ಯಾದಗಿರಿ: ದಲಿತರಿಗೆ ಬಹಿಷ್ಕಾರ, 10 ಜನರ ವಿರುದ್ಧ ಕೇಸ್, ಎಲ್ಲರೂ ನಾಪತ್ತೆ..!

By Kannadaprabha NewsFirst Published Sep 15, 2024, 7:12 AM IST
Highlights

ಆರೋಪಿಗಳು ಗುಂಪು ಕಟ್ಟಿಕೊಂಡು ಗ್ರಾಮದ ಅಂಗಡಿಗಳಿಗೆ ತೆರಳಿ ದಲಿತರಿಗೆ ಕಿರಾಣಿ ಅಂಗಡಿ, ಪಾನ್‌ಶಾಪ್, ಬುಕ್‌ಸ್ಟಾಲ್ ಹಾಗೂ ಹೋಟೆಲ್ ಗಳಲ್ಲಿ ಯಾವುದೇ ವಸ್ತು ನೀಡದಂತೆ, ಗಿರಣಿ ಹಾಗೂ ಕಾರಕುಟ್ಟುವ ಯಂತ್ರಗಳ ಅಂಗಡಿಗಳಲ್ಲಿ ಅವರ ಆಹಾರ ಧಾನ್ಯಗಳನ್ನು ಪಡೆಯದಂತೆ ಸಂಚು ರೂಪಿಸಿದ್ದಾರೆ. ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ ಹಾಕಿದ್ದಾರೆ. 

ಹುಣಸಗಿ/ಕೊಡೇಕಲ್(ಸೆ.15):  ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಯಾದ ಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದ 10 ಮಂದಿ ವಿರುದ್ಧ ಜಾತಿನಿಂದನೆ, ಜೀವಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಸೇರಿ ವಿವಿಧ ಪ್ರಕರಣಗಳಡಿ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಶನಿವಾರ ಬೆಳಗ್ಗೆ ದೂರು ದಾಖಲಾಗಿದೆ. 

ಗ್ರಾಮದ ಶಂಕರಗೌಡ ಮಾಲೀ ಪಾಟೀಲ್, ಚಂದಪ್ಪ ತುಂಬಗಿ, ಈರಣ್ಣ ಮಾಲಿಪಾಟೀಲ್, ಯಲ್ಲಾಲಿಂಗ ಗೌಡರ್, ಮುದ್ದಮ್ಮ, ಈರಾಬಾಯಿ ದೇವೂರು, ಭಾರತೇಶ ಹುಬ್ಬಳ್ಳಿ, ಅಶೋಕ ಮಾಲಿ, ಬಂದೆಪ್ಪ ಡೊಳ್ಳಿ, ಶಾಂತವ್ವ ಬಿರಾದರ್ ಎಂಬುವವರ ವಿರುದ್ದ ಚಂದ್ರಪ್ಪ ಎನ್ನುವವರು ನೀಡಿದ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. 

Latest Videos

ಬಾಲಕಿ ಮೇಲೆ ರೇಪ್‌: ಕೇಸ್‌ ಹಾಕಿದ್ದಕ್ಕೆ ದಲಿತರಿಗೆ ಯಾದಗಿರಿಯಲ್ಲಿ ಬಹಿಷ್ಕಾರ..!

ಆರೋಪಿಗಳು ಗುಂಪು ಕಟ್ಟಿಕೊಂಡು ಗ್ರಾಮದ ಅಂಗಡಿಗಳಿಗೆ ತೆರಳಿ ದಲಿತರಿಗೆ ಕಿರಾಣಿ ಅಂಗಡಿ, ಪಾನ್‌ಶಾಪ್, ಬುಕ್‌ಸ್ಟಾಲ್ ಹಾಗೂ ಹೋಟೆಲ್ ಗಳಲ್ಲಿ ಯಾವುದೇ ವಸ್ತು ನೀಡದಂತೆ, ಗಿರಣಿ ಹಾಗೂ ಕಾರಕುಟ್ಟುವ ಯಂತ್ರಗಳ ಅಂಗಡಿಗಳಲ್ಲಿ ಅವರ ಆಹಾರ ಧಾನ್ಯಗಳನ್ನು ಪಡೆಯದಂತೆ ಸಂಚು ರೂಪಿಸಿದ್ದಾರೆ. ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಬಾಲಕಿ ಮೇಲೆ ರೇಪ್ ಕೇಸ್‌: ಯಾದಗಿರಿ ಹಳ್ಳೀಲಿ ದಲಿತರ ಮೇಲಿನ ಬಹಿಷ್ಕಾರ ವಾಪಸ್‌

ಬಿಎನ್‌ಎಸ್‌ 2023, ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯಿದೆ ಅಡಿ ಕೇಸ್ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿ ದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಗ್ರಾಮದ ಯುವಕನೊಬ್ಬ ಬಾಲಕಿಯೊಬ್ಬ ಳನ್ನು ಮದುವೆಯಾಗುವುದಾಗಿ ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಬಾಲಕಿ ಗರ್ಭಿಣಿ ಯಾಗುತ್ತಿದ್ದಂತೆ ಕೈಕೊಟ್ಟಿದ್ದ. ಈ ಸಂಬಂಧ ಬಾಲಕಿ ಕುಟುಂಬಸ್ಥರು ರಾಜೀ ಪಂಚಾಯ್ತಿಗೆ ಒಪದೆ ಪೋಕೋ ಕಾಯ್ದೆಯಡಿ ದೂರು ನೀಡಿದ್ದಕ್ಕೆ ಆಕ್ರೋಶಗೊಂಡ ಸವರ್ಣೀಯ ಮುಖಂಡರು ಗ್ರಾಮದ ದಲಿತರಿಗೆ ಬಹಿಷ್ಕಾರ ಹಾಕಿದ್ದ ಆರೋಪ ಕೇಳಿಬಂದಿತ್ತು. ಈ ಬಗ್ಗೆ 'ಕನ್ನಡಪ್ರಭ' ವರದಿ ಸಂಚಲನ ಮೂಡಿಸಿತ್ತು. ಸುದ್ದಿ ತಿಳಿದು ಗ್ರಾಮಕ್ಕೆ ದೌಡಾಯಿಸಿದ ಅಧಿಕಾರಿಗಳು ಶುಕ್ರವಾರ ಶಾಂತಿ ಸಭೆ ನಡೆಸಿ ದ್ದರು. ಇದರ ಬೆನ್ನಲ್ಲೇ ಕೇಸ್ ದಾಖಲಾಗಿರು ವುದು ಗ್ರಾಮದಲ್ಲಿನ್ನೂ ಪರಿಸ್ಥಿತಿ ಬೂದಿಮು ಚ್ಚಿದ ಕೆಂಡದಂತಿದೆ ಎಂಬಂತಾಗಿದೆ.

ಗ್ರಾಮಕ್ಕೆ ಸುರಪುರ ನ್ಯಾಯಾಧೀಶರ ಭೇಟಿ 

ಕೊಡೇಕಲ್‌: ದಲಿತರಿಗೆ ಬಹಿಷ್ಕಾರ ಹಾಕಿರುವ ಸುದ್ದಿ ತಿಳಿದು ಸುರಪುರ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಫಕೀರಪ್ಪ ಕೆಳಗೇರಿ ಅವರು ಶನಿವಾರ ಬಪ್ಪರಗಾ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಸಂತ್ರಸ್ತ ಬಾಲಕಿ ಹಾಗೂ ಪಾಲಕರಿಗೆ ಸಾಂತ್ವನ ಹೇಳಿ ಘಟನೆ ಕುರಿತು ಮಾಹಿತಿ ಪಡೆದರು.  ಬಾಲಕಿ ಮೇಲೆ ನಡೆದಿರುವುದು ನಿಜಕ್ಕೂ ಹೀನಕೃತ್ಯ ಎಂದ ಅವರು, ದಲಿತರ ಬಹಿಷ್ಕಾರ ಅಮಾನವೀಯ ಎಂದು ಅಭಿಪ್ರಾಯಪಟ್ಟರು. 
ಈ ಮಧ್ಯೆ, ಸಂತ್ರಸ್ತೆ ಮನೆಗೆ ನಾಗರಿಕ ಹಕ್ಕು ನಿರ್ದೇಶನಾಲಯದ ಕಲಬುರಗಿ ವಿಭಾಗದ ಪಿಎಸ್‌ಐ ಮಹಾಂತೇಶ ಪಾಟೀಲ್ ಸಹ ಭೇಟಿ ನೀಡಿ ಮಾಹಿತಿ ಪಡೆದರು. ಘಟನೆ ಕುರಿತು ಮುಂದಿನ ಕ್ರಮಕ್ಕಾಗಿ ನಾಗರಿಕ ಮಾನವ ಹಕ್ಕುಗಳ ವರಿಷ್ಠಾಧಿಕಾರಿ ಆರ್.ಕರ್ನೂಲ್ ಅವರಿಗೆ ವರದಿ ಸಲ್ಲಿಸಲಾಗುವುದು ಎಂದರು.

click me!