ಶವಸಂಸ್ಕಾರಕ್ಕೆ ಕುಟುಂಬ ಸಿದ್ಧತೆ : ಪುತ್ರ ಆಸ್ಪತ್ರೆಗೆ ಬಂದಾಗ ವೆಂಟಿಲೇಟರಲ್ಲಿದ್ದ ತಾಯಿ!

By Kannadaprabha News  |  First Published May 4, 2021, 11:01 AM IST

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಸಾವಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದು ಆಕೆಯ ಕುಟುಂಬಸ್ಥರು ಬಂದು ನೋಡುವ ವೇಳೆ ಆಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 


ಚಾಮರಾಜನಗರ (ಮೇ.04): ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರಂತದಲ್ಲಿ 24 ಜನ ಸಾವನ್ನಪ್ಪಿದ್ದು, ಈ ಪೈಕಿ ಮಹಿಳೆಯೊಬ್ಬರ ಹೆಸರನ್ನು ತಪ್ಪಾಗಿ ಬೇರೊಂದು ಕುಟುಂಬಕ್ಕೆ ಜಿಲ್ಲಾಸ್ಪತ್ರೆಯವರು ತಿಳಿಸಿ ಎಡವಟ್ಟು ಮಾಡಿರುವ ಘಟನೆ ಸೋಮವಾರ ನಡೆದಿದೆ.

ಚಾಮರಾಜನಗರ ತಾಲೂಕಿನ ಲಿಂಗಣಪುರ ಗ್ರಾಮದ 59 ವರ್ಷ ಮಂಗಳಮ್ಮ ಎಂಬಾಕೆ ಜಿಲ್ಲಾಸ್ಪತ್ರೆಗೆ ದಾಖಲಾಗಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಜಿಲ್ಲಾಸ್ಪತ್ರೆಯವರು ಆಕೆ ಮೃತಪಟ್ಟಿದ್ದಾರೆ ಎಂದು ಕುಟುಂಬದವರಿಗೆ ಫೋನ್‌ ಮಾಡಿದ್ದಾರೆ. 

Tap to resize

Latest Videos

undefined

'ಚಾಮರಾಜನಗರದಲ್ಲಿ ಸತ್ತದ್ದು 24 ಅಲ್ಲ, 34 ಮಂದಿ: ಅಧಿಕಾರಿಗಳು ಮಾಹಿತಿ ಮುಚ್ಚಿಟ್ಟಿದ್ದಾರೆ' ...

ಶವ ಗುರುತಿಸುವಾಗ ಪುತ್ರ ಈಕೆ ತಮ್ಮ ತಾಯಿ ಅಲ್ಲ ಎಂದು ಹೇಳಿದ್ದಾರೆ. ತಕ್ಷಣವೇ ವಾರ್ಡ್‌ಗೆ ಹೋಗಿ ಪರಿಶೀಲಿಸಿದಾಗ ತಾಯಿ ವೆಂಟಿಲೇಟರ್‌ನಲ್ಲಿರುವುದು ಗೊತ್ತಾಗಿದೆ. ಇತ್ತ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಸಿದ್ಧತೆ ನಡೆಸಿ ಗುಂಡಿಯನ್ನು ತೆಗೆಸಿ ಕುಟುಂಬದವರು ರೋಧಿಸುತ್ತಿದ್ದರು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!