ಜಿಲ್ಲಾ ಬಿಜೆಪಿ ಅಧ್ಯ​ಕ್ಷರಿದ್ದ ಕಾರು ಪಲ್ಟಿ: ಪವಾಡ ಸದೃಶ ಪಾರು

Kannadaprabha News   | Asianet News
Published : Jul 02, 2020, 07:53 AM IST
ಜಿಲ್ಲಾ ಬಿಜೆಪಿ ಅಧ್ಯ​ಕ್ಷರಿದ್ದ ಕಾರು ಪಲ್ಟಿ: ಪವಾಡ ಸದೃಶ ಪಾರು

ಸಾರಾಂಶ

ತೋಡಾರಿನಲ್ಲಿ ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಬಿಜೆಪಿ ದ.ಕ. ಜಿಲ್ಲಾ ಅಧ್ಯಕ್ಷ ಸುದರ್ಶನ್‌ ಅವರ ಕಾರು ಪಲ್ಟಿಹೊಡೆದು ಕಾರಿನಲ್ಲಿದ್ದವರಿಬ್ಬರು ಪವಾಡಸದೃಶ ಪಾರಾಗಿದ್ದಾರೆ.

ಮೂಡುಬಿದಿರೆ(ಜು.02): ತೋಡಾರಿನಲ್ಲಿ ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಬಿಜೆಪಿ ದ.ಕ. ಜಿಲ್ಲಾ ಅಧ್ಯಕ್ಷ ಸುದರ್ಶನ್‌ ಅವರ ಕಾರು ಪಲ್ಟಿಹೊಡೆದು ಕಾರಿನಲ್ಲಿದ್ದವರಿಬ್ಬರು ಪವಾಡಸದೃಶ ಪಾರಾಗಿದ್ದಾರೆ.

ಕಾರಿನಲ್ಲಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಎಂ. ಮತ್ತು ಕಾರು ಚಾಲಕ ಜಯ ಅವರು ಪಾರಾ​ಗಿ​ದ್ದಾರೆ. ಸುದರ್ಶನ್‌ ಅವರು ಬುಧ​ವಾರ ಮೂಡುಬಿದಿರೆಯಲ್ಲಿ ನಡೆದ ‘ಮಾಧ್ಯಮ ಹಬ್ಬ’ದಲ್ಲಿ ಭಾಗವಹಿಸಿ ಬಳಿಕ ಮಂಗಳೂರಿನಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಗೆ ತಮ್ಮ ಕಾರಿನಲ್ಲಿ ತೆರಳಿದ್ದರು.

ಉಡುಪಿಯ 600 ಬಸ್ಸು ಚಾಲಕರಿಗೆ ಕೋವಿಡ್‌ ಪರೀಕ್ಷೆ

ಮಧ್ಯಾಹ್ನ ಸುಮಾರು 2 ಗಂಟೆಗೆ ತೋಡಾರು ಜಂಕ್ಷನ್‌ ಬಳಿಯ ಬಲಬದಿಯ ಮಸೀದಿ ರಸ್ತೆಯಿಂದ ಬೈಕೊಂದು ವೇಗವಾಗಿ ಮುಖ್ಯ ರಸ್ತೆಗೆ ಬಂದು ಸವಾರ ತಪ್ಪು ದಿಕ್ಕಿನಲ್ಲಿ ಬೈಕನ್ನು ಮೂಡುಬಿದಿರೆ ಕಡೆ ತಿರುಗಿಸಿದ್ದಾನೆ.

ಈ ವೇಳೆ ಬೈಕ್‌ಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ತಕ್ಷಣ ಕಾರು ಚಾಲಕ ಕಾರನ್ನು ರಸ್ತೆಯ ಬಲಬದಿಗೆ ತಿರುಗಿಸಿದಾಗ ಪಕ್ಕದ ಧರೆಗೆ ಗುದ್ದಿ ಪಲ್ಟಿಹೊಡೆದು ವಾಪಾಸು ರಸ್ತೆ ಮೇಲೆ ಬಿದ್ದು ಯಥಾಸ್ಥಿತಿಯಲ್ಲಿ ನಿಂತಿತ್ತೆನ್ನಲಾಗಿದೆ. ಕಾರಿನಲ್ಲಿದ್ದವರಿಬ್ಬರು ಸೀಟು ಬೆಲ್ಟ್‌ ಧರಿಸಿದರಿಂದ ಸಣ್ಣಪುಟ್ಟಗಾಯಗಳೊಂದಿಗೆ ಜೀವಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!