ಕೊಪ್ಪಳ: ಸ್ವಾತಂತ್ರ್ಯ ಹೋರಾಟದಲ್ಲಿರಲಿಲ್ಲ ಜಾತಿ, ಧರ್ಮ: ಅಬ್ದುಲ್‌ ಖಾದರ್‌ಸಾಬ್‌

By Kannadaprabha News  |  First Published Jan 28, 2023, 7:18 AM IST

ಎಲ್ಲ ಸಮುದಾಯದವರು ಧರ್ಮದ ರಕ್ಷಣೆಗಾಗಿ ಮಾಡಿದಂಥ ಹೋರಾಟವನ್ನು ದೇಶದ ರಕ್ಷಣೆಗೂ ಮಾಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಧರ್ಮ ಜಾತಿ ಮರೆತು ನಾವೆಲ್ಲ ಭಾರತೀಯರು ಎಂದು ಒಗ್ಗೂಡಿ ಹೋರಾಡಿದ್ದಾರೆ ಎಂದು ಅಣ್ಣಿಗೇರಿಯ ಉಪನ್ಯಾಸಕ ಅಬ್ದುಲ್‌ ಖಾದರ್‌ಸಾಬ್‌ ಹೇಳಿದರು.


ಕೊಪ್ಪಳ (ಜ.28) :

ಎಲ್ಲ ಸಮುದಾಯದವರು ಧರ್ಮದ ರಕ್ಷಣೆಗಾಗಿ ಮಾಡಿದಂಥ ಹೋರಾಟವನ್ನು ದೇಶದ ರಕ್ಷಣೆಗೂ ಮಾಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಧರ್ಮ ಜಾತಿ ಮರೆತು ನಾವೆಲ್ಲ ಭಾರತೀಯರು ಎಂದು ಒಗ್ಗೂಡಿ ಹೋರಾಡಿದ್ದಾರೆ ಎಂದು ಅಣ್ಣಿಗೇರಿಯ ಉಪನ್ಯಾಸಕ ಅಬ್ದುಲ್‌ ಖಾದರ್‌ಸಾಬ್‌ ಹೇಳಿದರು.

Latest Videos

undefined

74ನೇ ಗಣರಾಜ್ಯೋತ್ಸವ ಅಂಗವಾಗಿ ಗುರುವಾರ ಶಾದಿಮಹಲ್‌ನಲ್ಲಿ ಜಮೀಯುತುಲ್‌ ಉಲ್ಮಾ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ‘ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಉಲ್ಮಾ ಹಾಗೂ ಮುಸ್ಲಿಮರ ತ್ಯಾಗ ಮತ್ತು ಬಲಿದಾನ’ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

Assembly election: ಕುಂದಗೋಳ ಕ್ಷೇತ್ರದ ಕೈ ಟಿಕೆಟ್‌ಗೆ ಹೊರಗಿನವರ ಪೈಪೋಟಿ!

ಗಣರಾಜ್ಯೋತ್ಸವವನ್ನು ನಾವು ಸಂಭ್ರಮದಿಂದ ಆಚರಿಸುತ್ತಿದ್ದು, ಇದರ ಹಿಂದೆ ಅನೇಕ ಮಹನೀಯರ ತ್ಯಾಗವಿದೆ, ಶ್ರಮವಿದೆ. ಟಿಪ್ಪು ಸುಲ್ತಾನ್‌ ದೇಶಕ್ಕಾಗಿ ಹೋರಾಡುವಾಗ ಎಲ್ಲರಲ್ಲಿಯೂ ಭಾವೈಕ್ಯ ಇತ್ತು. ಹುಸೇನ್‌ ಮದನಿ ಎಂಬವರು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಜನರನ್ನು ಹುರಿದುಂಬಿಸಿದರು. ದೇಶದ ಹೋರಾಟಕ್ಕಾಗಿ ಜಾತಿ, ಮತವನ್ನು ಯಾರೂ ನೋಡಲಿಲ್ಲ. ಈಗಲೂ ನಾವು ಭಾರತೀಯರು ಎನ್ನುವ ಮನೋಭಾವ ಎಲ್ಲರಲ್ಲಿ ಮೂಡಲಿ ಎಂದರು.

ಯುಸೂಫಿಯಾ ಮಸೀದಿಯ ಹಜರತ್‌ ಮುಫ್ತಿ ನಜೀರ್‌ ಅಹ್ಮದ್‌ ಖಾದ್ರಿ ತಸ್ಕೀನ್‌ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹಿಂದೂ, ಮುಸ್ಲಿಂ, ಸಿಖ್‌ ಹೀಗೆ ಎಲ್ಲ ಧರ್ಮದವರೂ ಹೋರಾಡಿದ್ದಾರೆ. ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಆಚರಣೆಯ ಹಿಂದೆ ಅನೇಕ ಮುಸ್ಲಿಂ ಹೋರಾಟಗಾರರ ಕೊಡುಗೆಯೂ ಇದೆ. ಸಣ್ಣ ವಯಸ್ಸಿನಲ್ಲಿಯೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಶ್ಫಾಕುಲ್ಲಾ ಖಾನ್‌ ಸೇರಿದಂತೆ ಅನೇಕರ ಬಲಿದಾನದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಿದೆ ಎಂದರು.

ಜಮೀಯುತುಲ್‌ ಉಲ್ಮಾ ಜಿಲ್ಲಾ ಸಮಿತಿಯ ಅಧ್ಯಕ್ಷ ಮೌಲಾನ ಮುಫ್ತಿ ಹುಸೇನ್‌ ಸಾಹೇಬ್‌, ಮಹಮ್ಮದ್‌ ಅಲಿ ಹಿಮಾಯತಿ, ರಾಯಚೂರಿನ ಶಾಮೀದ್‌ ಅಲಿ, ಉದ್ಯಮಿ ಇಮ್ತಿಯಾಜ್‌ ಅನ್ಸಾರಿ, ಎಸ್‌.ಬಿ. ಖಾದ್ರಿ, ಜಿಲ್ಲಾ ವಕ್ಫ್ ಬೋರ್ಡ್‌ ಅಧ್ಯಕ್ಷ ಪೀರಾಹುಸೇನ್‌ ಆರ್‌. ಹೊಸಳ್ಳಿ, ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ಬಸವರಾಜ ಬೊಳ್ಳಿಳ್ಳಿ, ಪದಮ್‌ ಕುಮಾರ್‌ ಮೆಹತಾ, ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ, ಜೆಡಿಎಸ್‌ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ಮುನೀರ್‌ ಸಿದ್ದಿಖಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಉತ್ತರ ಕರ್ನಾಟಕದಲ್ಲಿ ಇಂದು ಅಮಿತ್‌ ‘ಶೋ’

ನಿವೃತ್ತ ಕಂದಾಯ ಅಧಿಕಾರಿ ಲಾಯಖ್‌ ಅಲಿ ಸಾಹೇಬ್‌, ಅಂಜುಮನ್‌ ಕಮಿಟಿ ಅಧ್ಯಕ್ಷ ಆಸೀಫ್‌ ಕರ್ಕಿಹಳ್ಳಿ, ನಗರಸಭೆ ಮಾಜಿ ಸದಸ್ಯ ಖಾಜಾವಲಿ ಬನ್ನಿಕೊಪ್ಪ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಿರಾಜ್‌ ಮೌಲಾನಾ ರಶಾದಿ ಕಾರ್ಯಕ್ರಮ ನಿರ್ವಹಿಸಿದರು.

click me!