Chikkaballapur Nandi Hill: ‌ಪ್ಲಾಸ್ಟಿಕ್ ಮುಕ್ತ ನಂದಿಬೆಟ್ಟ ಮಾಡಲು ಪಣ

Published : Apr 29, 2022, 11:08 PM IST
Chikkaballapur Nandi Hill: ‌ಪ್ಲಾಸ್ಟಿಕ್ ಮುಕ್ತ ನಂದಿಬೆಟ್ಟ ಮಾಡಲು ಪಣ

ಸಾರಾಂಶ

ಕರ್ನಾಟಕದ ಊಟಿ, ಐತಿಹಾಸಿಕ ಪ್ರವಾಸಿ ತಾಣ ನಂದಿಬೆಟ್ಟದ ಅಭಿವೃದ್ದಿ ಪಥದಲ್ಲಿ ಸಾಗುತ್ತಿದ್ದು, ನಂದಿಬೆಟ್ಟದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡಲು ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ಹೇಳಿದ್ದಾರೆ.

ವರದಿ: ರವಿಕುಮಾರ್ ವಿ, ಸುವರ್ಣ ನ್ಯೂಸ್, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ (ಏ.29): ಕರ್ನಾಟಕದ ಊಟಿ, ಐತಿಹಾಸಿಕ ಪ್ರವಾಸಿ ತಾಣ ನಂದಿಬೆಟ್ಟದ ಅಭಿವೃದ್ದಿ ಪಥದಲ್ಲಿ ಸಾಗುತ್ತಿದ್ದು, ನಂದಿಬೆಟ್ಟದಲ್ಲಿ (Nandi Hill) ಸಾಕಷ್ಟು ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡಲು ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ (R Latha) ಹೇಳಿದ್ದಾರೆ. ನಂದಿಬೆಟ್ಟದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿ ಆರ್ ಲತಾ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪರಿಸರ ಸ್ನೇಹಿ ನಂದಿಬೆಟ್ಟವನ್ನಾಗಿ ಮಾಡಲು ಸರ್ಕಾರ ನಂದಿಬೆಟ್ಟದಲ್ಲಿ ಹಲವು ಯೋಜನೆಗಳನ್ನು ತರಲು ಮುಂದಾಗಿದೆ ಎಂದರು. 

ಇನ್ನೂ ನಂದಿಬೆಟ್ಟಕ್ಕೆ ರೂಪ್‌ವೇ ತರಲು ಈಗಾಗಲೇ ಕ್ಯಾಬಿನೆಟ್ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದರು. ಉಳಿದಂತೆ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿಗರಿಗಾಗಿ ಕ್ಯಾಬ್ ವ್ಯವಸ್ಥೆ ಮಾಡಲಾಗಿದ್ದು, ಹಂತ ಹಂತವಾಗಿ ನಂದಿಬೆಟ್ಟವನ್ನು ಅಭಿವೃದ್ದಿಪಡಿಸುವುದಾಗಿ ಹೇಳಿದರು. ಅಲ್ಲದೇ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು (Plastic Free) ಅರಿವು ಮೂಡಿಸುತ್ತಿದ್ದು, ಮೇ 1 ರಂದು ನಂದಿಬೆಟ್ಟದ ಮೆಲೆ ಸ್ವಚ್ಚತಾ ಅಭಿಯಾನ ನಡೆಸಲಿದ್ದೇವೆ ಎಂದು ಜಿಲ್ಲಾಧಿಕಾರಿ ಆರ್ ಲತಾ ಹೇಳಿದದರು.

Chikkaballapura Nandi Hill: ‌ಪ್ರವಾಸಿಗರಿಗೆ ವಿಕೇಂಡ್‌ನಲ್ಲಿ ನಂದಿಬೆಟ್ಟಕ್ಕೆ ಪ್ರವೇಶ ಮುಕ್ತ!

ಪ್ಲಾಸ್ಟಿಕ್ ಮುಕ್ತ ನಂದಿಬೆಟ್ಟಕ್ಕೆ ಕರೆ: ತನ್ನ ಅನನ್ಯ ಸೌಂದರ್ಯದಿಂದಲೇ ಎಲ್ಲರನ್ನು ಆಕರ್ಷಿಸುವ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಸಾವಿರಾರು ಪ್ರಯಾಣಿಕರು ಬರ್ತಾರೆ. ಇಂತಹ ನಂದಿಬೆಟ್ಟದಲ್ಲಿ ವಿಕೇಂಡ್ ಬಂದರೆ ಸಾಕು ಸಾವಿರಾರು ಪ್ರವಾಸಿಗರು ಬರ್ತಾರೆ. ಹೀಗಾಗಿ ಪ್ರವಾಸಿ ತಾಣ ನಂದಿಬೆಟ್ಟದಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಿದ್ದು, ಪ್ಲಾಸ್ಟಿಕ್ ಮುಕ್ತವಾಗಿಸಲು ಈಗಾಗಲೇ ಅರಿವು ಮೂಡಿಸಲಾಗಿದೆ. ಬರುವ ಪ್ರವಾಸಿಗರಿಗೂ ಕೂಡ ಪ್ಲಾಸ್ಟಿಕ್ ಬಳಸದಂತೆ ಹೇಳಲಾಗುತ್ತಿದೆ. ಪ್ರವಾಸಿಗರಿಗೆ ಮತ್ತಷ್ಟು ಅರಿವು ಮೂಡಿಸುವ ಸಲುವಾಗಿ ಇದೇ ಮೇ 1 ರಂದು ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .

ಸಾವಿರಕ್ಕೂ ಹೆಚ್ಚು ಮಂದಿಯಿಂದ ಶ್ರಮದಾನ: ನಂದಿಬೆಟ್ಟದ ಮೇಲೆ ಆಯೋಜಿಸಿರುವ ಸ್ವಚ್ಛತಾ ಅಭಿಯಾನದಲ್ಲಿ ಎಂಜನಿಯರ್ ವಿದ್ಯಾರ್ಥಿಗಳು, ಎನ್‌ಎಸ್‌ಎಸ್, ಎನ್‌ಸಿಸಿ, ತಂಡಗಳು ಹಾಗೂ ಸ್ಥಳೀಯ ಜನರು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿಯಿಂದ ಸ್ವಚ್ಛತಾ ಅಭಿಯಾನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಪ್ರಾದೇಶಿಕ ಆಯುಕ್ತರಾದ ನವೀನ್ ರಾಜ್‌ಸಿಂಗ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. 

ಪರಿಸರ ಸ್ನೇಹಿ ನಂದಿಬೆಟ್ಟವನ್ನಾಗಿಸಲು ಕ್ರಮ: ಒಂದೆಡೆ ಮೋಡಗಳ ಕಲರವ , ಎಲ್ಲೆಲ್ಲು ಮಂಜಿನ ಹನಿಗಳ ಸಿಂಚನದಿಂದ ಎಲ್ಲರನ್ನು ಆಕರ್ಷಿಸುವ ಪ್ರವಾಸಿ ತಾಣ ನಂದಿಬೆಟ್ಟ. ಇಂತಹ ನಂದಿಬೆಟ್ಟದಲ್ಲಿ ಹಸರೀಕರಣ ಮಾಡಲು ಹಲವು ಕ್ರಮಗಳಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಪ್ರವಾಸಿಗರ ದಟ್ಟಣೆ ಹಾಗೂ ಅಭಿವೃದ್ದಿ ಕಾರ್ಯಗಳಿಂದ ಇಲ್ಲಿನ ಪರಿಸರಕ್ಕೆ ಧಕ್ಕೆಯಾಗದಂತೆ ಕ್ರಮವಹಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 

Anjanadri Hill: ನಂದಿಬೆಟ್ಟ ರೀತಿ ಅಂಜನಾದ್ರಿಯಲ್ಲಿ ರೋಪ್‌ ವೇ ನಿರ್ಮಾಣ: ಸಿಎಂ ಬೊಮ್ಮಾಯಿ

ರೂಪ್ ವೇ ಕನಸು ನನಸು: ಬಹುದಿನಗಳಿಂದ ನಂದಿಬೆಟ್ಟಕ್ಕೆ ರೂಪ್‌ವೇ ಮಾಡಬೇಕೆಂಬ ಕನಸು ಈಗ ನನಸಾಗುವತ್ತ ಬಂದಿದೆ. ಸಚಿವ ಡಾ. ಕೆ. ಸುಧಾಕರ್ ಅವರ ಪ್ರಯತ್ನದಿಂದ ನಂದಿಬೆಟ್ಟಕ್ಕೆ ರೂಪ್‌ವೇ ಮಾಡಲು ಸರ್ಕಾರ ಅನಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದ್ದು, ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ. ನಟ ಶಂಕರ್ ನಾಗ್ ಕೂಡ ನಂದಿಬೆಟ್ಟಕ್ಕೆ ರೂಪ್‌ವೇ ಮಾಡಬೇಕೆಂಬ ಕನಸು ಕಂಡಿದ್ದರು. ಇದೀಗ ಈ ಕನಸು ನನಸಾಗುವ ಕಾಲ ಸಮೀಪದಲ್ಲಿದ್ದು, ರೂಪ್‌ವೇ ಯಿಂದ ನಂದಿಬೆಟ್ಟಕ್ಕೆ ಮತ್ತಷ್ಟು ಮೆರಗು ಬರಲಿದೆ. 

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ