
ಚಿಕ್ಕಮಗಳೂರು (ನ.08) ಚಿಕ್ಕಮಗಳೂರಿನ ಪವಿತ್ರ ದೇವಿರಮ್ಮ ಜಾತ್ರೆಯಲ್ಲಿ ಅವಘಡ ಸಂಭವಿಸಿದೆ. ದೀಪಾವಳಿ ಹಾಗೂ ಭಾನುವಾರದ ಕಾರಣ ಸಾವಿರು ಸಂಖ್ಯೆಯಲ್ಲಿ ಭಕ್ತರು ದೇವಿರಮ್ಮ ಬೆಟ್ಟ ಹತ್ತಲು ಆರಂಭಿಸಿದ್ದಾರೆ. ಜನಸಂದಣಿ ಹೆಚ್ಚಾಗಿದೆ. ಬೆಟ್ಟ ಹತ್ತಲು ಸುಲಭವಾಗುವಂತೆ ಹಾಗೂ ಜಾರದಂತೆ ತಡೆಯಲು ಕಂಬಿಗಳನ್ನು ಹಾಕಲಾಗಿದೆ. ಈ ಕಂಬಿ ಹಿಡಿದು ನಿಂತಿದ್ದ ವೇಳೆ ಮುರಿದು ಅವಘಡ ಸಂಭವಿಸಿದೆ. 50ಕ್ಕೆ ಹೆಚ್ಚು ಕಂಬಿಗಳು ಕಿತ್ತು ಬಂದಿದೆ. ಪರಿಣಾಮ ಒಂದೇ ಸಮನೆ ಭಕ್ತರು ಬಿದ್ದಿದ್ದಾರೆ. ಇಳಿಜಾರಿನ ಪರ್ವತದಲ್ಲಿ ಭಕ್ತರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಡಿದಾದ ಬೆಟ್ಟ ಹತ್ತಲು ಭಕ್ತರಿಗೆ ಅನುಕೂಲವಾಗಲು ಕಾಂಕ್ರೀಟ್ ಹಾಕಿ ಕಂಬಿಗಳನ್ನು ಹಾಕಲಾಗಿದೆ. ಇದರಿಂದ ಈ ಕಂಬಿಗಳನ್ನು ಹಿಡಿದು ಬೆಟ್ಟ ಹತ್ತಲು ಸುಲಭವಾಗಲಿದೆ. ಆದರೆ ಕಾಂಕ್ರೀಟ್ ಹಾಕಿದ್ದ ಕಂಬಿಗಳೇ ಕಿತ್ತು ಬಂದಿದೆ. ಸುಮಾರು 50ಕ್ಕೂ ಹೆಚ್ಚು ಕಾಂಕ್ರೀಟ್ ಕಂಬಿಗಳು ಕಿತ್ತು ಬಂದಿದೆ. ಕಂಬಿ ಹಿಡಿದು ನಿಂತಿದ್ದ ಕಿಕ್ಕಿರಿದು ತುಂಬಿದ ಭಕ್ತರು ಬಿದ್ದಿದ್ದಾರೆ. ಇತ್ತ ಕಾಂಕ್ರೀಟ್ ರಾಡ್‌ಗಳು ಒಂದೇ ಸಮನೆ ಕೆಳಕ್ಕೆ ಧಾವಿಸಿದೆ. ಅದೃಷ್ಟವಶಾತ್ ಈ ಕಾಂಕ್ರೀಟ್ ರಾಡ್‌ಗಳು ಯಾವುದೇ ಭಕ್ತರಿಗೆ ಗಾಯ ಮಾಡಿಲ್ಲ. ಇತ್ತ ಇಳಿಜಾರು ಪರ್ವತದ ಕಲ್ಲುಗಳ ಮೇಲೆ ಬಿದ್ದ ಭಕ್ತರು ಗಾಯಗೊಂಡಿದ್ದಾರೆ. ಈ ಪೈಕಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಇತ್ತ ಶಾಸಕ ತಮ್ಮಯ ಹಾಗೂ ಪರಿಷತ್ ಸದಸ್ಯ ಸಿಟಿ ರವಿ ಗಾಯಾಳುಗಳ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಪೊಲೀಸರು ಅವಘಡ ನಡೆದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ದೇವಿರಮ್ಮ ಪವಾಡ ಹಾಗೂ ಶಕ್ತಿಯಿಂದ ಅತೀ ದೊಡ್ಡ ಅನಾಹುತ ತಪ್ಪಿತು ಎಂದು ಭಕ್ತರು ಹೇಳಿದ್ದಾರೆ. ಕಂಬಿಗಳು ಕಿತ್ತು ಬಂದು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಕಿತ್ತುಬಂದಾಗ ಪರಿಸ್ಥಿತಿ ನೋಡಿದರೆ ಅತೀ ದೊಡ್ಡ ದುರಂತದ ಸೂಚನೆ ನೀಡಿತ್ತು. ಆದರೆ ದೇವಿರಮ್ಮ ಕಾಪಾಡಿದ್ದಾಳೆ. ಕಾಂಕ್ರೀಡ್ ರಾಡ್‌ಗಳು ಅತೀ ರಭಸದಿಂದ ಕೆಳಕ್ಕೆ ಉರುಳಿದೆ. ಇತ್ತ ಕಂಬಿಗಳು ಕೆಳಕ್ಕೆ ಬಿದ್ದು ಜಾರಿಕೊಂಡು ಹೋಗಿದೆ. ಈ ಕಾಂಕ್ರೀಟ್ ರಾಡ್, ಕಂಬಿಗಳಿಗೆ ಭಕ್ತರು ಸಿಲುಕಿದ್ದರೆ ಮತ್ತಷ್ಟು ಅಪಾಯವಾಗುತ್ತಿತ್ತು. ಅವಘಡ ನಡೆಯಬಾರದು. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಸ್ಥಳೀಯರು ಹೇಳಿದ್ದಾರೆ.