ಸದಾ ಜನರ ಜೊತೆಗೆ ಇರುವ ಜಿಲ್ಲಾಧಿಕಾರಿ : ತಮ್ಮ ಕಾಲೇಜಲ್ಲೆ ಈಗ ಪಾಠ

By Kannadaprabha NewsFirst Published Feb 3, 2021, 7:31 AM IST
Highlights

ಸದಾ ಜನರೊಂದಿಗೆ ಬೆರೆಯುವ ಜನಪರ ಸೇವೆಯಲ್ಲಿ ನಿರತರಾಗಿ ಸಾಕಷ್ಟು ಫೇಮಸ್ ಆಗಿರುವ ಚಾಮರಾಜನಗರ ಜಿಲ್ಲಾಧಿಕಾರಿ ಇದೀಗ ತಮ್ಮ ಕಾಲೇಜಿನಲ್ಲೇ ಪಾಠ ಮಾಡುತ್ತಿದ್ದಾರೆ. 

ಚಾಮರಾಜನಗರ (ಫೆ.03):  ಜನಸ್ನೇಹಿ ಆಡಳಿತ, ಕಚೇರಿಗಳಿಗೆ ದಿಢೀರ್‌ ಭೇಟಿ, ರೈತರೊಂದಿಗೆ ಆಪ್ತ ಮಾತುಕತೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಮಂಗಳವಾರ ಬೆಳಗ್ಗೆ ಪದವಿ ವಿದ್ಯಾರ್ಥಿಗಳಿಗೆ ಇತಿಹಾಸ ಪಾಠ ಮಾಡಿ ಗಮನ ಸೆಳೆದಿದ್ದಾರೆ. 

ಜಿಲ್ಲಾಧಿಕಾರಿ ಆಗುವ ಮೊದಲು ರವಿ ಅವರು ಚಾಮರಾಜನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಇದೀಗ ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕರ ಕೋರಿಕೆ ಮೇರೆಗೆ, ತಾವು ಉಪನ್ಯಾಸಕರಾಗಿ ಕಾರ್ಯನಿವರ್ಹಿಸಿದ್ದ ಕಾಲೇಜಿನ ಮೇಲಿನ ಕಾಳಜಿಯಿಂದ ಮಂಗಳವಾರ ಬೆಳಗ್ಗೆ 9ರ ವೇಳೆಗೆ ಬಿಡುವು ಮಾಡಿಕೊಂಡು ಕಾಲೇಜಿಗೆ ಆಗಮಿಸಿ, ವಿದ್ಯಾರ್ಥಿಗಳಿಗೆ ಮೈಸೂರು ಒಡೆಯರ ಇತಿಹಾಸ ಕುರಿತು ಪಾಠ ಮಾಡಿದರು.

3 ವರ್ಷದ ನಂತ್ರ ದೇವಾಲಯಕ್ಕೆ ಬಂದ ಆನೆ: ಪ್ರಸಾದ ತಿನ್ನಿಸಿದ IAS ಅಧಿಕಾರಿಗೆ ಟೀಕೆ ...

ರವಿ 1992ರಿಂದ 2001ರ ವರೆಗೆ ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಒಂದು ವರ್ಷದಿಂದ ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

click me!