ಕೊಡಗು (ಸೆ.19): ಕಾಡಾನೆ ಕಂಡು ಕಾರು ಚಾಲಕ ಗಾಬರಿಗೊಂಡು ನಿಯಂತ್ರಣ ತಪ್ಪಿದ ಘಟನೆ ಕೊಡಗಿನಲ್ಲಿಂದು ನಡೆದಿದೆ.
ಆನೆ ಕಂಡ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ.
ವಿದ್ಯುತ್ ತಂತಿ ಸ್ಪರ್ಶಿಸಿ ಮೈಸೂರಿನಲ್ಲಿ ಆನೆ ಸಾವು
ಪಾಲಿಬೆಟ್ಟದಿಂದ ಸಿದ್ದಾಪುರಕ್ಕೆ ಬರುತ್ತಿದ್ದ ವೇಳೆ ಕಾಡಾನೆ ಪ್ರತ್ಯಕ್ಷವಾಗಿದೆ. ಈ ವೇಳೆ ಕಾರು ಮರಕ್ಕೆ ಗುದ್ದಿದ ಪರಿಣಾಮ ಭಾಗಶಃ ನಜ್ಜುಗುಜ್ಜಾಗಿದೆ. ಚಾಲಕನಿಗೆ ಸ್ಥಳೀಯರು ನೆರವಾಗಿದ್ದಾರೆ.
ಸ್ಥಳೀಯರ ನೆರವಿನಿಂದಾಗಿ ಚಾಲಕ ಅಪಾಯದಿಂದ ಪಾರಾಗಿದ್ದು ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ.