ಪ್ರತೀವರ್ಷದಂತೆ ಈ ವರ್ಷವೂ ಕೂಡ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿದಿದ್ದು ಎಚ್ಚರಿಕೆಯನ್ನು ನೀಡಿದೆ.
ಬೀರೂರು (ಅ.28): ‘ಇಟ್ಟರಾಮನ ಬಾಣಕ್ಕೆ ಹುಸಿಯಿಲ್ಲ. ಮನೆಯೇ ಮಂತ್ರಾಲಯವಾಯಿತು, ಜೀವನ ಮುಳ್ಳಿನ ಗುಲಾಬಿಯಾಯಿತು, ಗಡಿಯಲ್ಲಿ ಸರ್ಪ ಹೆಡೆಬಿಚ್ಚೀತು, ಸರ್ವರು ಎಚ್ಚರದಿಂದಿರಬೇಕಂತಲೇ ಪರಾಕ್...’
-ಇದು ಚಿಕ್ಕಮಗಳೂರು ಜಿಲ್ಲೆಯ ಇತಿಹಾಸಪ್ರಸಿದ್ಧ ಬೀರೂರು ಮೈಲಾರಲಿಂಗ ಸ್ವಾಮಿಯ ದಶರಥ ಪೂಜಾರರ ಬಾಯಿಂದ ಬಂದಂತಹ ಈ ಬಾರಿಯ ಕಾರ್ಣಿಕದ ನುಡಿಮುತ್ತುಗಳು. ಇಲ್ಲಿ ಮಂಗಳವಾರ ಮುಂಜಾವಿನಲ್ಲಿ ದಸರಾ ಕಾರ್ಣಿಕ ನೆರವೇರಿತು. ಮೈಲಾರಲಿಂಗಸ್ವಾಮಿ ಅರ್ಚಕ ದಶರಥ ಪೂಜಾರ ತ್ರಿಶೂಲದಲ್ಲಿ ಸ್ವಾಮಿಯು ಮುಂದಿನ ಭವಿಷ್ಯದ ನುಡಿಗಳನ್ನು ತೂಕ ಹಾಕಿ ಕಾರ್ಣಿಕ ನುಡಿದು ಬಿಲ್ಲಪ್ಪನಿಂದ ಜಾರಿ ತಮ್ಮ ಕಾರ್ಣಿಕದ ನುಡಿಮುತ್ತುಗಳಿಗೆ ಸಮರ್ಪಣೆಗೊಳಿಸಿದರು. ಈ ಬಾರಿಯ ಕಾರ್ಣಿಕವನ್ನು ನಾನಾ ರೀತಿ ವಿಶ್ಲೇಷಿಸಲಾಗುತ್ತಿದ್ದು, ಕೊರೋನಾ ಕುರಿತು ಮುಂಜಾಗ್ರತೆ ವಹಿಸುವುದೇ ಒಳಿತು ಹಾಗೂ ಮಳೆ, ಬೆಳೆ ಇಲ್ಲದೆ ಎಲ್ಲ ಸಾಮಗ್ರಿಗಳು ದುಬಾರಿಯಾಗಿ ಬಡವರು ಮಧ್ಯಮವರ್ಗದವರ ಜೇಬಿಗೆ ಹೊರೆ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
undefined
ಮೈಲಾರಲಿಂಗಸ್ವಾಮಿ ಅರ್ಚಕ ದಶರಥ ಪೂಜಾರ ಉತ್ಸವದಲ್ಲಿ ಬಂದು ಬಾಳೆಮರದ ಅಂಬನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ ಬೆಣ್ಣೆ ಮೆತ್ತಿದ ದೊಡ್ಡಬಿಲ್ಲನ್ನು ಏರಿ ಬೆಳಗ್ಗೆ 4.55ರ ಸುಮಾರಿಗೆ ಕೈಯಲ್ಲಿದ್ದ ಗಂಟೆಯನ್ನು ಬಾರಿಸಿದ ಕೂಡಲೇ ನೆರೆದಿದ್ದ ಜನರೆಲ್ಲ ಮೌನವಾದರು. ನಂತರ ತ್ರಿಶೂಲದಲ್ಲಿ ಸ್ವಾಮಿಯು ಮುಂದಿನ ಭವಿಷ್ಯದ ನುಡಿಗಳನ್ನು ತೂಕ ಹಾಕಿ ಕಾರ್ಣಿಕ ನುಡಿದು ಬಿಲ್ಲಪ್ಪನಿಂದ ಜಾರಿ ತಮ್ಮ ಕಾರ್ಣಿಕದ ನುಡಿಮುತ್ತುಗಳಿಗೆ ಸಮರ್ಪಣೆಗೊಳಿಸಿದರು. ಸ್ಥಳದಲ್ಲಿದ್ದ ಗೊರವರು ಗಂಟೆ ಮತ್ತು ಡಮರುಗಳ ಸಪ್ಪಳದೊಂದಿಗೆ ಏಳುಕೋಟಿಗೆ ಪರಾಕ್ ಎನ್ನುವ ಸದ್ದು ಮಾರ್ದನಿಸಿತು.
ಈ ವರ್ಷ ಬೆಳೆದ ಯಾವ ಬೆಳೆ ರೈತನಿಗೆ ಸಿಗೋದಿಲ್ಲ: ಕಾರ್ಣಿಕ ಭವಿಷ್ಯ..! ...
ಈ ಬಾರಿಯ ಕಾರ್ಣಿಕವನ್ನು ನಾನಾ ರೀತಿ ವಿಶ್ಲೇಷಿಸಲಾಗುತ್ತಿದ್ದು, ಕೊರೋನಾ ಕುರಿತು ಮುಂಜಾಗ್ರತೆ ವಹಿಸುವುದೇ ಒಳಿತು ಹಾಗೂ ಮಳೆ, ಬೆಳೆ ಇಲ್ಲದೆ ಎಲ್ಲ ಸಾಮಗ್ರಿಗಳು ದುಬಾರಿಯಾಗಿ ಬಡವರು ಮಧ್ಯಮವರ್ಗದವರ ಜೇಬಿಗೆ ಹೊರೆ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಕಳೆದ ಬಾರಿ ಪಂಜರದ ಗಿಳಿಗಳು ಹಾರಿಹೋದಾವು, ಕಟ್ಟಿದ್ದ ಕೋಟೆ ಪರರದ್ದಾಯಿತು, ಮುಂಗಾರು ಮಳೆ ಸುರಿಸಿತು ಎಂಬುದು ಕಾರ್ಣಿಕದ ನುಡಿಯಾಗಿತ್ತು. ಅದರಂತೆ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡು ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವ ಕಂಡಿತು ಎಂಬುದು ಇಲ್ಲಿನ ಭಕ್ತರ ವಿಶ್ಲೇಷಣೆಯಾಗಿದೆ.