ಕೋಳಿ ಸಾರಿಗಾಗಿ ಜಗಳ; ಕೊಲೆಯಲ್ಲಿ ಅಂತ್ಯ

Suvarna News   | Asianet News
Published : Dec 30, 2020, 09:20 AM IST
ಕೋಳಿ ಸಾರಿಗಾಗಿ ಜಗಳ; ಕೊಲೆಯಲ್ಲಿ ಅಂತ್ಯ

ಸಾರಾಂಶ

ಕೋಳಿ ಸಾರಿಗಾಗಿ ನಡೆಯಿತು ಜಗಳ | ರಾತ್ರಿಯೂಟದ ಕೋಳಿ ಸಾರಿನ ಜಗಳ ಕೊಲೆಯಲ್ಲಿ ಅಂತ್ಯ

ಗೋಣಿಕೊಪ್ಪ(ಡಿ.30) : ಸಣ್ಣಪುಟ್ಟ ಜಗಳ ಅತಿರೇಕಕ್ಕೆ ಹೋಗಿ ಕೊಲೆಯಲ್ಲಿ ಕೊನೆಯಾಗುವ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಇಲ್ಲೊಂದು ಕಡೆ ಕೋಳಿ ಸಾರಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಕಾರ್ಮಿಕರ ನಡುವೆ ಕೋಳಿ ಸಾರು ಬಡಿಸುವ ವಿಚಾರದಲ್ಲಿ ನಡೆದ ಕಲಹ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಇಲ್ಲಿಗೆ ಸಮೀ​ಪದ ನಾಲ್ಕೇರಿ ಗ್ರಾಮದ ಮಹೇಶ್‌ ಎಂಬುವವರ ತೋಟದಲ್ಲಿ ಸೋಮವಾರ ರಾತ್ರಿ ನಡೆದಿದೆ. ಕೊಲೆ ಆರೋಪಿ 17 ವರ್ಷದ ಹುಡುಗನನ್ನು ಕುಟ್ಟಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ತರಕಾರಿಗಳ ಮಧ್ಯೆ ಡಗ್ಸ್‌ ಇಟ್ಟು ಸಾಗಾಟ!

ನಂಜನಗೂಡು ತಾಲೂಕಿನ ಕೊತ್ತೇನಹಳ್ಳಿಯ ಕುಮಾರ್‌ ದಾಸ (25) ಕೊಲೆಯಾದ ಕಾರ್ಮಿಕ. ಕುಮಾರ್‌ ದಾಸ ಹಾಗೂ ಕೊಲೆ ಆರೋಪಿ 17 ವರ್ಷದ ಹುಡುಗ 25 ದಿನಗಳ ಹಿಂದೆ ಮಹೇಶ್‌ ಅವರ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡು ಒಟ್ಟಾಗಿ ವಾಸಿಸುತ್ತಿದ್ದರು.

ಸೋಮವಾರ ರಾತ್ರಿ ಊಟ ಮಾಡುವ ಸಂದರ್ಭ ಕೋಳಿ ಸಾರು ಬಡಿಸುವ ವಿಚಾರದಲ್ಲಿ ಜಗಳ ನಡೆದು, ಆರೋಪಿ ಹುಡುಗ ಬ್ಯಾಟ್‌ ಹಾಗೂ ಸೌದೆಯಿಂದ ಕುಮಾರ್‌ ದಾಸ ಅವರ ತಲೆಗೆ ಹೊಡೆದ ಪರಿಣಾಮ ಸ್ಥಳದಲ್ಲಿ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಕುಟ್ಟಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ವಿದ್ಯಾರ್ಥಿಗಳೇ ತಂತ್ರಜ್ಞಾನ ಯುಗದಲ್ಲಿ ಪ್ರಶ್ನೆ ಮಾಡುವ ಧೈರ್ಯ ಬೆಳೆಸಿಕೊಳ್ಳಿ: ರಶ‍್ಮಿ ಮಹೇಶ್
Shivamogga News: ಹೊಸನಗರ ಕಾಲೇಜು ಪ್ರತಿಭಾವಂತ ವಿದ್ಯಾರ್ಥಿನಿ ರಚನಾ ನೇಣಿಗೆ ಶರಣು!