ಧಾರವಾಡ: ಯೋಗೇಶ್‌ ಗೌಡ ಕೊಲೆ ಕೇಸ್‌, ಕಾಂಗ್ರೆಸ್‌ ಮುಖಂಡನ ವಿಚಾರಣೆ

Kannadaprabha News   | Asianet News
Published : Sep 17, 2020, 09:24 AM IST
ಧಾರವಾಡ: ಯೋಗೇಶ್‌ ಗೌಡ ಕೊಲೆ ಕೇಸ್‌, ಕಾಂಗ್ರೆಸ್‌ ಮುಖಂಡನ ವಿಚಾರಣೆ

ಸಾರಾಂಶ

ಮಾಜಿ ಸಚಿವ ವಿನಯ್‌ ಕುಲಕರ್ಣಿ ಸಹೋದರನ ವಿಚಾರಣೆ ನಂತರದಲ್ಲಿ ಮಹತ್ವದ ಬೆಳವಣಿಗೆ| ಕಾಂಗ್ರೆಸ್‌ ಮುಖಂಡ ಹನುಮಂತ ಕೊರವರ ಅವರನ್ನು ಸುಮಾರು ಎರಡ್ಮೂರು ಗಂಟೆ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು|  ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶ ಆರೋಪದ ಮೇಲೆ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಲು ನ್ಯಾಯಾಲಯದ ಅನುಮತಿ ಕೇಳಿದ ಸಿಬಿಐ| 

ಧಾರವಾಡ(ಸೆ.17): ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್‌ ಗೌಡ  ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಬುಧವಾರ ಧಾರವಾಡಕ್ಕೆ ಆಗಮಿಸಿದ ಅಧಿಕಾರಿಗಳ ತಂಡ ಉಪನಗರ ಠಾಣೆಯಲ್ಲಿ ಕಾಂಗ್ರೆಸ್‌ ಮುಖಂಡ ಹನುಮಂತ ಕೊರವರ ಎಂಬವರನ್ನು ವಿಚಾರಣೆ ನಡೆಸಿದ್ದಾರೆ.

ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ಸಹೋದರನ ವಿಚಾರಣೆ ನಂತರದಲ್ಲಿ ಮಹತ್ವದ ಬೆಳವಣಿಗೆ ಆಗಿದ್ದು, ಹನುಮಂತ ಕೊರವರ ಅವರನ್ನು ಸುಮಾರು ಎರಡ್ಮೂರು ಗಂಟೆ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದರೊಂದಿಗೆ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶ ಆರೋಪದ ಮೇಲೆ ಪ್ರತ್ಯೇಕವಾದ ಎಫ್‌ಐಆರ್‌ ದಾಖಲಿಸಲು ನ್ಯಾಯಾಲಯದ ಅನುಮತಿಯನ್ನು ಸಿಬಿಐ ಕೇಳಿದೆ ಎಂದು ತಿಳಿದುಬಂದಿದೆ.

ಧಾರವಾಡ: ಯೋಗೇಶ್‌ ಗೌಡ ಕೊಲೆ ಪ್ರಕರಣ: ಡಿವೈಎಸ್‌ಪಿ ವಿಚಾರಣೆ

ಈ ಕೊಲೆ ಪ್ರಕರಣದಲ್ಲಿ ಸಾಕ್ಷ್ಯನಾಶ ಮಾಡಲು ಪ್ರಯತ್ನಿಸಲಾಗಿದ್ದು, ನ್ಯಾಯಾಧೀಶರ ಬಳಿ ಪ್ರತ್ಯೇಕ ಎಫ್‌ಐಆರ್‌ ಮಾಡಲು ಸಿಬಿಐ ಅಧಿಕಾರಿಗಳು ಅನುಮತಿ ಕೇಳಿದ್ದಾರೆ. ಮಾಜಿ ಸಚಿವ ವಿನಯ್‌ ಕುಲಕರ್ಣಿ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಹಲವರ ವಿರುದ್ಧ ಸಾಕ್ಷ್ಯನಾಶದ ಆರೋಪ ಇರುವ ಕಾರಣ ಅವರಿಗೆಲ್ಲ ಇದೀಗ ನಡುಕ ಹುಟ್ಟಿದೆ.
 

PREV
click me!

Recommended Stories

ಬೆಂಗಳೂರು : ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ನಗರ ವಿವಿ ಎಡವಟ್ಟು: 400 ಎಂಕಾಂ ಸ್ಟೂಡೆಂಟ್ಸ್ ಫೇಲ್‌!