ರಾಜ್ಯದಲ್ಲಿ ಕೊರೋನಾರಹಿತ ಏಕೈಕ ಜಿಲ್ಲೆ, ಸೋಷಿಯಲ್ ಮೀಡಿಯಾ ಸ್ಟೇಟಸ್‌ಗಳು ವೈರಲ್

By Kannadaprabha NewsFirst Published May 26, 2020, 12:37 PM IST
Highlights

ಕೊರೋನಾ ಮುಕ್ತ ಏಕಮಾತ್ರ ಜಿಲ್ಲೆಯಾಗಿ ಗಡಿಜಿಲ್ಲೆ ಚಾಮರಾಜನಗರ ಮಾತ್ರ ಉಳಿದುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ಸ್ಟೇಟಸ್‌ ಭಾರಿ ವೈರಲ್‌ ಆಗುತ್ತಿದೆ.

ಚಾಮರಾಜನಗರ(ಮೇ 26): ಕೊರೋನಾ ಮುಕ್ತ ಏಕಮಾತ್ರ ಜಿಲ್ಲೆಯಾಗಿ ಗಡಿಜಿಲ್ಲೆ ಚಾಮರಾಜನಗರ ಮಾತ್ರ ಉಳಿದುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ಸ್ಟೇಟಸ್‌ ಭಾರಿ ವೈರಲ್‌ ಆಗುತ್ತಿದೆ.

ರಾಮನಗರದಲ್ಲಿ ಸೋಮವಾರ ಕೊರೋನಾ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಲ್ಲೂ ಮಳವಳ್ಳಿ ಸೋಂಕಿತನ ಭಯ ಹೆಚ್ಚು ಆತಂಕ ಹುಟ್ಟಿಸಿದೆ. ಕೊರೋನಾ ಸೋಂಕಿತರು ತಮಿಳುನಾಡು, ಕೇರಳ, ರಾಜ್ಯದ ಮೈಸೂರು, ಮಂಡ್ಯಜಿಲ್ಲೆಯ ಗಡಿ ಹೊಂದಿಕೊಂಡಿರುವ ಗಡಿ ಜಿಲ್ಲೆಯಾದರೂ ಕಳೆದ 60 ದಿನಗಳಲ್ಲಿ ಒಂದೂ ಪ್ರಕರಣ ದಾಖಲಾಗದೇ ಹಸಿರು ವಲಯದಲ್ಲೇ ಮುಂದುವರೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

Latest Videos

ಲಾಕ್‌ಡೌನ್: ವಾಟ್ಸಾಪ್ ಗ್ರೂಪ್ ಮಾಡಿ ಬಡವರಿಗೆ ಮನೆ ಕಟ್ಟಿದ ಯುವಕರು..! ಇಲ್ಲಿವೆ ಫೋಟೋಸ್

ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮ, ಅ​ಧಿಕಾರಿ ವರ್ಗದ ಶ್ರಮ, ಜಿಲ್ಲಾ ಜನತೆಯ ಸಹಕಾರ ಹಸಿರು ವಲಯವಾಗಲು ಕಾರಣವಾಗಿರುವ ಕುರಿತು ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಹಾಸ್ಯಮಯವಾಗಿ ಕೊರೊನಾ ಪ್ರಕರಣವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ರಾಮನಗರ ಚಾಮರಾಜನಗರ ಫೈನಲ್‌, ಸೆಮಿಫೈನಲ್‌ ಎಂದಿದ್ದ ನೆಟ್ಟಿಗರು ರಾಮನಗರದಲ್ಲಿ ಪ್ರಕರಣ ಕಂಡು ಬರುತ್ತಿದ್ದಂತೆ ರಾಮನಗರ ಸೋಲೊಪ್ಪಿದೆ ಎಂದು ಸ್ಟೇಟಸ್‌ ಹರಿಬಿಡುತ್ತಿದ್ದಾರೆ. ಚಾಮರಾಜನಗರ ಅಂತಿಮವಾಗಿ ಜಯಗಳಿಸಿದೆ ಎಂದು ಕೆಲ ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದು ಇನ್ನೂ ಕೆಲವರು ರಾಮನಗರ ಆಯ್ತು ಮುಂದಿನ ಗುರಿ ಚಾಮರಾಜನಗರ ಎಂದು ಎಚ್ಚರಿಸುತ್ತಿದ್ದಾರೆ. ಒಟ್ಟಿನಲ್ಲಿ ನೆಟ್ಟಿಗರ ಸೃಜನಶೀಲತೆಗೆ ಎಲ್ಲರೂ ಜೈ ಹೋ ಎನ್ನುತ್ತಿದ್ದು ಚಾಮರಾಜನಗರ ಕೊರೋನಾ ಮುಕ್ತವಾಗೇ ಇರಲೆಂದು ಹಾರೈಸುತ್ತಿದ್ದಾರೆ.

106 ಮಂದಿ ವರದಿ ನೆಗೆಟಿವ್‌

ಜಿಲ್ಲೆಯಲ್ಲಿ ಈ ಹಿಂದೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದ ಗಂಟಲಿನ ದ್ರವ ಮಾದರಿಗಳ ಪೈಕಿ 106 ಜನರ ಪ್ರಯೋಗ ಫಲಿತಾಂಶ ವರದಿಯು ನೆಗೆಟಿವ್‌ ಬಂದಿದೆ. ಸೋಮವಾರ 62 ಜನರ ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಚಾಮರಾಜನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಒಟ್ಟು 70 ಜನರ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ. ಪಿ1471 ದೃಢೀಕೃತ ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ್ದ ಇಬ್ಬರನ್ನು ನಿಗಾವಣೆಯಲ್ಲಿ ಇರಿಸಲಾಗಿದೆ. ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಪ್ರಸ್ತುತ ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಭವನದ ಕ್ವಾರಂಟೈನ್‌ ಕೇಂದ್ರದಲ್ಲಿ ಯಾರನ್ನು ನಿಗಾವಣೆ ಮಾಡಲಾಗುತ್ತಿಲ್ಲ ಎಂದು ಜಿಲ್ಲಾಧಿ​ಕಾರಿ ಡಾ.ಎಂ.ಆರ್‌. ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-ದೇವರಾಜು ಕಪ್ಪಸೋಗೆ

click me!