ಭಾಷಣ ಮಾಡುತ್ತಿದ್ದಾಗಲೇ ಶಾಸಕ ಸಿ. ಟಿ. ರವಿಯನ್ನ ತಡೆದ ಶ್ರೀಗಳು

By Kannadaprabha News  |  First Published Aug 2, 2019, 10:51 AM IST

ಶಾಸಕ ಸಿ. ಟಿ. ರವಿ ಅವರು ಮಾತನಾಡುತ್ತಿದ್ದಾಗ ಅವರನ್ನು ತಡೆದು ಮಾತು ಮೊಟಕುಗೊಳಿಸಿರುವ ಘಟನೆ ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದಿದೆ. ಶಾಸಕ ಸಿ.ಟಿ.ರವಿ ಅವರು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾಗ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಾಣೆಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಡೆದಿದ್ದಾರೆ.


ಚಿಕ್ಕಮಗಳೂರು(ಆ.02): ಶಾಸಕ ಸಿ. ಟಿ. ರವಿ ಅವರು ಮಾತನಾಡುತ್ತಿದ್ದಾಗ ಅವರನ್ನು ತಡೆದು ಮಾತು ಮೊಟಕುಗೊಳಿಸಿರುವ ಘಟನೆ ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದಿದೆ. ಶಾಸಕ ಸಿ.ಟಿ.ರವಿ ಅವರು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾಗ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಾಣೆಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಡೆದಿದ್ದಾರೆ.

ತರೀಕೆರೆಯ ಸಾಣೆಹಳ್ಳಿ ಸಹಮತ ವೇದಿಕೆ, ಜಿಲ್ಲಾ ಸ್ವಾಗತ ಸಮಿತಿ ವತಿಯಿಂದ ಪಟ್ಟಣದ ವೀರಮಾತೆ ಅಕ್ಕ ನಾಗಲಾಂಬಿಕೆ ಐಕ್ಯಮಂಟಪದಲ್ಲಿ ನೆಡೆದ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಪರವಾಗಿ ಶಾಸಕ ಸಿ.ಟಿ.ರವಿ ಅವರು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದರು.

Latest Videos

ಶಾಸಕ ರವಿ ಅವರಿಂದ ಜನತೆಗೆ ತಪ್ಪು ಮಾಹಿತಿ: ಕಾಂಗ್ರೆಸ್ ಆರೋಪ

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಾಣೆಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಶಾಸಕ ಸಿ.ಟಿ.ರವಿ ಅವರ ಮಾತನ್ನು ಮೊಟಕುಗೊಳಿಸಿ, ನಿಮ್ಮ ಅಭಿಪ್ರಾಯವನ್ನು ಎಲ್ಲರೂ ಒಪ್ಪುವುದಿಲ್ಲ, ಎಲ್ಲರನ್ನೂ ಒಳಗೊಂಡ ದೇಶವನ್ನು ನಾವು ಕಾಣಬಯಸುತ್ತೇವೆ, ಕಟ್ಟುವ ಕಾರ್ಯಕ್ಕೆ ಎಲ್ಲರೂ ಒಗ್ಗಟ್ಟಾಗಬೇಕು, ಮನಸನ್ನು ತಿಳಿಗೊಳಿಸಬೇಕು ಎಂದು ಹೇಳಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!