chikkamagaluru: ಕಾಫಿನಾಡಲ್ಲಿ ಕಾಮುಕ, ಬೀದಿನಾಯಿಗಳ ಜೊತೆ ಸೆಕ್ಸ್!

By Santosh Naik  |  First Published Nov 11, 2024, 2:59 PM IST

ಚಿಕ್ಕಮಗಳೂರಿನಲ್ಲಿ ಬೀದಿ ನಾಯಿಯೊಂದಿಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ವರದಿಯಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್ ಆಗಿದ್ದು, ಪೊಲೀಸರು ಆರೋಪಿ ಶಿವರಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


ಚಿಕ್ಕಮಗಳೂರು (ನ.11): ಕಾಫಿನಾಡಲ್ಲೊಬ್ಬ ವಿಚಿತ್ರ ಕಾಮುಕನ ಬಗ್ಗೆ ವರದಿಯಾಗಿದೆ. ಬೀದಿ ನಾಯಿ ಜೊತೆ ವ್ಯಕ್ತಿಯೊಬ್ಬ ಸೆಕ್ಸ್‌ ನಡೆಸುತ್ತಿರುವ ವಿಡಿಯೋ ವೈರಲ್‌ ಆಗಿದೆ. ವ್ಯಕ್ತಿಯ ಅಸಭ್ಯ ವರ್ತನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪ ತಾಲೂಕಿನ ಜಯಪುರದಲ್ಲಿ ಘಟನೆ ನಡೆದಿದೆ. ಕಳೆದ ತಿಂಗಳು 18ರಂದು ಜಯಪುರ ಬಸ್ ನಿಲ್ದಾಣದಲ್ಲೇ ನಡೆದಿರುವ ಘಟನೆ ಇದಾಗಿದೆ. ನವೆಂಬರ್ 9ರಂದು ಜಯಪುರ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದ್ದು, ಶಿವರಾಜ್ ಎಂಬ ವ್ಯಕ್ತಿ ಮೇಲೆ ಪ್ರಕರಣ ದಾಖಲಿಸಲಾಗಿದೆ. ಶಿ ಇಂದು ಶಿವರಾಜ್ ನನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಠಾಣಾ ಪಿಸಿ ಅವರೇ ದೂರು ನೀಡಿದ್ದಾರೆ.

ಎಫ್‌ಐಆರ್‌ ಮಾಹಿತಿ ಪ್ರಕಾರ, ಜಯಪುರ ಬಸ್‌ ನಿಲ್ದಾಣದಲ್ಲಿರು ಅಂಗಡಿಯೊಂದರ ಮುಂಭಾಗದಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿಯೇ ಬೀದಿ ನಾಯಿಯನ್ನು ಹಿಡಿದುಕೊಂಡು ಅದರೊಂದಿಗೆ ಅಸಭ್ಯವಾಗಿ ವರ್ತಿಸಿರುತ್ತಾನೆ. ಬೀದಿ ನಾಯಿಗೆ ತೊಂದರೆ ನೀಡುತ್ತಿರುವ ಹಾಗೂ ಪ್ರಾಣಿ ಹಿಂಸೆ ಮಾಡುತ್ತಿರುವ ಈತನ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ವಿಡಿಯೋ ಬಸ್ ನಿಲ್ದಾಣದಲ್ಲಿರುವ ಜಯಪುರ ಎಂಟರ್‌ಪ್ರೈಸಸ್‌ ಅಂಗಡಿಯಲ್ಲಿ ಇರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಕ್ಟೋಬರ್‌ 10 ರಂದು ಬೆಳಗ್ಗೆ 4 ಗಂಟೆಯ ಸುಮಾರಿಗೆ ಜಯಪುರ ಪಟ್ಟಣದ ಅಂಗಡಿಯ ಮುಂಭಾಗದ ಕಟ್ಟೆಯ ಮೇಲೆ ಕುಳಿತು ಬೀದಿ ನಾಯಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವಿಡಿಯೋವನ್ನು ತೋರಿಸಿ ಇದರಲ್ಲಿರುವ ವ್ಯಕ್ತಿ ಯಾರು ಎಂದು ಅಂಗಡಿಯ ಮಾಲೀಕನನ್ನೇ ಪ್ರಶ್ನೆ ಮಾಡಿದಾಗ ಆತ ಇದು ಕಟ್ಟೆ ಮನೆ ಶಿವರಾಜ ಎಂದು ಹೇಳಿದ್ದ' ಎಂದು ಎಫ್‌ಐಆರ್‌ನಲ್ಲಿ ಬರೆಯಲಾಗಿದೆ. ಬೀದಿ ನಾಯಿಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಸಾರ್ವಜನಿಕರಿಗೂ ಸಮಸ್ಯೆ ಮಾಡುತ್ತಿದ್ದಾನೆ. ಈತನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಲಾಗಿದೆ.

Tap to resize

Latest Videos

undefined

ಕುಮಾರಸ್ವಾಮಿಗೆ 'ಕರಿಯ..' ಎಂದ ಜಮೀರ್‌, ಜನಾಂಗೀಯ ದ್ವೇಷದ ಮಾತಿಗೆ ಜೆಡಿಎಸ್‌ ಆಕ್ರೋಶ!

77 ವರ್ಷದ ಹಿಂದಿನ ಕೇಕ್‌ ಪೀಸ್‌ ಹರಾಜಿನಲ್ಲಿ 2.36 ಲಕ್ಷ ರೂಪಾಯಿಗೆ ಮಾರಾಟ!

click me!