ಅಪರೂಪದ ಕಾಯಿಲೆಗೆ ತುತ್ತಾದ ನೃತ್ಯಗಾರ್ತಿ ಚಾಂದಿನಿಗೆ ಬೇಕಿದೆ ಆರ್ಥಿಕ ನೆರವು

By Suvarna News  |  First Published May 16, 2024, 4:53 PM IST

ಆಕೆ ವಿದ್ಯಾವಂತೆ ಜೊತೆಗೆ ನೃತ್ಯ ಶಿಕ್ಷಕಿ. ಅದೆಷ್ಟೋ ವಿದ್ಯಾರ್ಥಿಗಳಿಗೆ ತನ್ನ ನೃತ್ಯ ಕಲೆಯನ್ನು ಧಾರೆಯೆರೆದಿದ್ದ ಚಾಂದಿನಿ ಈಗ ಹಾಸಿಗೆ ಹಿಡಿದಿದ್ದಾರೆ. ಅಪರೂಪದ‌ ಕಾಯಿಲೆಯಿಂದ ಬಳಲ್ತಿರುವ ಆಕೆ ನೆರವಿಗಾಗಿ ಅಂಗಲಾಚಿದ್ದಾರೆ.


ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣ ನ್ಯೂಸ್

 ಬೆಂಗಳೂರು (ಮೇ16): ಆಕೆ ವಿದ್ಯಾವಂತೆ ಜೊತೆಗೆ ನೃತ್ಯ ಶಿಕ್ಷಕಿ. ಅದೆಷ್ಟೋ ವಿದ್ಯಾರ್ಥಿಗಳಿಗೆ ತನ್ನ ನೃತ್ಯ ಕಲೆಯನ್ನು ಧಾರೆಯೆರೆದಿದ್ದ ಚಾಂದಿನಿ ಈಗ ಹಾಸಿಗೆ ಹಿಡಿದಿದ್ದಾರೆ. ಅಪರೂಪದ‌ ಕಾಯಿಲೆಯಿಂದ ಬಳಲ್ತಿರುವ ಆಕೆ ನೆರವಿಗಾಗಿ ಅಂಗಲಾಚಿದ್ದಾರೆ.

Tap to resize

Latest Videos

ಈಕೆ ಹೆಸರು ಚಾಂದಿನಿ. ದ.ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸ್ತಿದ್ರು. ಕಳೆದ ಹಲವು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ಹೇಳಿಕೊಟ್ಟಿರುವ ಚಾಂದಿನಿ ಈಗ ಹಾಸಿಗೆಯಿಂದ ಮೇಲೇಳಕೆ ಆಗದೆ ಇರುವ ಸ್ಥಿತಿಯಲ್ಲಿದ್ದಾರೆ.

ಮಗಳು ನೇಹಾ ಕಳ್ಕೊಂಡ ನೋವಿನಲ್ಲಿಯೇ, ಅಂಜಲಿ ಕುಟುಂಬಕ್ಕೆ 1 ಲಕ್ಷ ರೂ. ನೆರವು ಕೊಟ್ಟ ನಿರಂಜನ ಹಿರೇಮಠ

ಯೆಸ್ 33ವರ್ಷದ ಚಾಂದಿನಿ ಮಾಸ್ಟ್ ಸೆಲ್ ಆಕ್ಟಿವೇಶನ್ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯಿಂದ ಬಳಲ್ತಿದ್ದಾರೆ. ಕಳೆದ ಮೂವತ್ತು ವರ್ಷದಿಂದಲೂ ಒಂದಲ್ಲ ಒಂದು ಕಾಯಿಲೆಯಿಂದ ಬಳಲ್ತಿದ್ದ ಚಾಂದಿನಿಗೆ ಇರೋ ಈ ಅಪರೂಪದ ಕಾಯಿಲೆ ಬಗ್ಗೆ ಗೊತ್ತೇ ಇರಲಿಲ್ಲ. ಹೀಗಾಗಿ ಸುಳ್ಯ, ಮಂಗಳೂರು ಸೇರಿದಂತೆ ಹಲವೆಡೆ ಚಿಕಿತ್ಸೆ ಪಡೆದಿದ್ರೂ ಕೂಡ ಗುಣಮುಖರಾಗಿರಲಿಲ್ಲ. ಇದೀಗ ಹೈದ್ರಾಬಾದ್ ನ ಎಐಜೆ ಆಸ್ಪತ್ರೆಯಲ್ಲಿ ಕಳೆದ ಎರಡು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಚಿಕಿತ್ಸೆಗೆ 70ಲಕ್ಷಕ್ಕೂ ಅಧಿಕ  ವೆಚ್ಚ ತಗುಲಿದ್ದು, ಇನ್ನೂ ಕೂಡ ಹಣದ ಅಗತ್ಯವಿದೆ. ಹೀಗಾಗಿ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಮಾಡುವಂತೆ ಕುಟುಂಬ ಅಂಗಲಾಚಿದೆ.

ಚಾಂದಿನಿಯ ಕಷ್ಟ ನೋಡಲಾರದೆ ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಹೇಗಾದರೂ ಮಾಡಿ ಚಾಂದಿನಿ ಜೀವ ಉಳಿಸ್ಬೇಕು ಅಂತ ಹಣ ಹೊಂದಾಣಿಕೆ ಮಾಡ್ತಿದ್ದಾರೆ. ಹಲವು ಸಂಘ ಸಂಸ್ಥೆಗಳು ಚಾಂದಿನಿ ಚೇತರಿಸಿಕೊಳ್ಳಲು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇತ್ತ ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಿ ಬಂದು ತಮ್ಮ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಮುಂಡಾಜೆ, ಚಾರ್ಮಾಡಿ ಸುತ್ತಮುತ್ತ ಮಳೆ, ತುಂಬಿ ಹರಿದ ಮೃತ್ಯುಂಜಯ ನದಿ

ಚಾಂದಿನಿಗೆ ನಾಲ್ಕು ವರ್ಷದ ಮಗನಿದ್ದು, ಜೀವ ಉಳಿಸಿಕೊಡಿ ಅಂತಿದ್ದಾರೆ ಮನೆಯವರು. ಚಾಂದಿನಿ ಆರೋಗ್ಯ ಚೇತರಿಸ್ಕೊಳ್ಬೇಕು ಅಂದ್ರೆ ಇನ್ನೂ ಮೂರು ತಿಂಗಳ ಚಿಕಿತ್ಸೆ ಅಗತ್ಯವಿದೆ. ಹೀಗಾಗಿ ನೆರವಿಗೆ ಹಸ್ತ ಚಾಚಿದ್ದಾರೆ. ಜನ ಸಹಾಯ ಮಾಡುವ ಮೂಲಕ ಚಾಂದಿನಿ ಆರೋಗ್ಯ ಸುಧಾರಿಸಲಿ ಅನ್ನೋದು ನಮ್ಮ ಆಶಯ ಕೂಡ.
 

click me!