JDS ಜತೆ ಸೇರಲು ಸಜ್ಜಾದ ನಾಯಕರು : ಯಡವಟ್ಟಿಂದ ಅಧಿಕಾರ ಕಳಕೊಂಡ ಬಿಜೆಪಿ

Suvarna News   | Asianet News
Published : Jan 31, 2021, 12:05 PM IST
JDS ಜತೆ ಸೇರಲು ಸಜ್ಜಾದ ನಾಯಕರು :  ಯಡವಟ್ಟಿಂದ ಅಧಿಕಾರ ಕಳಕೊಂಡ ಬಿಜೆಪಿ

ಸಾರಾಂಶ

ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯುವ ಯತ್ನದಲ್ಲಿದ್ದ ಬಿಜೆಪಿಗೆ ಅಧಿಕಾರ ಕೈ ತಪ್ಪಿ ಹೋಗಿದ್ದು ತೀವ್ರ ನಿರಾಶೆಯಾಗಿದೆ. 

ಚಾಮರಾಜನಗರ (ಜ.31): ಚುನಾವಣಾಧಿಕಾರಿ ಮಾಡಿದ ಯಡವಟ್ಟಿನಿಂದ ಗ್ರಾಮ ಪಂಚಾಯತ್ ಅಧಿಕಾರ ಬಿಜೆಪಿ ಕೈ ತಪ್ಪಿಹೋಗಿದೆ ಎಂದು ಆರೋಪಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. 

ಕಣ್ಣು ಕಾಣಲ್ಲ ಎಂದು ಮತ ಹಾಕಲು ಗ್ರಾಮ ಪಂಚಾಯತ್ ಸದಸ್ಯೆ ಚುನಾವಣಾಧಿಕಾರಿಯ ಸಹಾಯ ಕೋರಿದ್ದರು. ಈ ವೇಳೆ  ಗ್ರಾಮ ಪಂಚಾಯತ್ ಸದಸ್ಯೆ ದಿಕ್ಕು ತಪ್ಪಿಸಿ ಬೇರೊಬ್ಬ ಅಭ್ಯರ್ಥಿಗೆ ಚುನಾವಣಾಧಿಕಾರಿ ಮತ ಹಾಕಿಸಿದ್ದಾರೆಂದು ಆರೋಪಿಸಲಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ನಲ್ಲಿ ಬಿಜೆಪಿ ಬೆಂಬಲಿತೆಯಿಂದ ಕಾಂಗ್ರೆಸ್ ಅಭ್ಯರ್ಥಿ ಗೆ ಮತ ಹಾಕಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.  ಇದರಿಂದ ಅಧಿಕಾರ ಬಿಜೆಪಿ ಕೈ ತಪ್ಪಿ ಹೋಗಿದೆ ಎನ್ನಲಾಗಿದೆ.  

ನಾವೇನು ಕೈಯಲ್ಲಿ ಬಳೆ ಹಾಕಿಕೊಂಡು ಕುಳಿತಿದ್ದೇವಾ? ಡಿಸಿಎಂ ಸವದಿ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ ..

ಇದೀಗ ಈ ಸಂಬಂಧ ಚುನಾವಣಾಧಿಕಾರಿ ಸಿದ್ದಪ್ಪಾಜಿಗೌಡ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಹೂಗ್ಯಂ ಗ್ರಾ.ಪಂ.ನಲ್ಲಿ 20 ಸ್ಥಾನವಿದ್ದು,10 ಬಿಜೆಪಿ, 8 ಕಾಂಗ್ರೆಸ್, ಒಂದು ಜೆಡಿಎಸ್, ಒಬ್ಬರು ಪಕ್ಷೇತರರು ಆಯ್ಕೆಯಾಗಿದ್ದರು.   ಜೆಡಿಎಸ್ ಅಭ್ಯರ್ಥಿ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯಲು ಬಿಜೆಪಿ ಪ್ಲಾನ್ ಮಾಡಿತ್ತು. ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಚುನಾವಣಾಧಿಕಾರಿಗೆ ಗ್ರಾಮ ಪಂಚಾಯತ್ ಸದಸ್ಯೆ ಹೇಳಿಕೊಂಡಿದ್ದು ಈ ವೇಳೆ ಬಿಜೆಪಿ ಅಭ್ಯರ್ಥಿ ಬದಲು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಈಶ್ವರಿ ಎಂಬ ಮಹಿಳೆಗೆ ದಿಕ್ಕು ತಪ್ಪಿಸಿರುವ ಆರೋಪ ಎದುರಾಗಿದೆ.

ಮತ್ತೇ ಅಧ್ಯಕ್ಷಗಾದಿಗೆ ಚುನಾವಣೆ ನಡೆಸುವಂತೆ ಡಿಸಿಗೆ ಗ್ರಾ.ಪಂ.ಸದಸ್ಯರು ಮನವಿ ಮಾಡಿದ್ದಾರೆ. ಕಾಂಗ್ರೆಸ್ ಪರ ಕೆಲಸ ಮಾಡಿದ ಚುನಾವಣಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಲಾಗಿದೆ. 

PREV
click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಬೆಂಗಳೂರಿನ ಗುಲಾಬಿ ಮೆಟ್ರೋ ಮಾರ್ಗಕ್ಕೆ ಶೀಘ್ರ ಪ್ರೊಟೊಟೈಪ್‌ ರೈಲು