ರಸ್ತೆ ಇರೋದೆ ನಮಗೆ ಅಂತಿವೆ ಮಸ್ಕಿ ಪಟ್ಟಣದ ಬಿಡಾಡಿ ದನಗಳು!

By Web Desk  |  First Published Oct 7, 2019, 12:55 PM IST

ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳು ನಿಲ್ಲುವುದರಿಂದ ವಾಹನ ಸವಾರರು ಜೀವ ಭಯದಲ್ಲಿ ವಾಹನಗಳನ್ನು ಚಾಲನೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ| ರಸ್ತೆಯ ಎರಡು ಬದಿಯ ಪುಟ್‌ಪಾತ್‌ಗಳಲ್ಲಿ ಡಬ್ಬಾ ಅಂಗಡಿಗಳು ಅಕ್ರಮವಾಗಿ ಇರುವುದರಿಂದ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ|


ಮಸ್ಕಿ(ಅ.7): ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳು ನಿಲ್ಲುವುದರಿಂದ ವಾಹನ ಸವಾರರು ಜೀವ ಭಯದಲ್ಲಿ ವಾಹನಗಳನ್ನು ಚಾಲನೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ರಸ್ತೆಯ ಎರಡು ಬದಿಯ ಪುಟ್‌ಪಾತ್‌ಗಳಲ್ಲಿ ಡಬ್ಬಾ ಅಂಗಡಿಗಳು ಅಕ್ರಮವಾಗಿ ಇರುವುದರಿಂದ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ.

ಮಸ್ಕಿ ಈಗಾಗಲೇ ತಾಲೂಕು ಕೇಂದ್ರವಾಗಿದ್ದು ದಿನನಿತ್ಯ ವ್ಯಾಪಾರ ವಹಿವಾಟಿಗಾಗಿ ದಿನನಿತ್ಯ ನೂರಾರು ಜನರು ಬರುತ್ತಾರೆ. ಅಲ್ಲದೇ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಬಿಡಾಡಿ ದನಗಳು ರಾತ್ರಿ ಹಾಗೂ ಹಗಲಿನಲ್ಲಿ ರಸ್ತೆಯ ಮೇಲೆಯೇ ಇರುವುದರಿಂದ ಅಪಘಾತಗಳು ಕೂಡ ಸಂಭವಿಸಿ ವಾಹನ ಸವಾರರು ಗಾಯಗೊಂಡು, ಜಾನುವಾರುಗಳು ಸಾವನಪ್ಪಿರುವ ಘಟನೆಗಳು ಜರುಗಿರುವುದರಿಂದ ಎಚ್ಚೆತ್ತ ಪುರಸಭೆ ಹಾಗೂ ಪೊಲೀಸ್‌ ಇಲಾಖೆ ಇದಕ್ಕೆ ಕಡಿವಾಣ ಹಾಕಲು ಜಂಟಿ ಕಾರ್ಯಾಚರಣೆ ನಡೆಸಲು ಮುಂದಾಗಿದ್ದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ನಿಟ್ಟುಸಿರು ಬಿಡುವಂತಾಗಿದೆ.

Latest Videos

undefined

ನೋಟಿಸ್‌:

ಪಟ್ಟಣದಲ್ಲಿ ವ್ಯಾಪಾರ ವಹಿವಾಟಿಗಾಗಿ ಬರುವ ಜನರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ಕಳೆದ ಮೂರು ತಿಂಗಳಿನಿಂದ ಪೊಲೀಸ್‌ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಪುರಸಭೆ ಆಡಳಿತ ಮಂಡಳಿಯವರು ಡಬ್ಬಾ ಅಂಗಡಿ ಮಾಲೀಕರಿಗೆ ಸುಮಾರು ಮೂರು ಬಾರಿ ನೋಟಿಸ್‌ ಜಾರಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈಗ ಯಾವುದೇ ನೋಟಿಸ್‌ ನೀಡದೇ ಪುಟ್‌ಪಾತ್‌ನಲ್ಲಿರುವ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಅನೂಕೂಲ ಮಾಡಿಕೊಡಲು ಮುಂದಾಗಿದ್ದಾರೆ.

ಬಿಡಾಡಿ ದನಗಳ ಹಾವಳಿ:

ಗ್ರಾಮೀಣ ಪ್ರದೇಶದಿಂದ ದ್ವಿಚಕ್ರ ವಾಹನಗಳಲ್ಲಿ ಪಟ್ಟಣಕ್ಕೆ ಬಂದು ವಾಹನಗಳ ಕವರ್‌ಗಳಲ್ಲಿ ಏನಾದರೂ ಇಟ್ಟು ಹೋಗಿ ಬರುವಷ್ಟರಲ್ಲಿ ಅದರಲ್ಲಿರುವ ಹಣ್ಣು, ತರಕಾರಿಗಳು ಬಿಡಾಡಿ ದನಗಳ ಪಾಲಾಗಿ ಬೀಡುತ್ತದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಅಕ್ಕ ಪಕ್ಕದ ಅಂಗಡಿಗಳಲ್ಲಿಟ್ಟು ಹೋಗುವಂತಾಗಿದೆ. ಅಲ್ಲದೆ ವಾಹನಗಳು ಬರುತ್ತಿರುವಾಗ ದನಗಳು ಅಡ್ಡ ಹೋಗಿ ಕೆಲವೊಂದು ಸಂದರ್ಭಗಳಲ್ಲಿ ಅಪಘಾತಗಳು ಸಂಭವಿಸಿ ಸವಾರರು ಗಾಯಗೊಂಡಿರುವ ಘಟನೆಗಳು ಸಹ ಜರುಗಿವೆ. ಅಲ್ಲದೆ ರಸ್ತೆಯಲ್ಲಿರುವ ದನಗಳನ್ನು ಪೊಲೀಸರೇ ಓಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದರಿಂದ ಎಚ್ಚೆತ್ತ ಪೊಲೀಸ್‌ ಹಾಗೂ ಪುರಸಭೆ ಅಧಿಕಾರಿಗಳು ಜಂಟಿ ಕಾರ್ಯಚಾರಣೆ ಮುಂದಾಗಿ ಮೈಕ್‌ ಮೂಲಕ ಸಂಭಂಧ ಪಟ್ಟವರ ಗಮನಕ್ಕೆ ತರಲು ಮುಂದಾಗಿದ್ದಾರೆ. ಈಗಲಾದರೂ ವಾಹನ ಸವಾರರು ಹಾಗೂ ಪಾದಚಾರಿಗಳು ನಿರ್ಭಯವಾಗಿ ಓಡಾಡಲು ಅನೂಕೂಲವಾಗುತ್ತಾ ಕಾದು ನೋಡಬೇಕಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಮಸ್ಕಿ ಪಿಎಸ್‌ಐ ಸಣ್ಣ ಈರೇಶ ಅವರು, ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಬಿಡಾಡಿ ದನಗಳಿಂದ ತೊಂದರೆಯಾಗುತ್ತಿದೆ. ಆದ್ದರಿಂದ ಬಿಡಾಡಿ ದನಗಳನ್ನು ರಾಯಚೂರಿನಲ್ಲಿರುವ ಅಲ್ಕೂರು ಗೋ ಶಾಲೆಗೆ ಕಳಿಸಲಾಗುವುದು ಎಂದು ಹೇಳಿದ್ದಾರೆ. 

ಮಸ್ಕಿ ಪಟ್ಟಣದಲ್ಲಿ ಫುಟ್‌ಪಾತ್‌ ಮೇಲೆ ಇಟ್ಟಿರುವ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸವಂತೆ ಈಗಾಗಲೇ ಅವರಿಗೆ ಸೂಚಿಸಲಾಗಿದೆ. ಒಂದು ವೇಳೆ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಲು ಮುಂದಾಗದಿದ್ದರು.ಪುರಸಭೆಯಿಂದ ತೆರವುಗೊಳಿಸಿ ಪಾದಚಾರಿಗಳು ಸಂಚರಿಸಲು ಅನೂಕೂಲ ಮಾಡಿಕೊಡಲಾಗುವುದು ಎಂದು ಮಸ್ಕಿ ಪುರಸಭೆ ಮುಖ್ಯಾಧಿಕಾರಿ ರಡ್ಡಿರಾಯನಗೌಡ ಅವರು ಹೇಳಿದ್ದಾರೆ. 
 

click me!