ಕಾವೇರಿಯಲ್ಲಿ ನೀರಿನ ಹರಿವು ಏರಿಕೆ, ಹಾರಂಗಿ ಜಲಾಶಯದಿಂದ ಮುನ್ನಚ್ಚರಿಕೆಯಿಂದ ನೀರು ಬಿಟ್ಟು ತಪ್ಪಿದ ಪ್ರವಾಹ

Published : Oct 14, 2025, 08:30 PM IST
Cauvery river

ಸಾರಾಂಶ

ಕುಶಾಲನಗರ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ಕಾವೇರಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹಾರಂಗಿ ಜಲಾಶಯ ನಾಲ್ಕು ಬಾರಿ ಭರ್ತಿಯಾಗಿದ್ದರೂ, ಅಧಿಕಾರಿಗಳ ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ಯಾವುದೇ ಪ್ರವಾಹದ ಅನಾಹುತ ಸಂಭವಿಸಿಲ್ಲ.

ಕುಶಾಲನಗರ: ಕುಶಾಲನಗರ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ದಿನನಿತ್ಯ ಏರಿಕೆ ಆಗುತ್ತಿರುವ ದೃಶ್ಯ ಕಂಡು ಬಂದಿದೆ. ಜಿಲ್ಲೆಯ ಗಡಿ ಭಾಗ ಕುಶಾಲನಗರ ಕೊಪ್ಪ ಕಾವೇರಿ ನದಿ ಸೇತುವೆ ಬಳಿ ನದಿಯಲ್ಲಿ ನೀರು ತುಂಬಿ ಹರಿಯುತ್ತಿರುವ ದೃಶ್ಯ ಗೋಚರಿಸಿದೆ. ಕಳೆದ ಮೇ ತಿಂಗಳ ಅಂತ್ಯದಿಂದ ಆರಂಭಗೊಂಡ ಮಳೆ ನಿರಂತರ ಏಳು ತಿಂಗಳ ಕಾಲ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಸುರಿಯುತ್ತಿದ್ದು, ನಾಲ್ಕು ಬಾರಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿದರು ಯಾವುದೇ ಸಮಸ್ಯೆ ಸೃಷ್ಟಿಯಾಗಿಲ್ಲ.

ಮುನ್ನೆಚ್ಚರಿಕೆ ವಹಿಸಿ ಹಾರಂಗಿಯಿಂದ ನೀರು ಬಿಡುಗಡೆ

ಹಾರಂಗಿ ಜಲಾಶಯ ಇದುವರೆಗೆ ನಾಲ್ಕು ಬಾರಿ ತುಂಬಿದ್ದು ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಸಂದರ್ಭ ಮುನ್ನೆಚ್ಚರಿಕೆ ವಹಿಸಿದ ಕಾರಣ ಕುಶಾಲನಗರ ವ್ಯಾಪ್ತಿಯ ನದಿ ತಟದ ತಗ್ಗು ಪ್ರದೇಶಗಳು ಜಲಾವೃತಗೊಂಡರೂ, ಪ್ರವಾಹ ಉಂಟಾಗುವುದನ್ನು ತಪ್ಪಿಸುವಲ್ಲಿ ಅಣೆಕಟ್ಟು ಅಧಿಕಾರಿಗಳು ಯಶಸ್ಸು ಯಶಸ್ಸು ಸಾಧಿಸಿದ್ದರು. ಯಾವುದೇ ರೀತಿಯ ಪ್ರವಾಹ ಎದುರಾಗದಂತೆ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಡುಗಡೆ ಸಂದರ್ಭ ಎಚ್ಚರ ವಹಿಸಲಾಗಿತ್ತು ಎಂದು ಹಾರಂಗಿ ಅಣೆಕಟ್ಟು ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಅವರು ತಿಳಿಸಿದ್ದಾರೆ.

ಈ ಸಾಲಿನ ಮಳೆಗಾಲದಲ್ಲಿ ಇದುವರೆಗೆ ಸುಮಾರು ಅಂದಾಜು 950 ಮಿಲಿ ಮೀಟರ್ ಪ್ರಮಾಣದ ಮಳೆ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 1200 ಮಿಮಿ ಪ್ರಮಾಣದ ಮಳೆ ಬಿದ್ದಿತ್ತು. ಸುದೀರ್ಘ ಮಳೆ ಸುರಿದರೂ ರೂ ಪಟ್ಟಣ ಪಟ್ಟಣ ಅಥವಾ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಪ್ರಮಾಣದ ಅನಾಹುತಗಳು ಉಂಟಾಗಿಲ್ಲ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಮುಖ ಅಂಶಗಳು

  • ಕುಶಾಲನಗರ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ದಿನನಿತ್ಯ ಏರಿಕೆ ಆಗುತ್ತಿರುವ ದೃಶ್ಯ ಕಂಡು ಬಂದಿದೆ.
  • ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಈ ಸಾಲಿನಲ್ಲಿ ಮೇ ತಿಂಗಳಲ್ಲಿ 302 ಮಿಲಿಮೀಟರ್ ಪ್ರಮಾಣದ ಮಳೆ ಸುರಿದಿದ್ದು ನಂತರ ಪ್ರತಿ ತಿಂಗಳು ಸರಾಸರಿ 150 ಮಿಲಿ ಮೀಟರ್‌ಪ್ರಮಾಣದ ಮಳೆ ಬಿದ್ದ ದಾಖಲೆ ಕಂಡು ಬಂದಿದೆ.

PREV
Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!