ಚಾರ್ಮಾಡಿ ಘಾಟ್‌ ಪ್ರಯಾಣಿಕರೇ ಗಮನಿಸಿ : ಡೀಸಿ ಆದೇಶವೇನಿದೆ?

By Kannadaprabha News  |  First Published Mar 18, 2021, 7:18 AM IST

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಇದೀಗ ವಾಹನ ಸಂಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ನೀಡಿದ ಆದೇಶವೇನು?


ಚಿಕ್ಕಮಗಳೂರು (ಮಾ.18): ಜಿಲ್ಲೆಯ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಲಘು ಹಾಗೂ ಕೆಲವು ಘನ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಆದೇಶವು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌, ಆರು ಚಕ್ರದ ಲಾರಿ, ನಾಲ್ಕು ಚಕ್ರದ ವಾಹನಗಳು, ಟೆಂಪೊ ಟ್ರಾವೆಲರ್‌, ಅಂಬುಲೆನ್ಸ್‌, ಕಾರು, ಜೀಪು, ವ್ಯಾನ್‌, ಎಲ್‌ಸಿವಿ (ಮಿನಿ ವ್ಯಾನ್‌) ಹಾಗೂ ದ್ವಿಚಕ್ರ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಬುಲೆಟ್‌ ಟ್ಯಾಂಕ​ರ್‍ಸ್, ಶೀಫ್ಟ್‌ ಕಾರ್ಗೊ ಕಂಟೈನರ್ಸ್‌ ಹಾಗೂ ಲಾಂಗ್‌ ಚಾಸಿಸ್‌ ವಾಹನಗಳು, ಹೆವಿ ಕಮರ್ಷಿಯಲ್‌ ವೆಹಿಕಲ್ಸ್‌, ಮಲ್ಟಿಎಕ್ಸೆಲ್‌ ಟ್ರಕ್‌ ಟೈಲರ್‌, ಕೆಎಸ್‌ಆರ್‌ಟಿಸಿ ರಾಜ ಹಂಸ ಬಸ್‌ ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಾಣಿಕೆಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

Latest Videos

undefined

ಚಾರ್ಮಾಡಿ ಘಾಟ್‌ ರಸ್ತೆಗಳಲ್ಲಿ ವಾಹನ ನಿಲ್ಲಿಸಿದ್ರೆ ಬೀಳುತ್ತೆ ಕೇಸ್

ಈ ಮಾರ್ಗದಲ್ಲಿ ಅಗತ್ಯವಿರುವ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದವರು ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಹಾಗೂ ಈ ಮಾರ್ಗದಲ್ಲಿ ಯಾವುದೇ ರೀತಿಯ ಅಪಘಾತಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಚಾರ್ಮಾಡಿ ಘಾಟ್‌ ಭಾಗದಲ್ಲಿ ಬಹಳಷ್ಟುಕಡೆ ಭೂ ಕುಸಿತದಿಂದ ರಸ್ತೆಗೆ ತೀವ್ರತರವಾದ ಧಕ್ಕೆ ಉಂಟಾಗಿದೆ. ಇದರಿಂದ ಅತ್ಯಂತ ಜಾಗರೂಕತೆಯಿಂದ ನಿಗದಿತ ವೇಗದ ಮಿತಿಯೊಂದಿಗೆ ವಾಹನಗಳು ಸಂಚರಿಸಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ.

click me!