ್ಯೂಸ್ ಇಂಪ್ಯಾಕ್ಟ್
ಹೌದು.. ಅಯ್ಯನಕೆರೆ ಕೋಡಿಯ ದ್ರಶ್ಯ ನೋಡಲು ಬಂದ ಕೆಲ ಪ್ರವಾಸಿಗರು ಅಪಾಯದ ಸ್ಥಳಗಳಿಗೆ ತೆರಳಿ ಸೆಲ್ಫಿಗೆ ಮುಗಿಬಿದ್ದಿದ್ದರು. ಅಲ್ಲದೆ ಪುಟ್ಟ ಮಕ್ಕಳೊಂದಿಗೆ ಕೆಲವರು ಕೆರೆಬಳಿ ತೆರಳಿ ಕೋಡಿ ಹತ್ತಿರ ನಿಂತು ಸೆಲ್ಫಿ ತೆಗೆದುಕೊಳ್ಳುವುದು ,  ಇನ್ನೂ ಕೆಲವರು ತೂಬಿನ ಮೇಲೆ ನಿಂತು ಮೋಜು ಮಾಡುತ್ತಿದ್ದರು.ಕೆರೆ ಬಳಿ ಪ್ರವಾಸಿಗರ ನಡೆಸುತ್ತಿದ್ದ  ಹುಚ್ಚಾಟದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ವರದಿ ಪ್ರಸಾರವಾಯಿತು. 

ವರದಿ ಬೆನ್ನಲ್ಲೇ ಎಚ್ಚೆತ ಪೊಲೀಸರು ಸಾರ್ವಜನಿಕರಿಗೆ ನಿಷೇಧಿಸಿದ್ದಾರೆ. ಕೆಲವರು ತೂಬಿನ ಮೇಲೆ ನಿಂತು ಮೋಜು ಮಾಡುತ್ತಿರುವುದರಿಂದ ಅನಾಹುತ ಸಂಭವಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಕೆರೆ ಮಾರ್ಗದಲ್ಲಿ ಬ್ಯಾರಿಕೇಡ್ ಹಾಕಿ ವೀಕ್ಷಣೆಗೆ ನಿಷೇಧ ಹೇರಲಾಗಿದೆ. ಬ್ಯಾನರ್ ಹಾಕಿ ಸ್ಥಳದಲ್ಲಿ ಪೊಲೀಸರನ್ನೂ ನಿಯೋಜಿಸಲಾಗಿದೆ. 

Chikkamagaluru ಐತಿಹಾಸಕ ಅಯ್ಯನ ಕೆರೆ ಕೋಡಿ : ಬಯಲು ಸೀಮೆ ರೈತರಲ್ಲಿ ಸಂತಸ

ಏಳು ಗುಡ್ಡಗಳ ಮಧ್ಯೆ ಇರೋ ಬೃಹತ್ ಕೆರೆ
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಐತಿಹಾಸಿಕ ಅಯ್ಯನಕೆರೆ. 100 ಎಕರೆಗೂ ಹೆಚ್ಚಿನ ವಿಸ್ತಿರ್ಣವುಳ್ಳ ಕೆರೆ. ಅಂದಾಜು 5 ರಿಂದ 6 ಸಾವಿರ ಹೆಕ್ಟೇರ್ ನೀರಾವರಿ ಕಲ್ಪಿಸೋ ಜೀವನಾಡಿ. ಮಲೆನಾಡಿನ ಮಳೆ ಅಬ್ಬರಕ್ಕೆ ಆಕರ್ಷಣೆಯ ಕೇಂದ್ರ ಬಿಂದುವಾಗಿ ಪ್ರವಾಸಿ ತಾಣವಾಗಿದೆ. ಕಳೆದ 15 ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಇಂದು ಕೂಡ ಮುಂದುವರೆದಿದ್ದು ಗಿರಿ ಭಾಗದಲ್ಲೂ ಧಾರಾಕಾರ ಮಳೆಯಾಗ್ತಿರೋ ಹಿನ್ನೆಲೆ ಐತಿಹಾಸಿಕ ಅಯ್ಯನಕೆರೆ ಕಳೆದ ಮೂರು ದಿನಗಳ ಹಿಂದಯೇ ಕೋಡಿ ಬಿದ್ದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಸಮೀಪವಿರುವ ಅಯ್ಯನಕರೆ ಜುಲೈ ತಿಂಗಳಿನಲ್ಲೇ ಕೋಡಿ ಬಿದ್ದಿರೋದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.  

ಇನ್ನು ಈ ಕೆರೆ ಭರ್ತಿಯಾಗಿರುವ ಕಾರಣ ಕೆರೆ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂಸತ ಮೂಡಿಸಿದೆ. ಏಳು ಗಡ್ಡಗಳ ಮಧ್ಯೆ ಇರೋ ಈ ಕೆರೆಯ ಸೌಂದರ್ಯಕ್ಕೆ ಕೆರೆಯ ಸಾಕ್ಷಿಯಂತಾಗಿದೆ. ಚಂದ್ರದ್ರೋಣ ಪರ್ವತ ಶ್ರೇಣಿಗೆ ಭೇಟಿ ನೀಡೋ ಪ್ರವಾಸಿಗ್ರು ಇಲ್ಲಿಗೂ ಭೇಟಿ ನೀಡಿ, ಇಲ್ಲಿನ ಸೌಂದರ್ಯವನ್ನ ಸವಿದ್ರು. ಇಲ್ಲಿ ಹರಿಯೋ ನೀರು ಕಡೂರಿನ ಬಹುತೇಕ ಭಾಗಕ್ಕೆ ಕುಡಿಯೋ ನೀರಿನ ಸೌಲಭ್ಯ ಕಲ್ಪಿಸಿದೆ. ಇಲ್ಲಿನ ಊರುಕಾಲುವೆ, ಬಸವನಕಾಲುವೆ, ಕಡೇ ಕಾಲುವೆ, ಗೌರಿ ಹಳ್ಳಿ ನಾಲ್ಕು ಕಾಲುವೆಗಳಾಗಿ ಹರಿಯೋ ನೀರು ಸಾವಿರಾರು ಜನರಿಗೆ ಬದುಕುವ ಚೈತನ್ಯ ತಂದಿದೆ. ಈ ಭಾಗದಲ್ಲಿ ಅತೀ ಹೆಚ್ಚಾಗಿ ಬೆಳೆಯುಲಾಗುವ ತರಿಕಾರಿ, ಅಡಿಕೆ, ತೆಂಗಿನ ಬೆಳೆಗೆ ಬೇಸಿಗೆಯಲ್ಲಿ ನೀರಿನ ಮೂಲ ಅಯ್ಯನಕೆರೆ ಆಗಿದೆ. ಅಚ್ಚುಕಟ್ಟು ಪ್ರದೇಶದ ನೂರಾರು ರೈತರು ಕೆರೆ ಬಳಿ ತೆರಳಿ ಭೋರ್ಗರೆಯುತ್ತ ಕೋಡಿಯಿಂದ ಧುಮ್ಮಿಕ್ಕುತ್ತಿರುವ ಜಲರಾಶಿಯನ್ನು ಕಣ್ತುಂಬಿಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. 

PREV
Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!