ಮಾಹಿತಿ ಮುಚ್ಚಿಟ್ಟು ಸೋಂಕು ಹರಡಿದ ಸಹೋದರರು..!

By Kannadaprabha News  |  First Published Jun 28, 2020, 7:52 AM IST

ಜೂನ್‌ 25ರಂದು ಪಡುಬಿದ್ರಿಯ ನಡ್ಸಾಲು ಗ್ರಾಮದ 42 ವರ್ಷ (ರೋಗಿ ಸಂಖ್ಯೆ 10186) ಮತ್ತು 37 ವರ್ಷ (ರೋಗಿ ಸಂಖ್ಯೆ 10187)ದ ಸಹೋದರರಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು.


ಉಡುಪಿ(ಜೂ.28): ಜೂನ್‌ 25ರಂದು ಪಡುಬಿದ್ರಿಯ ನಡ್ಸಾಲು ಗ್ರಾಮದ 42 ವರ್ಷ (ರೋಗಿ ಸಂಖ್ಯೆ 10186) ಮತ್ತು 37 ವರ್ಷ (ರೋಗಿ ಸಂಖ್ಯೆ 10187)ದ ಸಹೋದರರಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು.

ಅವರಿಂದ ಮನೆಯ 1 ವರ್ಷದ ಮಗುವೂ ಸೇರಿದಂತೆ 4 ಮಂದಿಗೆ ಕೊರೋನಾ ಸೋಂಕು ಹರಡಿದೆ. ಆರಂಭದಲ್ಲಿ ಅವರು ತಾವೆಲ್ಲೂ ಹೋಗಿರಲಿಲ್ಲ, ಮನೆಯಲ್ಲಿಯೇ ಇದ್ದೆವು, ಸೋಂಕು ಹೇಗೆ ಬಂತು ಎಂಬುದು ಗೊತ್ತಿಲ್ಲ ಎಂದು ಆರೋಗ್ಯಾಧಿಕಾರಿಗಳಿಗೆ ಹೇಳಿದ್ದರು. ಆದರೆ ಅವರು ಮಂಗಳೂರು, ಉಳ್ಳಾಲ, ಬಂಟ್ವಾಳ ಮುಂತಾದ ಕಡೆಗಳಿಗೆ ಹೋಗಿ ಬಂದಿರುವುದು ಇದೀಗ ಪತ್ತೆಯಾಗಿದೆ.

Tap to resize

Latest Videos

undefined

ಉಳ್ಳಾ​ಲ: ಕುಟುಂಬದ ಎಲ್ಲ 17 ಮಂದಿಗೆ ಪಾಸಿ​ಟಿ​ವ್‌!

ಅವರು ತಮ್ಮ ಟ್ರಾವೆಲ್‌ ಹಿಸ್ಟರಿಯನ್ನು ಮತ್ತು ತಮ್ಮ ಪ್ರಾಥಮಿಕ ಸಂಪರ್ಕದ ಬಗ್ಗೆ ಜಿಲ್ಲಾಡಳಿತಕ್ಕೆ ಸುಳ್ಳು ಮಾಹಿತಿ ನೀಡಿದ್ದರಿಂದ ಅವರ ಸಂಪರ್ಕಿತರನ್ನು ತಕ್ಷಣ ಪತ್ತೆ ಹಚ್ಚಲು ಸಾಧ್ಯವಾಗದೆ ಜಿಲ್ಲಾಡಳಿತಕ್ಕೆ ತೊಂದರೆಯಾಗಿತ್ತು. ಆದ್ದರಿಂದ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

click me!