ಬಿಜೆಪಿ ಮುಖಂಡನ ಆಪ್ತನ ಕ್ಲಬ್‌ ಮೇಲೆ ಸಿಸಿಬಿ ದಾಳಿ

By Kannadaprabha NewsFirst Published Mar 4, 2020, 9:57 AM IST
Highlights

ಅಕ್ರಮ ಚಟುವಟಿಕೆ ಆರೋಪದ ಮೇರೆಗೆ ಬಿಜೆಪಿ ಮುಖಂಡರ ಆಪ್ತನ ಒಡೆತನದ್ದು ಎನ್ನಲಾದ ಕ್ಲಬ್‌ವೊಂದರ ಮೇಲೆ ದಾಳಿ ನಡೆಸಿ 17 ಮಂದಿಯನ್ನು ಮಂಗಳವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು(ಮಾ.04): ಅಕ್ರಮ ಚಟುವಟಿಕೆ ಆರೋಪದ ಮೇರೆಗೆ ಬಿಜೆಪಿ ಮುಖಂಡರ ಆಪ್ತನ ಒಡೆತನದ್ದು ಎನ್ನಲಾದ ಕ್ಲಬ್‌ವೊಂದರ ಮೇಲೆ ದಾಳಿ ನಡೆಸಿ 17 ಮಂದಿಯನ್ನು ಮಂಗಳವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅರಮನೆ ಮೈದಾನದಲ್ಲಿರುವ ಬಿಬಿಎಂಪಿ ಗುತ್ತಿಗೆದಾರ ಉದಯ್‌ಗೌಡ ಮಾಲಿಕತ್ವದ ಕಂಟ್ರಾಕ್ಟ​ರ್‍ಸ್ ಕ್ಲಬ್‌ ಮೇಲೆ ದಾಳಿ ನಡೆದಿದ್ದು, ಕ್ಲಬ್‌ ವ್ಯವಸ್ಥಾಪಕ, ಕ್ಯಾಶಿಯರ್‌ ಹಾಗೂ 17 ಮಂದಿ ಗ್ರಾಹಕರು ಸೇರಿದಂತೆ ಬಂಧಿಸಲಾಗಿದೆ. ಆರೋಪಿಗಳಿಂದ 22 ಲಕ್ಷ ಜಪ್ತಿ ಮಾಡಲಾಗಿದೆ. ಆದರೆ ಈ ವೇಳೆ ಉದಯ್‌ ಗೌಡ ಇರಲಿಲ್ಲ.

ಕೊರೋನಾ ಭೀತಿ: ಏರ್ಪೋರ್ಟ್‌ನಲ್ಲಿ 40 ಸಾವಿರ ಜನರ ತಪಾಸಣೆ

ಮೈತ್ರಿ ಸರ್ಕಾರದ ಅವಧಿಯಲ್ಲಿ ಉದಯ್‌ಗೌಡನ ಮನೆ ಮೇಲೆ ಕೇಂದ್ರ ವಿಭಾಗದ ಪೊಲೀಸರು ದಾಳಿ ನಡೆಸಿದ್ದರು. ಬಿಜೆಪಿ ನಾಯಕರ ಜೊತೆ ಒಡನಾಟ ಹೊಂದಿರುವ ಉದಯ್‌ಗೌಡ ಮೈತ್ರಿ ಸರ್ಕಾರದ ಕೆಡವಲು ಯತ್ನಿಸಿದ ಕಿಂಗ್‌ಪಿನ್‌ಗಳಲ್ಲಿ ಒಬ್ಬಾತ ಎಂದು ಆಗಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಶ್ರೀಲಂಕಾದಲ್ಲಿ ಕ್ಯಾಸಿಯೋನ ಮಾಲಿಕರಾಗಿದ್ದು, ಬೆಂಗಳೂರು ಸೇರಿದಂತೆ ಭಾರತದಿಂದ ಜೂಜುಕೋರರನ್ನು ವಿದೇಶಕ್ಕೆ ಕರೆದೊಯ್ದು ಉದಯ್‌ಗೌಡ ದಂಧೆ ನಡೆಸುತ್ತಾನೆ ಎಂಬ ಆರೋಪ ಸಹ ಬಂದಿತ್ತು.

ಉದಯ್‌ ಗೌಡ ಮೂಲತಃ ಮದ್ದೂರು ತಾಲೂಕಿನವನಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾನೆ. ಬಿಬಿಎಂಪಿ ಗುತ್ತಿಗೆದಾರನಾಗಿರುವ ಆತ, ಅರಮನೆ ಮೈದಾನದಲ್ಲಿ ಗುತ್ತಿಗೆದಾರರ ಸೇರಿ ಕಂಟ್ರಾಕ್ಟ​ರ್‍ಸ್ ಕ್ಲಬ್‌ ಕಟ್ಟಿದ್ದ. ಇದರಲ್ಲಿ ಕಾನೂನು ಬಾಹಿರವಾಗಿ ಚಟುವಟಿಕೆ ನಡೆಸುತ್ತಿದ್ದ ಎಂಬ ಆರೋಪಿಸಲಾಗಿದೆ.

click me!