ರಾಮನಗರದಲ್ಲಿ ಮನೆ ಮನೆಗೆ ಕಾವೇರಿ ನೀರು

By Sujatha NR  |  First Published Oct 3, 2022, 5:51 AM IST

ರಾಮನಗರ ಜಿಲ್ಲೆ ಅಭಿವೃದ್ಧಿಗೆ ರೂಪುರೇಷೆ ಹಾಕಿದ್ದೇ ಬಿಜೆಪಿ ಸರ್ಕಾರ. ಮನೆ ಮನೆಗೆ ಕಾವೇರಿ ನೀರು ನೀಡಲಾಗುತ್ತಿದೆ


ಕೋಲಾರ (ಅ.03): ರಾಮನಗರ ಜಿಲ್ಲೆ ಅಭಿವೃದ್ಧಿಗೆ ರೂಪುರೇಷೆ ಹಾಕಿದ್ದೇ ಬಿಜೆಪಿ ಸರ್ಕಾರ. ಮನೆ ಮನೆಗೆ ಕಾವೇರಿ ನೀರು ನೀಡಲಾಗುತ್ತಿದೆ. ಆದರೆ ಅಭಿವೃದ್ಧಿ ಸಹಿಸಿಕೊಳ್ಳಲಾರದೆ ತಿಕ್ಕಾಟಕ್ಕೆ ಇಳಿದಿದ್ದಾರೆ. ಚುನಾವಣೆಯೇ ಬೇರೆ, ಅಭಿವೃದ್ಧಿಯೇ ಬೇರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದರು

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲವೆಂದು ಮಾಜಿ ಸಿಎಂ ಕುಮಾರ ಸ್ವಾಮಿ ಅವರೇ ಪತ್ರ ಬರೆದಿದ್ದರು. ರಾಮನಗರ, ಚನ್ನ ಪಟ್ಟಣ, ಕನಕಪುರ, ಮಾಗಡಿಯಲ್ಲಿ ಅವರು ಕಾರ್ಯಕ್ರಮ ಮಾಡಿದಾಗ ನಾವು ತೊಂದರೆ ಕೊಟ್ಟಿದ್ದೇವೆಯೇ, ನಿಬಂರ್‍ಧ ಹೇರಿದ್ದೇವೆಯೇ. ಇಷ್ಟೊಂದು ಸಹಕಾರ, ಮಾನ್ಯತೆ, ಗೌರವವನ್ನು ಮತ್ಯಾರೂ ಕೊಡಲು ಸಾಧ್ಯವಿಲ್ಲ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅವರಿಗೆ ಬಿಟ್ಟವಿಚಾರ. ಆದರೆ, ಕಾರ್ಯಕ್ರಮ ತಡೆಯುವುದೇ ಕುಮಾರಸ್ವಾಮಿ ಉದ್ದೇಶವಾಗಿತ್ತು ಎಂದರು

Tap to resize

Latest Videos

ಎಚ್ಡಿಕೆ ಕೇಳಿದಾಗಲೆಲ್ಲ ಅನುದಾನ

ಕುಮಾರಸ್ವಾಮಿ ಕೇಳಿದಾಗಲೆಲ್ಲಾ ನಮ್ಮ ಸರ್ಕಾರ ಅನುದಾನ ನೀಡಿದೆ, ಸಹಕಾರ ನೀಡಿದೆ. ಯಾವುದೇ ತಾರತಮ್ಯ ಮಾಡಿಲ್ಲ. ಅದೇ ರೀತಿ ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಯಾವ ವಸ್ತುವಿಗೆ ಎಷ್ಟುಬೆಲೆ ಏರಿಕೆ ಆಗಿತ್ತು. ಈಗ ಎಷ್ಟುಏರಿಕೆ ಆಗಿದೆ ಎಂಬ ಅಂಕಿಅಂಶ ಮುಂದಿಡಲಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ 40 ಪರ್ಸೆಂಟ್ ಸರ್ಕಾರ ಎಂಬ ಆರೋಪ ಪ್ರಸ್ತಾಪಿಸಿದ ಸಚಿವರು, ನಮ್ಮ ಪಕ್ಷ ಭ್ರಷ್ಟಾಚಾರಿಗಳಿಗೆ ಸಿಂಹ ಸ್ವಪ್ನವಾಗಿದೆ. ಸರ್ಕಾರ ಬಿಡುಗಡೆ ಮಾಡುವ ಅನುದಾನದಲ್ಲಿ ಶೇ 15ರಷ್ಟುಮಾತ್ರ ಫಲಾನುವಿಗಳಿಗೆ ತಲುಪುತ್ತಿದೆ, ಇನ್ನು 85 ಪರ್ಸೆಂಟ್ ಜೇಬು ಸೇರುತ್ತಿದೆ ಎಂಬುದಾಗಿ ಈ ಹಿಂದೆ ಕಾಂಗ್ರೆಸ್‌ನ ಪ್ರಧಾನಿಯಾಗಿದ್ದವರೇ ಹೇಳಿದ್ದರು. ನಮ್ಮದು ಭ್ರಷ್ಟಾಚಾರ ರಹಿತ ಸರ್ಕಾರ. ಅಕ್ರಮ ಹಣ ಸಂಪಾದನೆಗೆ ಸರ್ಕಾರ ಕಾನೂನು ಮೂಲಕ ಕಡಿವಾಣ ಹಾಕಿದೆ ಎಂದು ಹೇಳಿದರು.

ಕಾಂಗ್ರೆಸ್‌ ವಿನಾಶ ಕಾಲದಲ್ಲಿದೆ

ಭಾರತ್‌ ಜೋಡೊ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ ವಿನಾಶ ಕಾಲದಲ್ಲಿದ್ದು, ಅಸ್ತಿತ್ವ ಉಳಿಸಿಕೊಳ್ಳಲು ನಾಟಕ ಮಾಡುತ್ತಿದೆ. ಅಧಿಕಾರದಲ್ಲಿದ್ದಾಗ ದೇಶ ಒಡೆಯಲು, ಭಯೋತ್ಪಾದನೆಗೆ ಉತ್ತೇಜನ ನೀಡಲು ಅಧಿಕಾರ ಬಳಸಿಕೊಂಡರು. ದೇಶದಾದ್ಯಂತ ವಿವಿಧ ಸಮಸ್ಯೆ ಹುಟ್ಟುಹಾಕಿದರು ಎಂದು ಹರಿಹಾಯ್ದರು.

ಕಾಲೇಜು ಪರಿಶೀಲನೆ:

ಆರು ತಿಂಗಳೊಳಗೆ ಕೋಲಾರದ ಪ್ರಥಮದರ್ಜೆ ಕಾಲೇಜಿನ ಸವಾಂರ್‍ಗೀಣ ಅಭಿವೃದ್ಧಿ ಮಾಡಿ ಉತ್ತಮ ರೂಪ ಕೊಡಲಾಗುವುದು ಎಂದರು. ಶನಿವಾರ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವರು ಜಿಲ್ಲಾ ಪೊಲೀಸ್‌ ವರಿಷ್ಠಾಕಾರಿ ಡಿ.ದೇವರಾಜ್‌ ಮನವಿ ಮೇರೆಗೆ ಕಾಲೇಜಿನಲ್ಲಿ ಸುತ್ತಾಡಿ ಪರಿಶೀಲನೆ ನಡೆಸಿದರು.

ವಾಮಮಾರ್ಗದಲ್ಲಿ ಒಳ್ಳೆ ಅನುಭವ : ಬೆಂಗಳೂರು :  ಅಭಿವೃದ್ಧಿ ಕೆಲಸ ಎಂದರೇನು? ವಾಮಮಾರ್ಗ ಎಂದರೆ ಯಾವುದು? ಇವೆರಡರಲ್ಲೂ ತಮಗೆ ಒಳ್ಳೆ ಅನುಭವವೇ ಇದೆ ಎಂದು ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಭಾನುವಾರ ಸರಣಿ ಟ್ವಿಟ್‌ ಮಾಡಿರುವ ಎಚ್‌.ಡಿ.ಕುಮಾರಸ್ವಾಮಿ, ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಕಳ್ಳಮಾರ್ಗದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು ಹೊರಟಿದ್ದು, ಕ್ಷೇತ್ರದ ಶಾಸಕರನ್ನೇ ಕತ್ತಲೆಯಲ್ಲಿ ಇಟ್ಟಿದ್ದನ್ನು ಏನೆಂದು ಕರೆಯಬೇಕು? ಇದೇನಾ ನೀವು ಹೇಳುವ ರಾಜಮಾರ್ಗ? ಅಧಿಕಾರವೂ ತಪ್ಪಬಾರದು, ಅಭಿವೃದ್ಧಿಯೂ ಆಗಬಾರದು ಎಂದು ನಾನು ಭಾವಿಸಿದ್ದಿದ್ದರೆ, ನೀವು ಮಲ್ಲೇಶ್ವರದಲ್ಲಿ ಶಾಸಕರೇ ಆಗುತ್ತಿರಲಿಲ್ಲ. ಆ ದಿನಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ಗೂಂಡಾಗಳಿಂದ ಗಲಭೆ ಎಬ್ಬಿಸಿದ ಕುಮಾರಸ್ವಾಮಿ: ಯೋಗೇಶ್ವರ್‌

ಅಭಿವೃದ್ಧಿ ಬಗ್ಗೆ ಉಪದೇಶ ಮಾಡಿದ್ದೀರಿ, ನಿಮ್ಮ ಮಾದರಿಯಲ್ಲಿ ಅಭಿವೃದ್ಧಿ ಮಾಡಿಕೊಳ್ಳುವುದು ನನಗೆ ಗೊತ್ತಿಲ್ಲ, ನನ್ನಿಂದ ಆಗುವುದೂ ಇಲ್ಲ. ಅಶ್ವತ್ಥನಾರಾಯಣ ಅವರೇ ಅಧಿಕಾರ ಬರುತ್ತದೆ, ಹೋಗುತ್ತದೆ ಎಂದು ವೇದಾಂತ ಹೇಳಿದ್ದೀರಿ. ಹೌದು, ಇಂಥ ಉದಾತ್ತ, ಆದರ್ಶ ಚಿಂತನೆಯ, ವಿಶಾಲ ಹೃದಯ ವೈಶಾಲ್ಯವುಳ್ಳ ನಿಮ್ಮಂಥ ಪ್ರಾಜ್ಞರೇ ಆಪರೇಶನ್‌ ಕಮಲ ಎಂಬ ಪಾಪ ಎಸಗಿದ್ದೇಕೆ? ನಮ್ಮ ಶಾಸಕರ ಮನೆಯಲ್ಲಿ ಹಣ ಇಟ್ಟು ಬಂದ್ದಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

click me!