Chamarajanagara: ಅರಣ್ಯ ಇಲಾಖೆ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ; ಮೂವರು ವನ್ಯಜೀವಿ ಬೇಟೆಗಾರರ ಎನ್ಕೌಂಟರ್

Published : Aug 15, 2026, 11:49 AM IST
chamarajnagar shootout

ಸಾರಾಂಶ

ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ವನ್ಯಜೀವಿ ಬೇಟೆಗೆ ಬಂದಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಎನ್‌ಕೌಂಟರ್ ಮಾಡಿದ್ದಾರೆ. ಆದರೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ವಿರುದ್ಧ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ: ವನ್ಯಜೀವಿಗಳ ಬೇಟೆಗೆ ಕಾಡಿಗೆ ಎಂಟ್ರಿ ಕೊಟ್ಟಿದ್ದ ಆರೋಪದ ಮೇರೆಗೆ ಮೂವರು ಬೇಟೆಗಾರರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಎನ್‌ಕೌಂಟರ್ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಅಂತೊಣಿಸ್ವಾಮಿ, ಪೀಟರ್ ಹಾಗೂ ಕುಮಾರ್ ಎಂದು ಗುರುತಿಸಲಾಗಿದ್ದು, ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಕೊಳ್ಳೇಗಾಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು, ಘಟನೆಯಲ್ಲಿ ಗಾಯಗೊಂಡಿದ್ದ ಓರ್ವ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಕೊಡಿಸಲಾಗಿದೆ. ಘಟನೆಯಲ್ಲಿ ಆರೋಪಿಗಳೊಂದಿಗಿದ್ದ ಮತ್ತೋರ್ವ ಎಸ್ಕೇಪ್ ಆಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ಬೆಳಗ್ಗಿನ ಜಾವ ಶೂಟೌಟ್ ನಡೆಸಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಎಂಟ್ರಿ ಕೊಟ್ಟಿದ್ದ ಅರಣ್ಯ ಸಿಬ್ಬಂದಿ ಮೇಲೆ ಆರೋಪಿಗಳು ಏಕಾಏಕಿ ಗುಂಡು ಹಾರಿಸಲು ಮುಂದಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಬೇಟೆಗಾರರ ಮೇಲೆ ಅರಣ್ಯ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದು, ಈ ಚಕಮಕಿಯಲ್ಲಿ ಮೂವರು ಬೇಟೆಗಾರರು ಹತ್ಯೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು, ಕಾರ್ಯಾಚರಣೆಯ ಸಂದರ್ಭದಲ್ಲಿ ಒಂದು ನಾಡ ಬಂದೂಕು, ಒಂದು ಜಿಂಕೆ ಮೃತದೇಹವನ್ನು ಅರಣ್ಯ ಇಲಾಖೆ ಸಿಬ್ಬಂದಿ ಅವಕಾಶಕ್ಕೆ ಪಡೆದುಕೊಂಡಿದ್ದಾರೆ. ಮೃತಪಟ್ಟ ಮೂವವರ ಶವ ಮರಣೋತ್ತರ ಪರೀಕ್ಷೆಗೆ ಕೊಳ್ಳೇಗಾಲ ಆಸ್ಪತ್ರೆಯಿಂದ ಮೈಸೂರು ಕೆ ಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಆಸ್ಪತ್ರೆ ಬಳಿ ಆಗಮಿಸಿದ ಮೃತರ ಸಂಬಂಧಿಗಳು ಅರಣ್ಯ ಸಿಬ್ಬಂದಿ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಮೃತ ಪಟ್ಟ ಮೂವರು ನಮ್ಮ ಸಂಬಂಧಿಕರು. ಆದರೆ ಅವರಿಗೆ ಏಕೆ ಶೂಟ್ ಮಾಡಿದ್ದಾರೆ ಎಂಬುದೇ ಈವರೆಗೆ ಗೊತ್ತಿಲ್ಲ. ನಮ್ಮವರು ದನ ಮೇಯಿಸಲು ಹೋದಾಗ ಗುಂಡು ಹಾರಿಸಲಾಗಿದೆ‌ ಎನ್ನುತ್ತಾರೆ. ಒಂದು ವೇಳೆ ನಮ್ಮವರ ಬಳಿ ಆಯುಧ ಇದ್ದರೂ ಇವರನ್ನ ಎನ್ಕೌಂಟರ್ ಮಾಡುವ ಅಗತ್ಯ ಏನಿತ್ತು? ನಮಗೆ ಪ್ರಕರಣದಲ್ಲಿ ನ್ಯಾಯ ಬೇಕು‌. ನಮ್ಮವರಿಂದ ಯಾರಿಗೆ ಯಾವ ಅರಣ್ಯ ಅಧಿಕಾರಿಗೆ ಫೈರ್ ಆಗಿದೆ ಎಂಬುದನ್ನ ತೋರಿಸಬೇಕು. ನಮಗೆ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಾವೆಲ್ಲ ಮೈಸೂರಿನಲ್ಲಿದ್ದೇವೆ‌. ನಮಗೆ ಬೆಳಗ್ಗೆ ವಿಚಾರ ಗೊತ್ತಾಗಿ ಇಲ್ಲಿಗೆ ಬಂದಿದ್ದೇವೆ‌.ಮೃತ ಮೂವರಿಗೆ ಮದುವೆಯಾಗಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಮೂವರನ್ನ ಕೊಲಲ್ಲು ಹಕ್ಕು ಕೊಟ್ಟವರು ಯಾರು? ಮೂವರು ಮೇಲೆ ಹಳೇ ಪ್ರಕರಣಗಳು ಇರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಬೇಟೆಗೆ ಹೋಗಿದ್ದರು ಎಂಬುದು ನಮಗೆ ಖಚಿತ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಹುತಾತ್ಮ ಪೊಲೀಸರಿಗೆ ಗೌರವಪೂರ್ವಕ ನಮನ

ಹನೂರು ತಾಲೂಕಿನ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ವೀರಪ್ಪನ್ ತಂಡದ ದಾಳಿಗೆ ಬಲಿಯಾದ ಹುತಾತ್ಮ ಪೊಲೀಸರಿಗೆ ಶುಕ್ರವಾರ ಪೊಲೀಸ್ ಇಲಾಖೆ ವತಿಯಿಂದ ಸ್ಮರಿಸಿ ಗೌರವಪೂರ್ವಕ ನಮನ ಸಲ್ಲಿಸಲಾಯಿತು. 1992ರ ಆಗಸ್ಟ್ 14ರಂದು ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲೇ, ವೀರಪ್ಪನ್‌ನನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸ್ ತಂಡದ ಮೇಲೆ ಬೂದಿಕೆರೆ ಅರಣ್ಯ ಪ್ರದೇಶದ ಬಳಿ ವೀರಪ್ಪನ್ ತಂಡ ಹೊಂಚು ಹಾಕಿ ಗುಂಡಿನ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಅಂದಿನ ಪಿಎಸ್‌ಐ ಟಿ ಹರಿಕೃಷ್ಣ, ಎಎಸ್‌ಐ ಸೋಮಪ್ಪ ಎಸ್, ಬೆನಗೊಂಡ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಸಿಎಂ ಕಾಳಪ್ಪ, ಸುಂದರ್, ಕೆ.ಎಂ. ಅಪ್ಪಚ್ಚು ಸೇರಿದಂತೆ ಆರು ಮಂದಿ ಪೊಲೀಸರು ಹುತಾತ್ಮರಾಗಿದ್ದರು.ಹುತಾತ್ಮ ಪೊಲೀಸರ ಸ್ಮರಣಾರ್ಥ ಬೂದಿಕೆರೆ ಅರಣ್ಯ ಪ್ರದೇಶದ ಬಳಿ ನಿರ್ಮಿಸಿರುವ ಸ್ಮಾರಕಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪುಷ್ಪನಮನ ಸಲ್ಲಿಸಿ ಗೌರವಿಸಿದರು. ಕರ್ತವ್ಯ ನಿರ್ವಹಿಸುವ ವೇಳೆ ಪ್ರಾಣತ್ಯಾಗ ಮಾಡಿದ ಪೊಲೀಸರ ಸೇವೆ ಹಾಗೂ ತ್ಯಾಗವನ್ನು ಸ್ಮರಿಸಲಾಯಿತು.

PREV
Read more Articles on
click me!

Recommended Stories

KSRTC ಪ್ರಯಾಣಿಕರಿಗೆ ಬಿಗ್ ಶಾಕ್! ಇಂಧನ ಬೆಲೆ ಏರಿಕೆ ನೆಪ, ಶೀಘ್ರ ಬಸ್‌ ದರ ಹೆಚ್ಚಳ, ಸಾರಿಗೆ ಸಚಿವ ಮಹತ್ವದ ಸುಳಿವು
ಮೂಲಭೂತ ಹಕ್ಕಿಗೆ ನಮ್ಮನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ: ಪ್ರಕಾಶ್‌ ರಾಜ್‌