ವಿಶ್ವ ವಿಖ್ಯಾತ ನಂದಿಗಿರಿಧಾಮ ಸಮೀಪ ಭಾರಿ ನಿಗೂಢ ಸ್ಪೋಟ: ಬ್ರಹ್ಮಗಿರಿ ಬೆಟ್ಟದಿಂದ ಉರುಳಿಬಿದ್ದ ಬೃಹತ್ ಬಂಡೆಗಳು!

Published : Oct 16, 2026, 12:39 PM IST
Mysterious Explosion Near Nandi Hills

ಸಾರಾಂಶ

ಚಿಕ್ಕಬಳ್ಳಾಪುರದ ನಂದಿಗಿರಿಧಾಮದ ಸಮೀಪವಿರುವ ಬ್ರಹ್ಮಗಿರಿ ಬೆಟ್ಟದಲ್ಲಿ ನಿಗೂಢ ಸ್ಫೋಟವೊಂದು ಸಂಭವಿಸಿದೆ. ಸ್ಫೋಟದ ರಭಸಕ್ಕೆ ಬೃಹತ್ ಬಂಡೆಗಳು ಉರುಳಿಬಿದ್ದಿದ್ದು, ಭೂಕುಸಿತದಂತಹ ಭೀಕರ ದೃಶ್ಯ ಕಂಡುಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಚಿಕ್ಕಬಳ್ಳಾಪುರ (ಅ.15): ವಿಶ್ವ ವಿಖ್ಯಾತ ಪ್ರವಾಸಿ ತಾಣವಾದ ನಂದಿಗಿರಿಧಾಮದ ತೀರಾ ಸಮೀಪದಲ್ಲೇ ಭಾರಿ ನಿಗೂಢ ಸ್ಪೋಟವೊಂದು ಸಂಭವಿಸಿದ್ದು, ಸ್ಪೋಟದ ರಭಸಕ್ಕೆ ಬೆಟ್ಟದಲ್ಲಿದ್ದ ಬೃಹತ್ ಬಂಡೆಗಳು ಧರಗುರುಳಿ ಕೆಳಕ್ಕೆ ಬಿದ್ದಿರುವ ರೋಚಕ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಪುರಾಣ ಪ್ರಸಿದ್ಧ ಹಾಗೂ ನಂದಿಗಿರಿಧಾಮಕ್ಕೆ ಹೊಂದಿಕೊಂಡಂತೆಯೇ ಇರುವ 'ಬ್ರಹ್ಮಗಿರಿ ಬೆಟ್ಟ'ದಲ್ಲಿ ಈ ದಿಢೀರ್ ಬೆಳವಣಿಗೆ ಸಂಭವಿಸಿದೆ.

ಬ್ರಹ್ಮಗಿರಿ ಬೆಟ್ಟದಲ್ಲಿ ದಿಢೀರನೆ ಸಂಭವಿಸಿದ ಈ ನಿಗೂಢ ಸ್ಪೋಟದ ತೀವ್ರತೆಗೆ ಬೆಟ್ಟದ ಮೇಲ್ಭಾಗದಲ್ಲಿದ್ದ ದೊಡ್ಡ ದೊಡ್ಡ ಬಂಡೆಕಲ್ಲುಗಳು ಒಂದಕ್ಕೊಂದು ಅಪ್ಪಳಿಸುತ್ತಾ ಕೆಳಭಾಗಕ್ಕೆ ಉರುಳಿಬಿದ್ದಿವೆ. ಬೆಟ್ಟದ ಸಾಲಿನಿಂದ ಕಲ್ಲುಗಳು ಧುಮುಕುತ್ತಿದ್ದ ದೃಶ್ಯವು ಭೀಕರ ಭೂಕುಸಿತದ (Landslide) ಮಾದರಿಯಲ್ಲಿ ಕಂಡುಬಂದಿದ್ದು, ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕೆಲಕಾಲ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಈ ಭೀಕರ ಹಾಗೂ ನಡುಕ ಹುಟ್ಟಿಸುವ ದೃಶ್ಯಗಳನ್ನು ಬೆಟ್ಟದ ಕೆಳಭಾಗದಲ್ಲಿದ್ದ ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ.

ತಪ್ಪಿದ ಭಾರಿ ಪ್ರಾಣಾಪಾಯ

ಸ್ಪೋಟದ ಶಬ್ದ ಹಾಗೂ ಬಂಡೆಗಳು ಉರುಳುತ್ತಿದ್ದ ದೃಶ್ಯ ಕಂಡು ಸ್ಥಳೀಯರು ಹಾಗೂ ಪ್ರವಾಸಿಗರು ಕೆಲಕಾಲ ಆತಂಕಕ್ಕೊಳಗಾಗಿದ್ದರು. ಆದರೆ, ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಘಟನೆ ನಡೆದ ಬ್ರಹ್ಮಗಿರಿ ಬೆಟ್ಟವು ನಂದಿಗಿರಿಧಾಮಕ್ಕೆ ತೀರಾ ನಿಕಟವಾಗಿದ್ದು, ನಿಗೂಢ ಸ್ಪೋಟಕ್ಕೆ ನೈಜ ಕಾರಣವೇನು? ಕಲ್ಲು ಗಣಿಗಾರಿಕೆ ಅಥವಾ ಸ್ಫೋಟದ ತೀವ್ರತೆಯಿಂದ ಹೀಗಾಗಿದೆಯೇ ಅಥವಾ ನೈಸರ್ಗಿಕವಾಗಿ ಬಂಡೆ ಕುಸಿದಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

PREV
Read more Articles on
click me!

Recommended Stories

Hassan: ವರ್ಷಗಳ ಬಳಿಕ ಹಾಸನಕ್ಕೆ ಬಂದ IAS ಅಧಿಕಾರಿ ರೋಹಿಣಿ ಸಿಂಧೂರಿ, ದೇವಿ ದರ್ಶನ ಪಡೆದು ಹೇಳಿದ್ದೇನು?
ಮಡಕಶಿರಾ-ಮಧುಗಿರಿ-ಪಾವಗಡ-ಕೊರಟಗೆರೆ ರೈಲ್ವೆ ಮಾರ್ಗ ಆರಂಭದ ಗುಡ್‌ನ್ಯೂಸ್ ನೀಡಿದ V Somanna