ಮೈಸೂರು ಡಿಸಿ ಕಚೇರಿ ವಿದ್ಯುತ್‌ ಕಟ್ : ಶಾಕ್‌ ಕೊಟ್ಟ ಸೆಸ್ಕ್‌ !

Kannadaprabha News   | Asianet News
Published : Aug 31, 2021, 07:03 AM IST
ಮೈಸೂರು ಡಿಸಿ ಕಚೇರಿ  ವಿದ್ಯುತ್‌ ಕಟ್ :  ಶಾಕ್‌ ಕೊಟ್ಟ ಸೆಸ್ಕ್‌ !

ಸಾರಾಂಶ

ಮೈಸೂರು ಜಿಲ್ಲಾಧಿಕಾರಿ, ತಾಲೂಕು ಕಚೇರಿಯೂ ಸೇರಿ 24 ಕಚೇರಿಗಳಿಗೆ  ವಿದ್ಯುತ್ ಕಡಿತ ಬಿಲ್ ಬಾಕಿ ಹಿನ್ನೆಲೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಇಲಾಖೆ

ಮೈಸೂರು (ಆ.31): ಮೈಸೂರು ಜಿಲ್ಲಾಧಿಕಾರಿ, ತಾಲೂಕು ಕಚೇರಿಯೂ ಸೇರಿ 24 ಕಚೇರಿಗಳಿಗೆ ಸೆಸ್ಕ್‌ ಸೋಮವಾರ ಬೆಳಗ್ಗೆ ವಿದ್ಯುತ್‌ ಕಡಿತಗೊಳಿಸುವ ಮೂಲಕ ಶಾಕ್‌ ಕೊಟ್ಟಿದೆ.

ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡು ಮನವಿಗೂ ಸ್ಪಂದಿಸದ ಇಲಾಖಾ ಕಚೇರಿಗಳ ಪಟ್ಟಿಮಾಡಿಕೊಂಡ ಸೆಸ್ಕ್‌ ಅಧಿಕಾರಿಗಳ ತಂಡ ಸೋಮವಾರ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ರಿಜಿಸ್ಟಾರ್‌ ಕಚೇರಿ ಸೇರಿ 24 ಕಚೇರಿಗಳ ವಿದ್ಯುತ್‌ ಕಡಿತಗೊಳಿಸಿದೆ. 

ಮೈಸೂರಿನ ಮತ್ತೋರ್ವ ಅಧಿಕಾರಿ ವಿರುದ್ಧ ಪ್ರತಾಪ್ ಸಿಂಹ ಗರಂ : ದೂರು

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕಚೇರಿಯ ಅಧಿಕಾರಿಗಳು ಮಧ್ಯಾಹ್ನದ ವೇಳೆಗೆ ಬಿಲ್‌ ಪಾವತಿಸಿದ್ದು, ಬಳಿಕ ಎಂದಿನಂತೆ ವಿದ್ಯುತ್‌ ನೀಡಲಾಗಿದೆ. ತಾಲೂಕು ಕಚೇರಿಯಿಂದಲೂ ಲಕ್ಷಾಂತರ ರುಪಾಯಿ ಬಾಕಿ ಬರಬೇಕಿರುವ ಹಿನ್ನೆಲೆಯಲ್ಲಿ ಸೋಮವಾರ ಇಡೀ ದಿನ ಕಚೇರಿ ವಿದ್ಯುತ್‌ ಇಲ್ಲದೆ ನಿರ್ವಹಿಸಿದೆ. ಸೆಸ್ಕ್‌ ಅಧಿಕಾರಿಗಳ ಕ್ರಮದಿಂದ ಒಂದೇ ದಿನ . 1.97 ಲಕ್ಷ ಬಾಕಿ ಹಣ ವಸೂಲಿಯಾಗಿದೆ.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು