ಕುಮಾರಸ್ವಾಮಿ ಅವರಿಗೆ ನಮ್ಮ ನಾಯಕರು ಉತ್ತರ ನಿಡ್ತಾರೆ : BY ವಿಜಯೇಂದ್ರ

By Suvarna News  |  First Published Dec 20, 2019, 2:50 PM IST

ರಾಜ್ಯದಲ್ಲಿ  ಉಪ ಚುನಾವಣೆ ಮುಗಿದ ಬಳಿಕ ಅಡ್ರೆಸ್ ಗೂ ಇಲ್ಲದ ಕುಮಾರಸ್ವಾಮಿ ಈಗ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ವಿಜಯೇಂದ್ರ ವಾಕ್ ಪ್ರಹಾರ ನಡೆಸಿದ್ದಾರೆ. 


ಕಲಬುರಗಿ [ಡಿ.20]: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಈಗ ಮಾತನಾಡುತ್ತಿದ್ದಾರೆ. ಬ ರಾಜ್ಯದಲ್ಲಿ ಉಪ ಚುನಾವಣೆ ಆದ ಬಳಿಕ ಕುಮಾರಸ್ವಾಮಿ ಅಡ್ರೆಸ್ ಗೂ ಇರಲಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಹೇಳಿದರು.

ಕಲಬುರಗಿಯಲ್ಲಿ ಮಾತನಾಡಿದ ವಿಜಯೇಂದ್ರ, ಈಗ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದು, ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಮುಖ್ಯಮಂತ್ರಿ ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಈಗ ಯಡಿಯೂರಪ್ಪ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಅವರ ಎಲ್ಲಾ ಪ್ರಶ್ನೆಗಳಿಗೂ ಕೂಡ ನಮ್ಮ ನಾಯಕರು ಉತ್ತರ ನೀಡುತ್ತಾರೆ ಎಂದರು. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಪೌರತ್ವ ಮಸೂದೆಗೆ ಇದೀಗ ವ್ಯಾಪ ವಿರೋಧ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಪೌರತ್ವ ಕಾಯ್ದೆ ಎನ್ನುವುದು ನೆರೆ ರಾಷ್ಟ್ರಗಳಿಂದ ಬಂದ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸುವ ಉದ್ದೇಶ ಹೊಂದಿದೆ.  ಸತ್ಯ ಸಂಗತಿ ಗೊತ್ತಿದ್ದರು. ವಿದ್ಯಾವಂತರೆನಿಸಿಕೊಂಡವರೇ ಜನತೆಯ ದಾರಿ ತಪ್ಪಿಸುತ್ತಿರುವುದು ದುರದೃಷ್ಟಕರ. ಜನತೆಯನ್ನು ತಪ್ಪು ದಾರಿಗೆ ಎಳೆಯುವುದು ದೇಶ ದ್ರೋಹದ ಕೆಲಸ ಎಂದು ವಿಪಕ್ಷ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದರು. 

ಇನ್ನೂ ಯಡಿಯೂರಪ್ಪ ಯುವಕರ ವಿರೋಧಿ ಎನ್ನುವ ಸಿದ್ರಾಮಯ್ಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ವಿಜಯೇಂದ್ರ,  ಪೌರತ್ವ ಕಾಯ್ದೆಯ ಸದುದ್ದೇಶ ಗೊತ್ತಿದ್ದರೂ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.  ಯಡಿಯೂರಪ್ಪ ಅವರ ಆಡಳಿದ ಬಗ್ಗೆ ವಿರೋಧ ಪಕ್ಷಗಳಿಗೆ ಹೇಳಲು ಏನು ಇಲ್ಲ. ಅವರು ಇಂಥಹ ಸೂಕ್ಷ್ಮ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ಕೊಡುವ ಬದಲು ಶಾಂತಿ ಕಾಪಾಡುವ ಬಗ್ಗೆ ಸರ್ಕಾರದೊಂದಿಗೆ ಸೇರಿ ಕೆಲಸ ಮಾಡುವ ಬಗ್ಗೆ ಮಾತನಾಡಿದರೆ  ಒಳ್ಳಯದಿತ್ತು ಎಂದು ಸಿದ್ರಾಮಯ್ಯರಿಗೆ ವಿಜಯೇಂದ್ರ ಟಾಂಗ್ ನೀಡಿದರು.

click me!