ನಂದಿ ಬೆಟ್ಟಕ್ಕೆ ಹರಿದು ಬಂದ ಪ್ರವಾಸಿಗರ ದಂಡು: ಟ್ರಾಫಿಕ್‌ ಕಿರಿಕಿರಿ

By Kannadaprabha NewsFirst Published Jul 31, 2023, 11:01 PM IST
Highlights

ವೀಕೆಂಡ್‌ ಮತ್ತು ಮಳೆಯಿಂದಾಗಿ ಕೆಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ಹಿನ್ನೆಲೆ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೆ ಹರಿದು ಬಂದಿತ್ತು. ಇದರಿಂದ ನಂದಿಬೆಟ್ಟರಸ್ತೆಯಲ್ಲಿ ಟ್ರಾಫಿಕ್‌ಜಾಮ್‌ ಉಂಟಾಯಿತು.

ಚಿಕ್ಕಬಳ್ಳಾಪುರ (ಜು.31): ವೀಕೆಂಡ್‌ ಮತ್ತು ಮಳೆಯಿಂದಾಗಿ ಕೆಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ಹಿನ್ನೆಲೆ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೆ ಹರಿದು ಬಂದಿತ್ತು. ಇದರಿಂದ ನಂದಿಬೆಟ್ಟರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ರಸ್ತೆಯಲ್ಲಿ ಐದಾರು ಕಿ.ಮೀ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಚಾರದಟ್ಟಣೆ ನಿಯಂತ್ರಿಸಲು ನಂದಿಗಿರಿಧಾಮ ಪೊಲೀಸರರು ಹರಸಾಹಸಪಡುವಂತಾಯಿತು. ನಂದಿಗಿರಿಧಾಮದ ಮೇಲೆ 300 ಕಾರ್‌ಗಳಿಗೆ ಮತ್ತು ಸುಮಾರು ಆರು ನೂರು ಬೈಕ್‌ಗಳಿಗೆ ಮಾತ್ರ ಪಾರ್ಕಿಂಗ್‌ ವ್ಯವಸ್ಥೆ ಇದ್ದು, ಪಾರ್ಕಿಂಗ್‌ ಲಾಟ್‌ ಸಹ ತುಂಬಿ ತುಳುಕುತ್ತಿತು.

ವಾಹನಗಳಿಂದಾಗಿ ಟ್ರಾಫಿಕ್‌ ಜಾಮ್‌: ವಾಹನಗಳಲ್ಲಿ ಟ್ರಾಫಿಕ್‌ ಮಧ್ಯ ಸಕ್ಕಿಕೊಂಡವರು ಮುಂದಕ್ಕೂ ಹೋಗಲಾದೆ ಹಿಂದಕ್ಕೂ ಹೋಗಲಾಗದೆ ಯಾತನೆ ಅನುಭವಿಸಿದರು. ಹನುಮಂತನ ಬಾಲದಂತೆ ವಾಹನಗಳು ಸಾಲುಗಟ್ಟಿನಿಂತಿದ್ದವು. ವೀಕೆಂಡ್‌ ಹಿನ್ನೆಲೆ ನಂದಿಗಿರಿಧಾಮಕ್ಕೆ ಪ್ರವಾಸಿಗರು ದಾಂಗುಡಿ ಇಟ್ಟಿದ್ದರು. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ನಂದಿ ಗಿರಿಧಾಮ ಪೋಲಿಸರ ಅಸಹಾಯಕತೆ ಎದ್ದುಕಾಣುತ್ತಿತ್ತ. ಚುಮು ಚುಮು ಚಳಿಗೆ ಕಾಫೀ, ಟೀ ಕುಡಿಯಲು ಸಹ ಪ್ರವಾಸಿಗರೆಗೆ ಯಾವುದೇ ವ್ಯವಸ್ಥೆ ಇರಲಿಲ್ಲ.

ಆ.5ರಂದು ಗೃಹಜ್ಯೋತಿ ಯೋಜನೆಗೆ ಚಾಲನೆ: ಸಚಿವ ತಿಮ್ಮಾಪೂರ

ನಂದಿಬೆಟ್ಟಕ್ಕೆ ಪ್ರವೇಶ ದೊರೆತವರು ಮಾತ್ರ ಅಲ್ಲಿಯ ಸೌಂದರ್ಯ ಸವಿದರು. ಪ್ರವಾಸಿಗರು ಬಂದ ವಾಹನಗಳಿಂದ ಬೆಟ್ಟದ ಮೇಲಿನ ಪಾರ್ಕಿಂಗ್‌ ಲಾಟ್‌ ಹೌಸ್‌ ಫುಲ್‌ ಆಗಿ,ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಗಿರಿಧಾಮದ ಸಿಬ್ಬಂದಿ ಹರಸಾಹಸ ಪಟ್ಟರು. ನಿಗದಿತ ಜನರಿಗೆ ಮಾತ್ರ ಪ್ರವೇಶ ನೀಡಿದ್ದರಿಂದ ಸಾಕಷ್ಟು ಮಂದಿ ಬೆಟ್ಟಕ್ಕೆ ಬಂದರೂ ಗಂಟೆಗಟ್ಟಲೇ ಸಾಲಿನಲ್ಲಿ ಕಾಯಬೇಕಾಯಿತು.

ವಾಹನ ಪಾರ್ಕಿಂಗ್‌ ಜಾಗ ಭರ್ತಿ: ಶನಿವಾರ ರಜೆ ಇದ್ದುದರಿಂದ ಅಂದೂ ಸಹಾ ಪ್ರವಾಸಿಗರು ಹೆಚ್ಚಾಗಿದ್ದರು. ಭಾನುವಾರ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚಾಗಿತ್ತು. ಪ್ರವಾಸಿಗರು ಕಾರು ಹಾಗೂ ಬೈಕ್‌ಗಳಲ್ಲಿ ನಂದಿಬೆಟ್ಟಕ್ಕೆ ಲಗ್ಗೆಯಿಟ್ಟಿದ್ದರು. ಆದರೆ, ನಂದಿ ಬೆಟ್ಟದಲ್ಲಿ ಕಾರು ಪಾರ್ಕಿಂಗ್‌ ಫುಲ್‌ ಆದ ಕಾರಣ ಕೆಲವರು ಬೆಟ್ಟದ ಬುಡದವರೆಗೂ ಬಂದು ವಾಪಸ್‌ ಹೋಗುವಂತಾಯಿತು.

ನಂದಿ ಬೆಟ್ಟದ ಮೇಲ್ಭಾಗದಲ್ಲಿ 300 ನಾಲ್ಕು ಚಕ್ರದ ವಾಹನ ಹಾಗೂ ಸಾವಿರ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ಮಾಡಲು ಸ್ಥಳಾವಕಾಶವಿದೆ. ಅಷ್ಟುವಾಹನಗಳಿಗೆ ಮಾತ್ರ ಬೆಟ್ಟದ ಮೇಲೆ ಪ್ರವೇಶ ನೀಡಲಾಗುತ್ತಿದೆ. ನೂರಕ್ಕೂ ಹೆಚ್ಚು ಕಾರುಗಳಲ್ಲಿ ಪ್ರವಾಸಿಗರು ಗಂಟೆಗಟ್ಟಲೇ ಕಾಯುವಂತಾಯಿತು. ಬೆಟ್ಟದ ಮೇಲಿಂದ ವಾಹನಗಳು ವಾಪಸ್‌ ಬಂದ ನಂತರ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿತ್ತು. ಹೀಗಾಗಿ ಕೆಲವರು ಕಾದು ಕಾದು ಸುಸ್ತಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್‌ ಆದರು.

Chikkamagaluru: ಸಾಂಪ್ರಾದಾಯಿಕ ಶೈಲಿಯಲ್ಲಿ ಗದ್ದೆ ನಾಟಿ ಮಾಡಿದ ಮಲೆನಾಡಿಗರು

ಮಕ್ಕಳಿಗೆ ನಿರಾಸೆ: ಭಾನುವಾರವಾದ್ದರಿಂದ ನಮಗೂ ಕಚೇರಿಗಳಿಗೆ ರಜೆ ಇದ್ದು, ಮಕ್ಕಳಿಗೂ ರಜೆ ಇರುವ ಕಾರಣ ಬೆಳಗ್ಗೆ ನಾಲ್ಕುವರೆಗೆ ನಂದಿ ಗಿರಿಧಾಮಕ್ಕೆ ಕಾರಿನಲ್ಲಿ ಬಂದೆವು ಆದರೆ ಬೆಟ್ಟದ ಅರ್ಧದಾರಿಯಲ್ಲಿಯೇ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡೆವು. ಸೂರ್ಯೋದಯವಾಗಿದೆ ಇಬ್ಬನಿ ಬೀಳುವುದನ್ನು ಮಕ್ಕಳಿಗೆ ತೋರಿಸಬೇಕೆಂದು ಕೊಂಡಿದ್ದೆವು. ಅದು ಆಗಲಿಲ್ಲಾ. ಹೋಗಲಿ ನಡೆದುಕೊಂಡೆ ಹೋಗೋವೆಂದು ಬಂದರೆ ಎರಡು ಕಿಲೋ ಮೀಟರ್‌ ನಡೆದು ಬಂದವು ಸುಸ್ತಾಗುತ್ತಿದೆ ಎಂದು ಬೆಂಗಳೂರಿನ ಮದುಸೂಧನ್‌ ಹೇಳಿದರು.

click me!