ಮೈಷುಗರ್‌ನಲ್ಲಿ ಡಿಸ್ಟಿಲರಿ ಸ್ಥಾಪನೆಗೆ ₹250 ಕೋಟಿ ಅನುದಾನ ಕೊಡಿಸಿ; ಎಚ್‌ಡಿಕೆಗೆ, ಚಲುವರಾಯಸ್ವಾಮಿ ಮನವಿ

Sathish Kumar KH   | Kannada Prabha
Published : Nov 01, 2026, 11:50 AM IST
N Chaluvarayaswamy HD Kumaraswamy

ಸಾರಾಂಶ

ಮಂಡ್ಯದ ಮೈಷುಗರ್ ಕಾರ್ಖಾನೆಯಲ್ಲಿ ಡಿಸ್ಟಿಲರಿ ಘಟಕ ಸ್ಥಾಪನೆಗೆ ಕೇಂದ್ರದಿಂದ 250 ಕೋಟಿ ರೂ. ತರುವಂತೆ ಎಚ್.ಡಿ.ಕುಮಾರಸ್ವಾಮಿಗೆ ಸಚಿವ ಚಲುವರಾಯಸ್ವಾಮಿ ಸವಾಲು ಹಾಕಿದ್ದಾರೆ. ಮೇಕೆದಾಟು ಯೋಜನೆ ಮತ್ತು ಕೈಗಾರಿಕೆ ಸ್ಥಾಪನೆ ಬಗ್ಗೆ ಕೇವಲ ಟೀಕೆ ಮಾಡದೆ ಜಿಲ್ಲೆಯ ಋಣ ತೀರಿಸುವಂತೆ ಅವರು ಆಗ್ರಹಿಸಿದ್ದಾರೆ.

ಮಂಡ್ಯ (ನ.01): ಮೇಕೆದಾಟು ಯೋಜನೆಗೆ ಐದೇ ನಿಮಿಷದಲ್ಲಿ ಅನುಮತಿ ಕೊಡಿಸುವೆ ಎಂದು ಹೇಳಿದ್ದೀರಿ, ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ 100 ಎಕರೆ ಜಾಗ ಕೇಳಿದ್ದಿರಿ, ನಾವು ಕೊಡಲು ಸಿದ್ದರಿದ್ದೆವು. ಅದನ್ನು ಅರಿತ ನೀವು ಮತ್ತೆ 500 ಎಕರೆ ಬೇಕು ಎಂಬ ವರಸೆ ತೆಗೆದಿರಿ. ಇಂತಹುದನ್ನು ಬಿಟ್ಟು ಮೈಷುಗರ್ ಕಾರ್ಖಾನೆಯಲ್ಲಿ ಡಿಸ್ಟಿಲರಿ ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ 250 ಕೋಟಿ ರು. ಅನುದಾನ ದೊರಕಿಸಿಕೊಟ್ಟು ಜಿಲ್ಲೆಯ ಜನರ ಋಣ ತೀರಿಸುವಂತೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಬಹಿರಂಗ ಸವಾಲು ಹಾಕಿದರು.

ನಿಮ್ಮ ಕೈಯಲ್ಲಿ ಏನೂ ಆಗುವುದಿಲ್ಲ

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ವತಿಯಿಂದ ನಗರದ ಮಂಡ್ಯ ವಿವಿ ಆವರಣದಲ್ಲಿ ನಡೆದ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ನಿಮ್ಮ ಕೈಯ್ಯಲ್ಲಿ ಏನೂ ಆಗುವುದಿಲ್ಲ ಎಂಬುದನ್ನು ನಿಮ್ಮ ಜೊತೆಯಲ್ಲಿದ್ದುಕೊಂಡೇ ತಿಳಿದಿದ್ದೇನೆ. ಕೇವಲ ಟೀಕೆ ಮಾಡುತ್ತಲೇ ಕಾಲ ಕಳೆಯುತ್ತಿದ್ದೀರಿ, ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಛೇಡಿಸಿದರು.

ಮೇಕೆದಾಟು ಯೋಜನೆಗೆ ಐದೇ ನಿಮಿಷದಲ್ಲಿ ಅನುಮತಿ ಕೊಡಿಸುವೆ ಎಂದು ಹೇಳಿದ್ದೀರಿ, ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ 100ಎಕರೆ ಜಾಗ ಕೇಳಿದ್ದಿರಿ, ನಾವು ಕೊಡಲು ಸಿದ್ದರಿದ್ದೆವು. ಅದನ್ನು ಅರಿತ ನೀವು ಮತ್ತೆ 500 ಎಕರೆ ಬೇಕು ಎಂಬ ವರಸೆ ತೆಗೆದಿರಿ. ಇಂತಹುದನ್ನು ಬಿಟ್ಟು ಬಿಟ್ಟು ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡಿ ಎಂದು ಸವಾಲು ಹಾಕಿದರು.

ಅನುದಾನ ಕೊಡಿಸಿದರೆ ನಾನೇ ಅಭಿನಂದನೆ ಸಲ್ಲಿಸುತ್ತೇನೆ

ನಾನೇ ನಿಮಗೊಂದು ಅವಕಾಶ ಕೊಡುತ್ತೇನೆ. ಸರ್ಕಾರಿ ಸ್ವಾಮ್ಯದ ಸರ್ಕಾರಿ ಕಾರ್ಖಾನೆಯ ಆರ್ಥಿಕ ಪುನಶ್ಚೇತನಕ್ಕೆ ಡಿಸ್ಟಿಲರಿ ಘಟಕ ಅಗತ್ಯವಾಗಿದೆ. ನಿಮ್ಮ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಟ್ಟು ಕೇಂದ್ರ ಸರ್ಕಾರದಿಂದ 250 ಕೋಟಿ ರು. ವೆಚ್ಚದ ಘಟಕ ಸ್ಥಾಪನೆಗೆ ಅನುದಾನ ಕೊಡಿಸುವ ಕೆಲಸ ಮಾಡಿ. ಆಗ ನಿಮ್ಮನ್ನು ನಾನೇ ಅಭಿನಂದಿಸುತ್ತೇನೆ ಎಂದರು.

ನಮ್ಮ ಸರ್ಕಾರ ಮಂಡ್ಯ ಜಿಲ್ಲೆಗೆ 10 ಸಾವಿರ ಕೋಟಿ ಅಭಿವೃದ್ಧಿಗೆ ಕೊಟ್ಟಿದ್ದೇವೆ. ನೀವು 10 ಸಾವಿರ ಕೋಟಿ ರು.ಗೆ ಲೆಕ್ಕ ಕೇಳುತ್ತೀರಾ?, ಲೆಕ್ಕ ಕೊಡೋದು ನಿಮಗಲ್ಲಪ್ಪ, ಜನರಿಗೆ ಲೆಕ್ಕ ಕೊಡುತ್ತೇವೆ. ಕಾಂಗ್ರೆಸ್ ಪಕ್ಷ ನಿಮ್ಮ ತಂದೆಯವರನ್ನು ಪ್ರಧಾನಿ ಮಾಡಿತು. ಕಾಂಗ್ರೆಸ್ ಪಕ್ಷ ನಿಮ್ಮ ಕುಟುಂಬಕ್ಕೆ ಅಧಿಕಾರ ಕೊಟ್ಟರೂ ನೀವು ನಮ್ಮನ್ನು ಟೀಕೆ ಮಾಡ್ತೀರಾ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

PREV
Read more Articles on
click me!

Recommended Stories

ಬೆಂಗಳೂರಿನಿಂದ ಮುಂಬೈ, ಚೆನ್ನೈ, ಹೈದರಾಬಾದ್ ನಗರಗಳಿಗೆ ಬುಲೆಟ್ ಟ್ರೈನ್: 4000 ಕಿಮೀ ಯೋಜನೆಗೆ ಮೋದಿ ಅಂಕಿತ!
ರಾಜ್ಯದೆಲ್ಲೆಡೆ ಏರ್ಪೋರ್ಟ್‌ ಮಾದರಿ ರೈಲು ನಿಲ್ದಾಣಗಳ ಅಭಿವೃದ್ಧಿ: ರೈಲ್ವೆ ಸಚಿವ ವಿ. ಸೋಮಣ್ಣ