
ಕಾರವಾರ (ಮಾ.13): ಹುಲಿಯ ಚರ್ಮ ಮಾರಾಟ ಮಾಡುತ್ತಿದ್ದಾತನ ಪೋಲಿಸ್ ಅರಣ್ಯ ಸಂಚಾರಿ ದಳ ಹೆಡೆಮುರಿ ಕಟ್ಟಿದೆ. ಚಿಕ್ಕಮಗಳೂರ ಪೊಲೀಸ್ ಅರಣ್ಯ ಸಂಚಾರಿ ದಳದಿಂದ ಹಳಿಯಾಳದಲ್ಲಿ ಕಾರ್ಯಾಚರಣೆ ನಡೆದಿದ್ದು, ಹುಲಿಯ ತಲೆಯೊಂದಿಗಿರುವ ಚರ್ಮ ಮಾರಾಟ ಮಾಡೋ ವೇಳೆ ವ್ಯಕ್ತಿಯ ಬಂಧಿಸಲಾಗಿದೆ.
ಹಳಿಯಾಳದ ಮಹಾದೇವ ನಾರಾಯಣ ತೇರಗಾಂವಕರ (55) ಎಂಬಾತನನ್ನು ಬಂಧಿಸಲಾಗಿದೆ. ಹುಲಿಯ ಚರ್ಮ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ.
'ಗುಂಡಿಕ್ಕಿ ಸಾಯಿಸಿ, ಆಮೇಲಿನ ಸಂಗತಿ ನಾವ್ ನೋಡಿಕೊಳ್ಳುತ್ತೇವೆ' ...
ಆರೋಪಿಯ ಬಳಿ ಹುಲಿ ಚರ್ಮ ಇರುವ ಬಗ್ಗೆ ಚಿಕ್ಕಮಗಳೂರ ಪೋಲಿಸ್ ಅರಣ್ಯ ಸಂಚಾರಿ ದಳ ಮಾಹಿತಿ ಕಲೆ ಹಾಕಿತ್ತು ಈ ಹಿನ್ನೆಲೆಯಲ್ಲಿ ಪೊಲೀಸ್ ಅರಣ್ಯ ಸಂಚಾರಿ ದಳ ವಿಶೇಷ ಕಾರ್ಯಾಚರಣೆ ನಡೆಸಿತ್ತು. ಪಿಎಸೈ ಆರ್.ಶೋಭಾ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಹೇಮಾವತಿ, ಅರಸ್, ಎಚ್.ದೇವರಾಜ್, ಸಿ ಡಿ.ಎಚ್.ದಿನೇಶ್, ತಿಮ್ಮಶೆಟ್ಟಿ ಭಾಗಿಯಾಗಿದ್ದರು.
ಇದೀಗ ಬಂಧಿತ ನಾರಾಯಣಗೆ ಮಾರ್ಚ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.