ಚಾರ್ಮಾಡಿ ರಸ್ತೆ ಸಂಚಾರಕ್ಕೆ ಮುಕ್ತ : ಆದ್ರೆ ಕಂಡೀಶನ್ ಇದೆ

By Kannadaprabha News  |  First Published Nov 28, 2019, 8:24 AM IST

ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಹಲವು ನಿಯಮಗಳನ್ನು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. 


ಮಂಗ​ಳೂ​ರು [ನ.28]:  ಕಳೆದ ಆಗ​ಸ್ಟ್‌​ನಲ್ಲಿ ಸುರಿದ ಭಾರಿ ಮಳೆಗೆ ಕುಸಿದು ಹೋಗಿದ್ದ ರಾಷ್ಟ್ರೀಯ ಹೆದ್ದಾರಿ- 73ರ ಮಂಗ​ಳೂರು- ವಿಲ್ಲು​ಪುರಂ ರಸ್ತೆಯ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ದಿನದ 24 ಗಂಟೆಯೂ ಲಘು ವಾಹ​ನ​ಗಳ ಸಂಚಾರಕ್ಕೆ ಗುರು​ವಾ​ರ​ದಿಂದ ಅವ​ಕಾಶ ನೀಡಲಾಗಿದೆ. ಈ ಕುರಿತು ದಕ್ಷಿಣ ಕನ್ನಡ ​ಜಿ​ಲ್ಲಾ​ಧಿ​ಕಾ​ರಿ ಸಿಂಧು ಬಿ.ರೂ​ಪೇಶ್‌ ಆದೇಶ ಹೊರ​ಡಿ​ಸಿ​ದ್ದಾರೆ.

ಚಾರ್ಮಾಡಿ ನದಿ​ಪಾ​ತ್ರಕ್ಕೆ ಶಾಶ್ವತ ತಡೆ​ಗೋಡೆ: ಬೊಮ್ಮಾಯಿ ಭರವಸೆ...

Latest Videos

undefined

ಆ.8ರಿಂದ ಸುರಿದ ಭಾರಿ ಮಳೆಗೆ ಘಾಟ್‌ ಭಾಗದ ಸುಮಾರು 14 ಕಡೆ ಗುಡ್ಡ ಕುಸಿತ ಉಂಟಾಗಿ ಸಂಚಾರ ಸಂಪೂರ್ಣ ಸ್ಥಗಿ​ತ​ಗೊಂಡಿತ್ತು. ಬಳಿಕ ಭಾಗಶಃ ದುರಸ್ತಿ ಕಾರ್ಯದ ಬಳಿಕ ಸೆ.14ರಿಂದ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಸೀಮಿ​ತ​ಗೊ​ಳಿಸಿ ಲಘು ವಾಹ​ನ​ಗಳ ಸಂಚಾ​ರಕ್ಕೆ ಅವ​ಕಾಶ ಕಲ್ಪಿ​ಸ​ಲಾ​ಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೀಗ ಜಿಲ್ಲಾ​ಧಿ​ಕಾರಿ ಹೊರ​ಡಿ​ಸಿ​ರುವ ಆದೇ​ಶದ ಪ್ರಕಾರ ಕಾರು, ಜೀಪು, ಟೆಂಪೋ, ವ್ಯಾನ್‌, ಮಿನಿ​ವ್ಯಾನ್‌, ದ್ವಿಚಕ್ರ ವಾಹ​ನ​ಗಳು ಹಾಗೂ ಆ್ಯಂಬು​ಲೆ​ನ್ಸ್‌​ಗ​ಳಿಗೆ ದಿನ​ಪೂರ್ತಿ ಸಂಚಾ​ರಕ್ಕೆ ಅವ​ಕಾಶ ಕಲ್ಪಿ​ಸ​ಲಾ​ಗಿದ್ದು, ವೇಗದ ಮಿತಿ ಗಂಟೆಗೆ 20 ಕಿ.ಮೀ. ಮೀರು​ವಂತಿಲ್ಲ. ಜೊತೆಗೆ ಜಾರ್ಮಾಡಿ ಘಾಟ್‌ ರಸ್ತೆ​ಯಲ್ಲಿ ಫೋಟೊ​ಗ್ರಫಿ ಹಾಗೂ ಸೆಲ್ಫಿ ತೆಗೆ​ಯು​ವು​ದನ್ನು ನಿಷೇ​ಧಿ​ಸ​ಲಾ​ಗಿದೆ. ಇದರ ಹೊರ​ತಾಗಿ ಬಸ್‌ ಸಹಿತ ಎಲ್ಲ ವಿಧದ ಭಾರಿ ವಾಹ​ನ​ಗಳ ಸಂಚಾ​ರದ ನಿಷೇ​ಧ ಮುಂದಿನ ಆದೇ​ಶದ ವರೆಗೆ ಜಾರಿ​ಯ​ಲ್ಲಿ​ರು​ತ್ತದೆ ಎಂದು ಜಿಲ್ಲಾ​ಧಿ​ಕಾರಿ ಆದೇಶ ತಿಳಿ​ಸಿ​ದೆ.

click me!