ಯಗಟಿ ಗ್ರಾಮದ 150 ವರ್ಷದ ಹಳೆಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೊಂದಿಗೆ ಕುಳಿತು ಮಾಜಿ ಶಾಸಕ ವೈಎಸ್‌ವಿ ದತ್ತಾ ಹೋಳಿಗೆ ಊಟವನ್ನು ಸವಿದಿದ್ದಾರೆ.
ಚಿಕ್ಕಮಗಳೂರು (ಜು.18): ಸುಮಾರು 150 ವರ್ಷಗಳ ಇತಿಹಾಸ ಹೊಂದಿರುವ ಯಗಟಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಜೊತೆ ಕಡೂರು ಮಾಜಿ ಶಾಸಕ ವೈ.ಎಸ್.ವಿ ದತ್ತ ಸರದಿ ಸಾಲಲ್ಲಿ ಊಟಕ್ಕೆ ಕುಳಿತುಕೊಂಡು ಅಸತೋಮ ಸದ್ಗಮಯ ಪ್ರಾರ್ಥನೆ ಮಾಡಿ, ನಂತರ ಮಕ್ಕಳ ಜೊತೆಯೇ ಹೋಳಿಗೆ ಊಟ ಸವಿದರು.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮಾಜಿ ಶಾಸಕ ವೈ.ಎಸ್.ವಿ.ದತ್ತ, ಸ್ವಗ್ರಾಮ ಯಗಟಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಜೊತೆಯೇ ಊಟ ಮಾಡಿದ್ದಾರೆ. ಅದೇ ಶಾಲೆಯಲ್ಲಿ ಓದಿ ಬೆಳೆದ ದತ್ತ ಅವರ ಸಹೋದರಿ ವೈ.ಎಸ್.ವಿಜಯಲಕ್ಷ್ಮಿಯವರ ಸ್ಮರಣಾರ್ಥ ಮಕ್ಕಳಿಗೆ ಬಸವಣ್ಣ, ಡಿವಿಜಿ ಹಾಗೂ ಅಂಬೇಡ್ಕರ್ ಅವರ ಪುಸ್ತಕಗಳ ಜೊತೆ ಓದಿನ ಸಾಮಾಗ್ರಿಗಳನ್ನ ನೀಡಿದ್ದಾರೆ. ಮನುಷ್ಯ ಎಷ್ಟೇ ಅತ್ಯುನ್ನತ ಸ್ಥಾನಕ್ಕೆ ಹೋದರೂ ತಮಗೆ ಪ್ರಾಥಮಿಕ ಶಿಕ್ಷಣ ನೀಡಿದ ಶಾಲೆಯೊಡನೆ ಸದಾ ಸಂಪರ್ಕವಿಟ್ಟುಕೊಂಡು ಆ ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದ್ದಿದ್ದಾರೆ.
undefined
ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ವಾಹನ ಪ್ರವೇಶ ನಿರ್ಬಂಧ: ಟ್ರಾಫಿಕ್ ತಡೆಯಲು ಪೊಲೀಸರ ಕ್ರಮ
ಸುಮಾರು 153 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈ ಶಾಲೆಯು ರಾಜ್ಯವ್ಯಾಪಿ ದೊಡ್ಡ ಕೊಡುಗೆ ನೀಡಿದೆ. ಇಲ್ಲಿ ವ್ಯಾಸಂಗ ಪಡೆದ ಅನೇಕರು ಅತ್ಯುನ್ನತ ಹುದ್ದೆಗೇರಿದ್ದಾರೆ. ಅವರಲ್ಲಿ ವಿಜಯಲಕ್ಷ್ಮಿ ಕೂಡ ಒಬ್ಬರು. ಅವರು ಸಾಂಸ್ಕೃತಿಕ ಹಾಗೂ ಸಾಹಿತಿಕವಾಗಿ ಬಹು ದೊಡ್ಡ ಜ್ಞಾನ ಹೊಂದಿದ್ದರು. ರಾಮಕೃಷ್ಣ ಹೆಗ್ಗಡೆಯವರು ಸಿಎಂ ಆಗಿದ್ದಾಗ ರೂಪಿಸಿದ ಹಲವು ಯೋಜನೆಗಳಿಗೆ ಹೆಸರು ಸೂಚಿಸುತ್ತಿದ್ದರು. ಅಂತಹ ದೊಡ್ಡ ಜ್ಞಾನ ಸಂಪಾದಿಸಿದ್ದ ವಿಜಯಲಕ್ಷ್ಮಿ ಶಿಕ್ಷಣ ಪ್ರೇಮಿಯಾಗಿದ್ದರು. ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬುದು ಅವರ ಆಶಯ. ಕಳೆದ 60 ವರ್ಷಗಳ ಹಿಂದೆ ನಾನೂ ಕೂಡ ಈ ಶಾಲೆಯ ವಿದ್ಯಾರ್ಥಿಯಾಗಿದ್ದ ನೆನಪು ಸದಾ ಜೀವಂತವಾಗಿರುತ್ತದೆ ಎಂದರು.
ಚಿಕ್ಕಮಗಳೂರು ರಾಜ್ಯ ಹೆದ್ದಾರಿಯಲ್ಲಿ ತಪ್ಪಿದ ಭಾರೀ ಅನಾಹುತ: ಚಿಕ್ಕಮಗಳೂರು (ಜು.18): ರಸ್ತೆ ಬದಿ ಒಣಗಿ ನಿಂತಿದ್ದ ಮರಕ್ಕೆ ವಿದ್ಯುತ್ ತಂತಿ ತಗಲಿ ಬೆಂಕಿ ಹತ್ತಿ ಉರಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗಬ್ಗಲ್ ಸಮೀಪದ ಹಾದಿಓಣಿ ಗ್ರಾಮದಲ್ಲಿ ನಡೆದಿದೆ. ಈ ಮಾರ್ಗ ರಾಜ್ಯ ಹೆದ್ದಾರಿಯಾಗಿದ್ದು, ಮೂಡಿಗೆರೆಯಿಂದ ಕೊಟ್ಟಿಗೆಹಾರ ಮುಖಾಂತರ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲ ಹಾಗೂ ಕಳಸಕ್ಕೆ ಹೋಗುವ ಸಾವಿರಾರು ವಾಹನಗಳು ನಿತ್ಯ ಓಡಾಡುತ್ತವೆ. ಮರ ಹೊತ್ತಿ ಉರಿದ ಬಳಿಕ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದು, ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು.
ಪ್ರವಾಸಿಗರ ಸ್ವರ್ಗ ಚಾರ್ಮಾಡಿ ಘಾಟಿಯಲ್ಲಿ ಪುಂಡರ ಹಾವಳಿ: ಪೊಲೀಸರೇ ಏನ್ಮಾಡ್ತೀದ್ದೀರಿ
ಒಂದು ವೇಳೆ ವಿದ್ಯುತ್ ತಂತಿ ತುಂಡಾಗಿ ರಸ್ತೆಯಲ್ಲಿ ಸಂಚರಿಸುವ ಯಾವುದಾದರೂ ವಾಹನದ ಮೇಲೆ ಬಿದ್ದಿದ್ದರೆ ವಾಹನ ಕೂಡ ವಿದ್ಯುತ್ ತಂತಿಯಿಂದ ಹೊತ್ತಿ ಉರಿಯುವ ಸಾಧ್ಯತೆ ಇತ್ತು. ಆದರೆ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಎಂಬುವರು ಮರ ಹೊತ್ತಿ ಉರಿಯುವುದನ್ನು ಕಂಡು ಕೂಡಲೇ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಭೇಟಿ ನೀಡಿ ವಿದ್ಯುತ್ ತಂತಿಗೆ ಅಡ್ಡ ಇರುವ ಮರಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ.