ಚಾಮರಾಜನಗರ: ಸಚಿವ, ಶಾಸಕ ವಿರುದ್ಧ ಎಸ್ಪಿಗೆ ದೂರು

By Kannadaprabha NewsFirst Published Apr 12, 2020, 12:41 PM IST
Highlights

ಕೊರೋನಾ ಹರಡದಂತೆ ದೇಶದಲ್ಲಿ ಲಾಕ್‌ಡೌನ್‌ ಹಾಗೂ ನಿಷೇದಾಜ್ಞೆ ಉಲ್ಲಂಘಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ ಕುಮಾರ್‌, ಶಾಸಕ ಸಿ.ಎಸ್‌.ನಿರಂಜನ್‌ ಕುಮಾರ್‌ ವಿರುದ್ಧ ಜಿಲ್ಲಾ ರೈತಸಂಘ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಗುಂಡ್ಲುಪೇಟೆ(ಏ.12): ಕೊರೋನಾ ಹರಡದಂತೆ ದೇಶದಲ್ಲಿ ಲಾಕ್‌ಡೌನ್‌ ಹಾಗೂ ನಿಷೇದಾಜ್ಞೆ ಉಲ್ಲಂಘಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ ಕುಮಾರ್‌, ಶಾಸಕ ಸಿ.ಎಸ್‌.ನಿರಂಜನ್‌ ಕುಮಾರ್‌ ವಿರುದ್ಧ ಜಿಲ್ಲಾ ರೈತಸಂಘ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಸಚಿವ, ಶಾಸಕರು ತಮ್ಮ ಬೆಂಬಲಿಗರೊಂದಿಗೆ ಲಾಕ್‌ಡೌನ್‌, ನಿಷೇಧಾಜ್ಞೆ ನಡುವೆ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಆಹಾರ ಪದಾರ್ಥ ಕೊಡುವ ನೆಪದಲ್ಲಿ ಕೊರೋನಾ ಹರಡಲು ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಬ್ಲಿಘಿ: ರೇಣುಕಾಚಾರ್ಯ ಆಯ್ತು ಯತ್ನಾಳ್‌ರಿಂದ ವಿವಾದದ ಕಿಡಿ

ಬಡವರ ಹೆಸರಲ್ಲಿ ಅಕ್ಕಿ, ಎಣ್ಣೆ, ಉಪ್ಪು ನೀಡುವ ಮೂಲಕ ರಾಜಕೀಯ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ ಹಾಗು ನಿಷೇಧಾಜ್ಞೆ ಉಲ್ಲಂಘಿಸಿ, ಸುರಕ್ಷತಾ ಕ್ರಮಗಳಲ್ಲದೆ ತೆರಳುತ್ತಿದ್ದಾರೆ. ಕೊರೋನಾ ಸೋಂಕು ಹರಡಲು ಸಚಿವ, ಶಾಸಕರು ಕಾರಣರಾಗಿದ್ದಾರೆ. ಇವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಎಸ್ಪಿಗೆ ನೀಡಿರುವ ದೂರಿನಲ್ಲಿ ಜಿಲ್ಲಾ ರೈತ ಸಂಘ ಮನವಿ ಮಾಡಿದೆ.

click me!