ಸಾಮಾಜಿಕ ಅಂತರ ಕಾಯ್ದುಕೊಂಡು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಅನುಮತಿ| ಎಪಿಎಂಸಿ ಪ್ರಾಂಗಣದ ಒಳಗೆ ಮತ್ತು ಹೊರಗಡೆ ವಹಿವಾಟು ನಡೆಸುವ ವರ್ತಕರ ವಿರುದ್ಧ ಕ್ರಮ| ಮಾರುಕಟ್ಟೆಯಲ್ಲಿ ವಹಿವಾಟು ನಿರ್ಬಂಧಕ್ಕೆ ಜಿಲ್ಲಾಡಳಿತ ಕ್ರಮ|
ಬ್ಯಾಡಗಿ(ಏ.22): ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಮಾರುಕಟ್ಟೆ ವಹಿವಾಟನ್ನು ಮೇ. 3ರ ವರೆಗೆ ಸ್ಥಗಿತಗೊಳಿಸಲಾಗುವುದು. ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಧಾರ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು. ಅಲ್ಲಿಯವರೆಗೂ ಎಪಿಎಂಸಿ ಪ್ರಾಂಗಣದ ಒಳಗೆ ಮತ್ತು ಹೊರಗಡೆ ವಹಿವಾಟು ನಡೆಸುವ ವರ್ತಕರ ವಿರುದ್ಧ ಕ್ರಮ ಜರುಗಿಸಲು ಮಂಗಳವಾರ ಸ್ಥಳೀಯ ಎಪಿಎಂಸಿಯಲ್ಲಿ ಜರುಗಿದ ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಯಿತು.
ವಿಷಯದ ಕುರಿತು ಮಾತನಾಡಿದ ವರ್ತಕರ ಪ್ರತಿನಿಧಿ ಸಿ.ಆರ್. ಪಾಟೀಲ (ಬಾಬಣ್ಣ) ಹಾಗೂ ಸದಸ್ಯ ಚನ್ನಬಸಪ್ಪ ಹುಲ್ಲತ್ತಿ, ಮೆಣಸಿನಕಾಯಿ ಜೀವನಾವಶ್ಯಕ ವಸ್ತುವಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಅನುಮತಿ ನೀಡುವಂತೆ ಸಭೆಯ ಗಮನಕ್ಕೆ ತಂದರು.
ಕೊರೋನಾ ಆತಂಕ: KSRP ಪೇದೆಗೆ ಜ್ವರ, ಇಡೀ ತುಕಡಿ ಕ್ವಾರಂಟೈನ್
ಇದಕ್ಕೆ ಪ್ರತಿಕ್ರಿಯಿಸಿದ ಕಾರ‍್ಯದರ್ಶಿ ಎಸ್.ಜಿ. ನ್ಯಾಮಗೌಡ, ಮೆಣಸಿನಕಾಯಿ ಎಲ್ಲರಿಗೂ ಅವಶ್ಯ ಇಲ್ಲದಿದ್ದರೂ ಸಾಮಾನ್ಯ ಜನರು ಜೀವನ ನಡೆಸಬಹುದು ಎಂಬ ಅಭಿಪ್ರಾಯಕ್ಕೆ ಕೇಂದ್ರ ಸರ್ಕಾರ ಬಂದಿದೆ. ಜೀವನಾವಶ್ಯಕ ವಸ್ತುಗಳ ಪಟ್ಟಿಯಿಂದ ಒಣಮೆಣಸಿನಕಾಯಿ ಕೈಬಿಡಲಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ವಹಿವಾಟು ನಿರ್ಬಂಧಕ್ಕೆ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ. ಅಲ್ಲದೇ ಜಿಲ್ಲಾಧಿಕಾರಿಗಳು ಪಡೆದಿರುವ ವರದಿಗಳ ಪ್ರಕಾರ ಸ್ಥಳೀಯ ಎಪಿಎಂಸಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಾಗಲಿ ಅಥವಾ ನಿಯಂತ್ರಣ ಸಾಧ್ಯವಿಲ್ಲ. ಹೀಗಾಗಿ ಜಿಲ್ಲಾಡಳಿತದ ನಿರ್ದೇಶನದಂತೆ ಮಾರುಕಟ್ಟೆಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿದರು. ಬಳಿಕ ಆಡಳಿತ ಮಂಡಳಿಯು ಮೇ 3ರ ವರೆಗೆ ಎಪಿಎಂಸಿ ವಹಿವಾಟು ಸ್ಥಗಿತಗೊಳಿಸುವಂತೆ ಸರ್ವಾನುಮತದ ನಿರ್ಣಯ ಕೈಗೊಂಡಿತು.
ಅಧ್ಯಕ್ಷ ಕೆ.ಎಸ್. ನಾಯ್ಕರ ಮಾತನಾಡಿ, ತಾಲೂಕಿನಲ್ಲಿ ಯಾವುದೇ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ ರೆಡ್‌ಜೋನ್, ಹಾಟ್‌ಸ್ಪಾಟ್ ಇನ್ನಿತರ ಹೈಅಲರ್ಟ್ ಇರುವಂತಪತ್ತೆ ಹಚ್ಚುವುದು ಕಷ್ಟ. ಹೀಗಾಗಿ ಪರಪ್ರಾಂತದ ಲಾರಿಗಳ ಆಗಮನ ಮತ್ತು ನಿರ್ಗಮನ ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿ ಕ್ರಿಯಿಸಿದ ಕಾರ್ಯದರ್ಶಿ ಈಗಾಗಲೇ ತಾಲೂಕಾಡಳಿತ ಸ್ಪಷ್ಟಸೂಚನೆ ನೀಡಿದ್ದು ಪರಪ್ರಾಂತದ ಎಲ್ಲ ವಾಹನಗಳ ನಿರ್ಬಂಧಕ್ಕೆ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿದೆ ಎಂದರು.ಹ ಪ್ರದೇಶಗಳಿಂದ ಚಾಲಕರು ಲಾರಿಗಳ ಮೂಲಕ ಬರುತ್ತಿದ್ದಾರೆ. ಅವರಲ್ಲಿ ಯಾರಾದರೂ ಸೋಂಕಿತರಿದ್ದರೇ
ಸದಸ್ಯ ಶಿವಣ್ಣ ಕುಮ್ಮೂರ, ಶಶಿಧರ ದೊಡ್ಮನಿ, ಉಪಾಧ್ಯಕ್ಷ ಉಳಿವೆಪ್ಪ ಕುರುವತ್ತಿ, ಸದಸ್ಯರಾದ ಡಿ.ಬಿ. ತೋಟದ, ವನಿತ ಗುತ್ತಲ, ಮಾಲತೇಶ ಹೊಸಳ್ಳಿ, ಕುಮಾರ ಚೂರಿ, ಶೈಲಾ ರೊಡ್ಡನವರ, ಮಾರುತಿ ಕೆಂಪಗೊಂಡರ, ಹನುಮಂತಪ್ಪ ನಾಯ್ಕರ್ ಇದ್ದರು.