ಸಾಮಾಜಿಕ ಪಿಡುಗಾಗಿರುವ ಕೊರೋನಾ ವೈರಸ್‌ನ್ನು ನಿಯಂತ್ರಿಸುವ ಹಾಗೂ ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಾಗಿದೆ. ಇದರಿಂದ ಕೊಳಗೇರಿ ನಿವಾಸಿಗಳು, ಕಟ್ಟಡ ಕಾರ್ಮಿಕರು, ಅಲೆಮಾರಿ ಜನಾಂಗದವರು ಸಂಕಷ್ಟಕ್ಕೀಡಾಗಿದ್ದಾರೆ. ಈ ದಿಸೆಯಲ್ಲಿ ಸರ್ಕಾರದ ನಿರ್ದೇಶನದಂತೆ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟವು ಪ್ರತಿನಿತ್ಯ ಲಾಕ್‌ಡೌನ್ ಮುಗಿಯುವವರೆಗೆ 10 ಸಾವಿರ ಲೀಟರ್ ಹಾಲನ್ನು ಉಚಿತವಾಗಿ ನೀಡಲು ಮುಂದಾಗಿದೆ.
ಚಾಮರಾಜನಗರ(ಏ.05): ಸಾಮಾಜಿಕ ಪಿಡುಗಾಗಿರುವ ಕೊರೋನಾ ವೈರಸ್‌ನ್ನು ನಿಯಂತ್ರಿಸುವ ಹಾಗೂ ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಾಗಿದೆ. ಇದರಿಂದ ಕೊಳಗೇರಿ ನಿವಾಸಿಗಳು, ಕಟ್ಟಡ ಕಾರ್ಮಿಕರು, ಅಲೆಮಾರಿ ಜನಾಂಗದವರು ಸಂಕಷ್ಟಕ್ಕೀಡಾಗಿದ್ದಾರೆ. ಈ ದಿಸೆಯಲ್ಲಿ ಸರ್ಕಾರದ ನಿರ್ದೇಶನದಂತೆ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟವು ಪ್ರತಿನಿತ್ಯ ಲಾಕ್‌ಡೌನ್ ಮುಗಿಯುವವರೆಗೆ 10 ಸಾವಿರ ಲೀಟರ್ ಹಾಲನ್ನು ಉಚಿತವಾಗಿ ನೀಡಲು ಮುಂದಾಗಿದೆ.
ಜಿಲ್ಲೆಯಲ್ಲಿ ಯಳಂದೂರು ಭಾಗದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಹಾಗೂ ಕಟ್ಟಡ ಕಾರ್ಮಿಕರು, ಅಲೆಮಾರಿ ಜನಾಂಗ ಸೇರಿದಂತೆ 9,300 ಕುಟುಂಬಗಳನ್ನು ಗುರುತಿಸಿದ್ದು, ಈ ಕುಟುಂಬಗಳಿಗೆ ನೇರವಾಗಿ ಸ್ಥಳೀಯ ಪಟ್ಟಣ ಪಂಚಾಯಿತಿ, ನಗರಸಭೆ, ಪುರಸಭೆ ಗ್ರಾಮ ಪಂಚಾಯಿತಿಗಳ ಮೂಲಕ ಅವರ ಮನೆಗಳಿಗೆ ಪ್ರತಿ ಕುಟುಂಬಕ್ಕೆ 1ಲೀ. ಹಾಲನ್ನು ತಲುಪಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಪಪಂ. ಮುಖ್ಯಾಧಿಕಾರಿ ನಾಗರತ್ನ, ಆರೋಗ್ಯಾಧಿಕಾರಿ ಮಹೇಶ್ ಕುಮಾರ್, ಸದಸ್ಯರಾದ ಕೆ.ಮಲ್ಲಯ್ಯ, ಮಹದೇವನಾಯ್ಕ, ಮಹೇಶ್, ವೈ.ಜಿ. ರಂಗನಾಥ್, ಸವಿತಾ, ಎಸ್. ಮಂಜು, ಪ್ರಭಾವತಿ, ಬಿ.ರವಿ, ಸುಶೀಲಾ, ಲಕ್ಷ್ಮೇ, ಶಾಂತಮ್ಮ ರಾಜಸ್ವ ನಿರೀಕ್ಷಕ ಆರ್.ನಂಜುಂಡ ಶೆಟ್ಟಿ, ಸಮುದಾಯ ಸಂಘಟಕ ಪರಶಿವಮೂರ್ತಿ, ಮಲ್ಲು, ರಘು, ರಾಜು ಸೇರಿದಂತೆ ಇದ್ದರು.
ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕೊಳೆಗೇರಿ ನಿವಾಸಿಗಳು, ಕಟ್ಟಡ ಕಾರ್ಮಿಕರು, ಅಲೆಮಾರಿ ಜನಾಂಗದವರಿಗೆ ಸರ್ಕಾರದ ನಿರ್ದೇಶನದ ಮೇರೆಗೆ ಚಾಮರಾಜನಗರ ಹಾಲು ಒಕ್ಕೂಟವು ಪ್ರತಿನಿತ್ಯ 10 ಸಾವಿರ ಲೀಟರ್ ಹಾಲನ್ನು 9,300 ಕುಟುಂಬದ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಚಾಮುಲ್ ಉಪ ವ್ಯವಸ್ಥಾಪಕ ಶ್ರೀಕಾಂತ್ ಹೇಳಿದ್ದಾರೆ.