ಕೊಬ್ಬರಿ ನಫೆಡ್ ಕೇಂದ್ರ ತೆರೆಯದಿದ್ದರೆ ಜಿಲ್ಲಾ ಬಂದ್‌ಗೆ ಕರೆ : ಕೆಟಿಎಸ್‌ ಎಚ್ಚರಿಕೆ

By Kannadaprabha News  |  First Published Feb 7, 2024, 11:40 AM IST

ಒಂದು ವಾರದೊಳಗೆ ಕೊಬ್ಬರಿ ನಫೆಡ್ ಕೇಂದ್ರ ತೆರೆದು ರೈತರಿಂದ ಕೊಬ್ಬರಿ ಕೊಂಡುಕೊಳ್ಳದಿದ್ದರೆ ತುಮಕೂರು ಜಿಲ್ಲಾ ಬಂದ್‌ಗೆ ಕರೆ ನೀಡಿ ಸರ್ಕಾರದ ವಿರುದ್ಧ ರೈತರೊಡಗೂಡಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.


 ತಿಪಟೂರು :  ಒಂದು ವಾರದೊಳಗೆ ಕೊಬ್ಬರಿ ನಫೆಡ್ ಕೇಂದ್ರ ತೆರೆದು ರೈತರಿಂದ ಕೊಬ್ಬರಿ ಕೊಂಡುಕೊಳ್ಳದಿದ್ದರೆ ತುಮಕೂರು ಜಿಲ್ಲಾ ಬಂದ್‌ಗೆ ಕರೆ ನೀಡಿ ಸರ್ಕಾರದ ವಿರುದ್ಧ ರೈತರೊಡಗೂಡಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದ ತಮ್ಮ ಗೃಹಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಬ್ಬರಿ ಬೆಳೆಗಾರರ ಸಮಸ್ಯೆ ಬಗೆಹರಿಸಲು ನಫೆಡ್ ಕೇಂದ್ರ ತೆರೆಯುವಂತೆ ಆದೇಶ ನೀಡಿತು. ಆದರೆ, ರಾಜ್ಯ ಸರ್ಕಾರ ಕೊಬ್ಬರಿ ಖರೀದಿಗಾಗಿ ಪ್ರೋತ್ಸಾಹ ಬೆಲೆ ನೀಡಿ ನಫೆಡ್ ಕೇಂದ್ರ ತೆರೆಯುವುದಾಗಿ ದಿನಾಂಕ ನಿಗದಿಗೊಳಿಸಿ, ಈಗ ಕ್ಷುಲ್ಲಕ ನೆಪ ಹೇಳುತ್ತಾ ನಫೆಡ್ ಕೇಂದ್ರವನ್ನು ತೆರೆಯದೆ ರೈತರಿಗೆ ಆರ್ಥಿಕ ಸಂಕಷ್ಟ ತಂದೊಡ್ಡುತ್ತಿದೆ.

Tap to resize

Latest Videos

undefined

ಕಳೆದ ತಿಂಗಳು 20ರಂದು ನಫೆಡ್ ಪ್ರಾರಂಭ ಎಂದು ಘೋಷಿಸಿದ್ದ ಸರ್ಕಾರ ನಂತರ ಬಯೋಮೆಟ್ರಿಕ್ ಅಳವಡಿಕೆ ನೆಪವೊಡ್ಡಿ ಹತ್ತು ದಿನ ಮುಂದೂಡಿತು. ಮತ್ತೆ ಫೆ.1ರಂದು ಕೂಡ ಬಯೋಮೆಟ್ರಿಕ್ ಅಳವಡಿಕೆಗೆ ಮತ್ತಷ್ಟು ಸಮಯ ಬೇಕೆಂದು ಅನಿರ್ಧಿಷ್ಟಾವಧಿ ಮುಂದೂಡಿದೆ. ಇಂದಿನ ಯುಗದಲ್ಲಿ ಬಯೋಮೆಟ್ರಿಕ್ ಅಳವಡಿಕೆಗೆ ತಿಂಗಳುಗಟ್ಟಲೆ ಸಮಯ ಬೇಕಿಲ್ಲ, ಕೇವಲ ಮೂರ‍್ನಾಲ್ಕು ದಿನ ಸಾಕು. ರೈತರು ವರ್ತಕರಿಗೆ ಕೊಬ್ಬರಿ ಮಾರಿದರೆ ಕ್ವಿಂಟಾಲ್ ಕೊಬ್ಬರಿಗೆ ಕೇವಲ ೮ ರಿಂದ ೯ ಸಾವಿರ ದೊರೆಯುತ್ತದೆ. ನಫೆಡ್‌ಗೆ ಮಾರಿದರೆ 13500 ರು. ದೊರೆಯುತ್ತದೆ ಎಂದು ಖುಷಿಯಿಂದ ತಮ್ಮಲ್ಲಿರುವ ಕೊಬ್ಬರಿಯನ್ನು ತಂದು ಬಿಡಲು ತಯಾರಿ ನಡೆಸಿದ್ದರು. ಆದರೆ ಸರ್ಕಾರ ಪದೇ-ಪದೇ ಖರೀದಿ ಮುಂದಕ್ಕೆ ಹಾಕುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಇದನ್ನು ಪರಿಗಣಿಸಿ ಸರ್ಕಾರ ಈ ಕೂಡಲೇ ನಫೆಡ್ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.

ರೈತಪರ ಕಾಳಜಿಯಿಲ್ಲದ ಜನಪ್ರತಿನಿಧಿಗಳು:

ಕೇಂದ್ರ ಸರ್ಕಾರ ಒಂದು ತಿಂಗಳ ಹಿಂದೆಯೇ ನಾಫೆಡ್ ಪ್ರಾರಂಭಕ್ಕೆ ಅನುಮತಿ ನೀಡಿದ್ದರೂ ರಾಜ್ಯ ಸರ್ಕಾರ ಬಯೋಮೆಟ್ರಿಕ್ ಅಳವಡಿಸುವ ನೆಪವೊಡ್ಡಿ ಕೊಬ್ಬರಿ ಖರೀದಿ ಮುಂದೂಡುತ್ತಾ ಬಂದಿದೆ. ಜಿಲ್ಲೆಯ ಜನಪ್ರತಿನಿಧಿಗಳಿಗೆ ರೈತಪರ ಕಾಳಜಿಯಿಲ್ಲದಂತಾಗಿದ್ದು, ತೆಂಗು ಬೆಳೆಗಾರರ ಕಷ್ಟ ಯಾರಿಗೂ ಅರ್ಥವಾಗುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ರೈತರನ್ನು ಬಳಸಿಕೊಂಡು ಚೆಲ್ಲಾಟವಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ನೆಪವೊಡ್ಡಿ ನಫೆಡ್ ಕೇಂದ್ರ ಮುಂದಕ್ಕೆ:

ಕೇಂದ್ರ ಸರ್ಕಾರ ನಫೆಡ್ ಮೂಲಕ ಕೊಬ್ಬರಿ ಖರೀದಿಗೆ ರು.12000 ಬೆಂಬಲ ಬೆಲೆ ಘೋಷಿಸಿದೆ. ರಾಜ್ಯ ಸರ್ಕಾರ ಮೂರು ಸಾವಿರ ಪ್ರೋತ್ಸಾಹ ಧನ ನೀಡಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಮಾತು ಉಳಿಸಿಕೊಳ್ಳಲು ಮುಖ್ಯಮಂತ್ರಿಗಳಿಗೂ ಮನವಿ ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಕೇವಲ 1500 ರು. ಪ್ರೋತ್ಸಾಹ ಧನ ಘೋಷಿಸಿದ್ದು, ಸರ್ಕಾರದ ಬಳಿ ಹಣವಿಲ್ಲದೆ ನೆಪವೊಡ್ಡಿ ಕೊಬ್ಬರಿ ಖರೀದಿಯನ್ನು ಮುಂದೂಡಿರುವುದು ಸರಿಯಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮೇಲಾಪುರ ನಟರಾಜು, ಆಲದಹಳ್ಳಿ ಚನ್ನೇಗೌಡ, ಆಲ್ಬೂರು ವಸಂತ್, ಹಾಲ್ಕುರಿಕೆ ರಮೇಶ್, ಸಂತೋಷ್ ಇದ್ದರು.

click me!