Chikkamgaluru: 'ಮದಗಜಗಳ ಕಾದಾಟ', ರಾಮನ ಬಾಣಕ್ಕೆ ಹುಸಿಯಿಲ್ಲ; ಮಹಾನವಮಿಗೆ ಎಚ್ಚರಿಕೆಯ ಕಾರ್ಣಿಕ ನುಡಿ

Published : Oct 21, 2026, 09:30 AM IST
Karnika of Lord Mailaralingeshwara Swamy

ಸಾರಾಂಶ

ಕಡೂರು ತಾಲೂಕಿನ ಬೀರೂರಿನ ಮಹಾನವಮಿ ಬಯಲಿನಲ್ಲಿ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ನುಡಿಯನ್ನು, ರಾಮನ ಬಾಣದಂತೆ ನಿಖರ ಕಾರ್ಣಿಕ ನುಡಿ ಎಂದೇ ಭಕ್ತರು ನಂಬುತ್ತಾರೆ. ಆದ್ದರಿಂದಲೇ ಪ್ರತಿ ವರ್ಷ ಮಹಾನವಮಿಗೆ ಸಾವಿರಾರು ಭಕ್ತರು ಕಾರ್ಣಿಕಕ್ಕಾಗಿ ಎದುರು ನೋಡುತ್ತಾರೆ.

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಖ್ಯಾತ ಬೀರೂರು ಮೈಲಾರಲಿಂಗೇಶ್ವರಸ್ವಾಮಿಯ ಕಾರ್ಣಿಕದ ನುಡಿ ಸಂಚಲವನ್ನು ಮೂಡಿಸಿದೆ. 'ಸೃಷ್ಟಿಗೆ ನಾಡು ಸಿರಿಯಾಯಿತು. ಮದಗಜಗಳು ಕಾದಾಡಿದರು. ಕತ್ತಲೆಯ ದೀಪಕ್ಕೆ ಬೆಳಕಾಯಿತು. ಸರ್ವರು ಎಚ್ಚರದಿಂದರಬೇಕು ಎಂದು ದೇವಸ್ಥಾನದ ಅರ್ಚಕ ದಶರಥ ಪೂಜಾರ್ ಅವರು ಕಾರ್ಣಿಕ ನುಡಿದಿದ್ದಾರೆ.

ಐತಿಹಾಸಿಕ ಬೀರೂರು ಮೈಲಾರಲಿಂಗೇಶ್ವರಸ್ವಾಮಿಯ ಕಾರ್ಣಿಕದ ನುಡಿ

ಕಡೂರು ತಾಲೂಕಿನ ಬೀರೂರಿನ ಮಹಾನವಮಿ ಬಯಲಿನಲ್ಲಿ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ನುಡಿಯನ್ನು, ರಾಮನ ಬಾಣದಂತೆ ನಿಖರ ಕಾರ್ಣಿಕ ನುಡಿ ಎಂದೇ ಭಕ್ತರು ನಂಬುತ್ತಾರೆ. ಆದ್ದರಿಂದಲೇ ಪ್ರತಿ ವರ್ಷ ಮಹಾನವಮಿಗೆ ಸಾವಿರಾರು ಭಕ್ತರು ಕಾರ್ಣಿಕಕ್ಕಾಗಿ ಎದುರು ನೋಡುತ್ತಾರೆ.

ಮೈಲಾರಲಿಂಗೇಶ್ವರಸ್ವಾಮಿಯ ಕಾರ್ಣಿಕ ವಿಶ್ಲೇಷಣೆ

ಬೆಳಗಿನ ಜಾವದಲ್ಲಿ ಹೊರ ಬಿದ್ದ ಕಾರ್ಣಿಕದ ನುಡಿಯನ್ನು ಅರ್ಚಕ ವಿಜೇತ್ ಅವರ ವಿಶ್ಲೇಷಣೆ ಮಾಡಿ ಭಕ್ತರಿಗೆ ತಿಳಿಸಿದ್ದಾರೆ. ಈ ಬಾರಿಯ ಕಾರ್ಣಿಕ ನುಡಿ ನೋಡುವುದಾದರೆ, 'ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ. ಸೃಷ್ಟಿಗೆ ನಾಡು ಸಿರಿಯಾಯಿತು. ಮದಗಜಗಳು ಕಾದಾಡಿದರು. ಕತ್ತಲೆಯ ದೀಪಕ್ಕೆ ಬೆಳಕಾಯಿತು. ಸರ್ವರು ಎಚ್ಚರದಿಂದರಬೇಕು' ಎಂದು ದೇವಸ್ಥಾನದ ಅರ್ಚಕ ದಶರಥ ಪೂಜಾರ್ ಅವರಿಂದ ಕಾರ್ಣಿಕ ನುಡಿ ಹೊರಬಿದ್ದಿದೆ.

ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಇಲ್ಲಿನ ಕಾರ್ಣಿಕ ನುಡಿ ವರ್ಷದೊಳಗೆ ನಡೆಯುತ್ತೇ ಎಂಬ ನಂಬಿಕೆ ಭಕ್ತರಲ್ಲಿದೆ. ಮಹಾನವಮಿ ದಿನ ಗೊರವಯ್ಯ ಕಾರ್ಣಿಕ ನುಡಿಯೂ ಸಮಾಜದ ಆಗುಹೋಗುಗಳ ಬಗ್ಗೆ ಸುಳಿವು ನೀಡಿದೆ.

ಕಾರ್ಣಿಕದ ಮೂರು ವಾಕ್ಯಗಳ ಅರ್ಥ ವಿಶ್ಲೇಷಿಸಿದ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಅರ್ಚಕ ವಿಜೇತ್, “ಸೃಷ್ಟಿಗೆ ನಾಡು ಸಿರಿಯಾಯ್ತು” – ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಪ್ರಗತಿಯ ಸಂಕೇತವಾಗಿದೆ. “ಮದಗಜಗಳು ಕಾದಾಡಿದರು” – ಪ್ರಭಾವಿ ವ್ಯಕ್ತಿಗಳು ಅಥವಾ ಬಲಿಷ್ಠ ಗುಂಪುಗಳ ನಡುವೆ ಸಂಘರ್ಷ ಉಂಟಾಗುವ ಸೂಚನೆಯಾಗಿದೆ. “ಕತ್ತಲೆಯ ದೀಪಕ್ಕೆ ಬೆಳಕಾಯಿತು” – ಕಷ್ಟ, ಅಜ್ಞಾನ ಮತ್ತು ಅನ್ಯಾಯದ ನಡುವೆ ಜ್ಞಾನ, ಸತ್ಯ ಹಾಗೂ ನ್ಯಾಯದ ಬೆಳಕು ಮೂಡುವ ಸಂಕೇತ ಎಂದು ತಿಳಿಸಿದ್ದಾರೆ. ಕಾರ್ಣಿಕದ ನುಡಿಯಲ್ಲಿ ಎರಡು ಎಚ್ಚರಿಕೆಯ ಸಂದೇಶಗಳು, ಒಂದು ಶುಭ ಸೂಚನೆ ಇದೆ ಎಂದು ಅರ್ಚಕರು ತಿಳಿಸಿದ್ದಾರೆ.

PREV
Read more Articles on
click me!

Recommended Stories

Mysuru Dasara: ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಸಿಗಲಿದೆ ವಿಶೇಷ ಉಡುಗೊರೆ; ಏನಿದು ಗಿಫ್ಟ್?
ಗೂಗಲ್ ಮ್ಯಾಪ್ ನಂಬಿ ಕಾಡಿನಲ್ಲಿ ಹಳ್ಳಕ್ಕೆ ಬಿದ್ದ ಕಾರು: ಕಾಡಾನೆಗಳ ಭಯದಲ್ಲೇ ರಾತ್ರಿ ಕಳೆದ ಬೆಂಗಳೂರಿನ ಟೆಕ್ಕಿಗಳು!