ಭೂತಾನ್ ದೇಶದಿಂದ 17 ಸಾವಿರ ಟನ್ ಹಸಿ ಅಡಕೆಯನ್ನು ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ಪ್ರಸ್ತಾವನೆಯ ಬೆನ್ನಲ್ಲೇ ಗೊಂದಲ ಹೇಳಿಕೆಗಳು ಹೊರಬರುತ್ತಿವೆ. ವಾಸ್ತವವಾಗಿ ಇದರಿಂದ ರಾಜ್ಯದಲ್ಲಿನ ಅಡಕೆ ಬೆಳೆ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರದು ಎಂದು ರಾಜ್ಯ ಅಡಕೆ ಮಾರಾಟ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷ ವೈ.ಎಸ್. ಸುಬ್ರಹ್ಮಣ್ಯ ಯಡಗೆರೆ ಸ್ಪಷ್ಟನೆ ನೀಡಿದರು.
ಶಿವಮೊಗ್ಗ (ಅ.9) : ಭೂತಾನ್ ದೇಶದಿಂದ 17 ಸಾವಿರ ಟನ್ ಹಸಿ ಅಡಕೆಯನ್ನು ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ಪ್ರಸ್ತಾವನೆಯ ಬೆನ್ನಲ್ಲೇ ಗೊಂದಲ ಹೇಳಿಕೆಗಳು ಹೊರಬರುತ್ತಿವೆ. ವಾಸ್ತವವಾಗಿ ಇದರಿಂದ ರಾಜ್ಯದಲ್ಲಿನ ಅಡಕೆ ಬೆಳೆ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಮಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್. ಮಹೇಶ್ ಮತ್ತು ಮಾಜಿ ಉಪಾಧ್ಯಕ್ಷ ಹಾಗೂ ರಾಜ್ಯ ಅಡಕೆ ಮಾರಾಟ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷ ವೈ.ಎಸ್. ಸುಬ್ರಹ್ಮಣ್ಯ ಯಡಗೆರೆ ಸ್ಪಷ್ಟನೆ ನೀಡಿದರು.
ಭೂತಾನ್ ಅಡಕೆ ಆಮದಿನಿಂದ ಧಕ್ಕೆ ಇಲ್ಲ: ಜ್ಞಾನೇಂದ್ರ
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಕೆ ಬೆಳೆಗಾರರು ಈ ವಿಷಯದಲ್ಲಿ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗಬಾರದು. ಭೂತಾನ್ ದೇಶದಿಂದ ಅಡಕೆಯನ್ನು ಆಮದು ಮಾಡಿಕೊಳ್ಳುವಾಗ ಪಶ್ಚಿಮ ಬಂಗಾಳದ ಬಂದರಿನ ಮೂಲಕ ಆಮದು ಮಾಡಿಕೊಂಡಾಗ ಮಾತ್ರ ಕನಿಷ್ಠ ಆಮದು ಬೆಲೆ ವಿನಾಯಿತಿ ಅನ್ವಯವಾಗುತ್ತದೆ. ಭೂತಾನ್, ಮೂರು ಕಡೆ ಭಾರತ ಮತ್ತು ಒಂದು ಕಡೆ ಟಿಬೆಟ್‌ನಿಂದ ಆವೃತವಾಗಿದೆ. ಬಂದರಿಗೆ ಹಸಿ ಅಡಿಕೆ ತರುವ ಮೊದಲು ಅದನ್ನು ಭಾರತಕ್ಕೆ ರಸ್ತೆ ಮಾರ್ಗದ ಮೂಲಕ ತಂದು, ಆನಂತರ ಬಂಗಾಳಕೊಲ್ಲಿ ಸಮುದ್ರಕ್ಕೆ ಇಳಿಸಿ, ಆಯಗಾಂವ್ ಬಂದರಿಗೆ ತರಬೇಕಾಗುತ್ತದೆ. ಇಲ್ಲಿ ಉಂಟಾಗುವ ಸಾಗಣೆ ವೆಚ್ಚದಿಂದ ಭೂತಾನ್ ಅಡಕೆ ಬೆಲೆ ದುಪ್ಪಟ್ಟಾಗುತ್ತದೆ. ಹೀಗಾಗಿ ದೇಶಿಯ ಅಡಕೆಯ ಧಾರಣೆ ಕುಸಿಯುತ್ತದೆ ಎಂಬುದು ಕೇವಲ ಊಹಾಪೋಹ ಎಂದು ಹೇಳಿದರು.
ದೇಶಿಯ ಅಡಕೆ ಬೆಳೆಗಾರರ ಹಿತಾಸಕ್ತಿ, ರಕ್ಷಣೆಗಾಗಿ ಅಡಕೆ ಆಮದು ನಿರ್ಬಂಧ ಹಾಗೂ ನಿಯಮಗಳಿಗೆ ಕೇಂದ್ರ ವಾಣಿಜ್ಯ ಸಚಿವಾಲಯ ತಿದ್ದುಪಡಿ ತಂದಿದ್ದು, ಕಡಿಮೆ ಬೆಲೆಗೆ ಅಡಕೆಯನ್ನು ಆಮದು ಮಾಡಿಕೊಳ್ಳುವುದನ್ನು ತಪ್ಪಿಸಿದೆ. ಇದಕ್ಕಾಗಿ ಕನಿಷ್ಠ ಆಮದು ಬೆಲೆ ನೀತಿಯನ್ನು ಜಾರಿಗೊಳಿಸಿದೆ ಎಂದರು.
ಅಡಕೆ ಮಾರಾಟ ಸಹಕಾರ ಮಹಾಮಂಡಳ ಮತ್ತು ಇತರೆ ಸಹಕಾರಿ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳ ಜೊತೆಗೂಡಿ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಸಂಸ್ಕರಣೆ ಮಾಡಿದ ಅಡಕೆಗೆ ಕೆ.ಜಿ. 1ಕ್ಕೆ .251.10 ಕವಿಷ್ಠ ಬೆಂಬಲ ಬೆಲೆ ಇದೆ. ಇದನ್ನು .360ಕ್ಕೆ ಏರಿಸಲು ಮನವಿ ಮಾಡಲಾಗಿತ್ತು. ಇದು ಅಡಕೆ ಧಾರಣೆ ಈ ಮಟ್ಟಕ್ಕೆ ಏರಲು ಕಾರಣವಾಗಿದೆ. ಜೊತೆಗೆ ಪ್ರತಿ ವರ್ಷವೂ ಧಾರಣೆಯಲ್ಲಿ ಏರಿಳಿತ ಸಹಜ. ರಾಶಿಇಡಿ ಅಡಕೆ ಪ್ರತಿ ಕ್ವಿಂಟಲ್‌ಗೆ .55 ಸಾವಿರ ತಲುಪಿದ್ದು, ಸಧ್ಯ .50 ಸಾವಿರ ಆಸುಪಾಸಿಗೆ ಇಳಿದಿರುವುದಕ್ಕೂ ಭೂತಾನ್ ಅಡಕೆ ಅಮದು ವಿಚಾರಕ್ಕೂ ಸಂಬಂಧ ಇಲ್ಲ. ಬಯಲುಸೀಮೆಯ ಅಡಕೆ ಮಾರುಕಟ್ಟೆಗೆ ಬಂದಿರುವುದು ಇದಕ್ಕೆ ಕಾರಣ ಎಂದರು.
ಮಾಮ್ಕೋಸ್ ಸಂಸ್ಥೆಯು 2017ರ ಡಿಸೆಂಬರ್‌ನಿಂದ ಅಡಕೆ ಖರೀದಿಯನ್ನು ಮಾಡುತ್ತಿದೆ. ಅಂದಿನಿಂದ ಇಂದಿನವರೆಗೂ ಯಾವುದೇ ಹಂತದಲ್ಲಿ, ಅಡಕೆ ಧಾರಣೆ ಕುಸಿಯದಂತೆ ನಿಯಂತ್ರಣದಲ್ಲಿ ಇರಿಸಿದೆ. ಸಂಘದ ಸದಸ್ಯರಿಗೆ ಕಾಲಕಾಲಕ್ಕೆ ಎಲ್ಲ ರೀತಿಯ ಸಾಲ ಸೌಲಭ್ಯವನ್ನು ನೀಡಿ, ಧಾರಣೆ ಸ್ಥಿರತೆಗೆ ಸಹಕರಿಸಲಾಗುತ್ತಿದೆ ಎಂದರು.
ಅಡಕೆ ಕೊಳೆರೋಗ ನಿಯಂತ್ರಣಕ್ಕೆ ಸಿಗದ ಸಹಾಯಧನ
ಎಲೆಚುಕ್ಕಿ ರೋಗಕ್ಕೆ ಪರಿಹಾರ:
ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಅಡಕೆ, ಎಲ್ಲ ಚುಕ್ಕೆರೋಗದ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಒಟ್ಟು .8 ಕೋಟಿ ಅನುದಾನ ನಿಗದಿ ಮಾಡಿದ್ದು, ಇದರಲ್ಲಿ .4 ಕೋಟಿಗಳನ್ನು ರೈತರಿಗೆ ವಿತರಿಸಲು ಬಿಡುಗಡೆ ಮಾಡಲಾಗಿದೆ. ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ, ಉತ್ತರ ಕನ್ನಡ ಮತ್ತು ಕೊಡಗು, ಹಾಸನ ಜಿಲ್ಲೆಯಲ್ಲಿ ಒಟ್ಟು 10 ಸಾವಿರ ಹೆಕ್ಟೇರ್ ಅಡಕೆ ಬೆಳೆ ಪ್ರದೇಶದಲ್ಲಿ ಈ ರೋಗ ಹರಡಿದೆ. ಇದರ ನಿಯಂತ್ರಣದ ಬಗ್ಗೆ ತೋಟಗಾರಿಕೆ ಇಲಾಖೆ ಔಷಧಿ ಹಾಗೂ ಸಿಂಪರಣೆ ವೆಚ್ಚ ಭರಿಸಲು ಅನುದಾನ ಬಿಡುಗಡೆ ಮಾಡಿದೆ. ಅಡಕೆ ಬೆಳೆಗಾರರು ಇದರ ಸದುಪಯೋಗ ಪಡೆಯಬೇಕು ಎಂದರು.