ಫೈರ್ ಮಾಡಿದ್ರೂ ಒಬ್ರೂ ಸಾಯಲಿಲ್ಲ ಎಂದ SI ವಿರುದ್ಧ ದೂರು

Kannadaprabha News   | Asianet News
Published : Dec 26, 2019, 09:36 AM IST
ಫೈರ್ ಮಾಡಿದ್ರೂ ಒಬ್ರೂ ಸಾಯಲಿಲ್ಲ ಎಂದ SI ವಿರುದ್ಧ ದೂರು

ಸಾರಾಂಶ

ಮಂಗಳೂರಿನಲ್ಲಿ ಡಿಸೆಂಬರ್ 19 ರಂದು ನಡೆದ ಸೂರ್ಯಗ್ರಹಣದಲ್ಲಿ ಒಬ್ರೂ ಸಾಯಲಿಲ್ಲ ಎಂದು ಹೇಳಿದ್ದ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ದೂರು ದಾಖಲಾಗಿದೆ. 

ಮಂಗಳೂರು [ಡಿ.26]: ಗೋಲಿಬಾರ್ ವೇಳೆ ‘ಫೈರ್ ಮಾಡಿದ್ರೂ ಒಬ್ಬರೂ ಸಾಯಲಿಲ್ಲ’ ಎಂದು ಹೇಳಿಕೆ ನೀಡಿದ್ದರು ಎನ್ನಲಾದ ಪೊಲೀಸ್ ಇನ್ಸ್‌ಪೆಕ್ಟರ್ ಶಾಂತರಾಮ್ ವಿರುದ್ಧ ಮಂಗಳೂರಿನ ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ. 

ಡಿ.19ರಂದು ಮಂಗಳೂರು ನಗರದಲ್ಲಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಯ ಸಂದರ್ಭ ನಡೆದ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಪೊಲೀಸ್ ಗುಂಡಿಗೆ ಮೃತಪಟ್ಟಿದ್ದರು. 

ಸರ್ಕಾರದ ಪರಿಹಾರ ನಿರಾಕರಿಸಲು ಮುಸ್ಲಿಂ ಒಕ್ಕೂಟ ಕರೆ...

ಗಲಭೆ ನಿಯಂತ್ರಿಸುವ ಸಂದರ್ಭ ಕದ್ರಿ ಠಾಣೆ ಇನ್‌ಸ್ಪೆಕ್ಟರ್ ಶಾಂತರಾಮ್ ಅವರು ಪ್ರಾರ್ಥನಾ ಸ್ಥಳದ ಸಮೀಪ ಪ್ರತಿಭಟನಾಕಾರರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿ ಅವರನ್ನು ಕೊಲ್ಲುವ ಕುರಿತು ಆತಂಕಕಾರಿ ಹೇಳಿಕೆ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೊವೊಂದರ ಆಧಾರದಲ್ಲಿ ಹನೀಫ್ ಕಾಟಿಪಳ್ಳ ಎಂಬುವರು ದೂರು ನೀಡಿದ್ದಾರೆ.

PREV
click me!

Recommended Stories

ಉತ್ಖನನ ವೇಳೆ ನಿಧಿ ದೊರೆತರೆ ಲಕ್ಕುಂಡಿ ಗ್ರಾಮವೇ ಸ್ಥಳಾಂತರ?
Breaking: ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ: ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ!