ಬಿಜೆಪಿ ಈಶ್ವರಪ್ಪ ಕೈಬಿಡಲ್ಲ, ಮುಂದೆ ಉನ್ನತ ಹುದ್ದೆ ಸಿಗಲಿದೆ: ಕಾಶಿ ಪೀಠದ ಶ್ರೀಗಳು

Published : Jun 11, 2023, 04:00 AM IST
ಬಿಜೆಪಿ ಈಶ್ವರಪ್ಪ ಕೈಬಿಡಲ್ಲ, ಮುಂದೆ ಉನ್ನತ ಹುದ್ದೆ ಸಿಗಲಿದೆ: ಕಾಶಿ ಪೀಠದ ಶ್ರೀಗಳು

ಸಾರಾಂಶ

ಈಶ್ವರಪ್ಪ ಅಪರೂಪದ ರಾಜಕಾರಣಿ. ದೇವರು, ಧರ್ಮ ಹಾಗೂ ಗುರುಗಳಲ್ಲಿ ಅಪಾರ ನಿಷ್ಠೆ ಉಳ್ಳವರು. ಬಿಜೆಪಿ ಸಂಘಟನೆಯ ಜತೆಗೆ ಸಾಮಾಜಿಕ ಸೇವೆಗಳಲ್ಲಿ ತೊಡಗಿ ಧಾರ್ಮಿಕ ಚಟುವಟಿಕೆಗಳ ಮೂಲಕ ಗಮನಸೆಳೆದ ಅಪರೂಪದ ರಾಜಕಾರಣಿ. ಪಕ್ಷ ಅವರನ್ನು ಕೈಬಿಡಲು ಸಾಧ್ಯವೇ ಇಲ್ಲ. ಅವರಿಗೆ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆ ನೀಡುತ್ತದೆ: ಪೀಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು

ಶಿವಮೊಗ್ಗ(ಜೂ.11):  ಬಿಜೆಪಿ ಕೆ.ಎಸ್‌.ಈಶ್ವರಪ್ಪನವರನ್ನು ಎಂದಿಗೂ ಕೈಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಉನ್ನತ ಹುದ್ದೆ ಲಭಿಸಲಿದೆ. ಅದನ್ನು ಅವರು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಭವಿಷ್ಯ ನುಡಿದರು.

ಇಲ್ಲಿನ ಮಲ್ಲೇಶ್ವರ ನಗರದಲ್ಲಿರುವ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪನವರ ನಿವಾಸದಲ್ಲಿ 75ನೇ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆರ್ಶೀವಚನ ನೀಡಿದರು. ಈಶ್ವರಪ್ಪ ಅಪರೂಪದ ರಾಜಕಾರಣಿ. ದೇವರು, ಧರ್ಮ ಹಾಗೂ ಗುರುಗಳಲ್ಲಿ ಅಪಾರ ನಿಷ್ಠೆ ಉಳ್ಳವರು. ಬಿಜೆಪಿ ಸಂಘಟನೆಯ ಜತೆಗೆ ಸಾಮಾಜಿಕ ಸೇವೆಗಳಲ್ಲಿ ತೊಡಗಿ ಧಾರ್ಮಿಕ ಚಟುವಟಿಕೆಗಳ ಮೂಲಕ ಗಮನಸೆಳೆದ ಅಪರೂಪದ ರಾಜಕಾರಣಿ. ಪಕ್ಷ ಅವರನ್ನು ಕೈಬಿಡಲು ಸಾಧ್ಯವೇ ಇಲ್ಲ. ಅವರಿಗೆ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆ ನೀಡುತ್ತದೆ. ಆ ಮೂಲಕ ಅವರು ಸಮರ್ಥವಾಗಿ ದೇಶ ಸೇವೆ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ದೇಶ ಕಟ್ಟುವಲ್ಲಿ ಯುವಜನತೆ ಜವಾಬ್ದಾರಿ ದೊಡ್ಡದು: ಸಂಸದ ಬಿ.ವೈ.ರಾಘವೇಂದ್ರ

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿರುವ ಕಾಶಿ ಜಗದ್ಗುರುಗಳೇ ನನ್ನ ಜನ್ಮದಿನದಂದು ಆಗಮಿಸಿ ಆಶೀರ್ವಾದ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯ ಮತ್ತು ದೇಶದ ಕೆಲಸ ಮಾಡಲು ಹೆಚ್ಚಿನ ಸ್ಫೂರ್ತಿ ಬಂದಿದೆ ಎಂದರು.

ಪಕ್ಷ ಯಾವ ಜವಾಬ್ದಾರಿ ನೀಡಿದರೂ ಸ್ವೀಕರಿಸುತ್ತೇನೆ. ನನಗೆ ಅದೇ ಬೇಕು, ಇದೇ ಆಗಬೇಕು ಎಂದೇನೂ ಇಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವ ಅವಕಾಶ ಬಿಜೆಪಿಯಲ್ಲಿದೆ. ನನ್ನ ಇಡೀ ಜೀವನವನ್ನು ನನ್ನ ಧರ್ಮ ಮತ್ತು ನನ್ನ ದೇಶಕ್ಕಾಗಿ ಮುಡಿಪಾಗಿಡುತ್ತೇನೆ ಅಂತ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ. 

PREV
Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್