ಶಿವಮೊಗ್ಗ ಬಿ.ವಿ. ಶ್ರೀನಿವಾಸ್ ಜನ್ಮದಿನಕ್ಕೆ 'ಪೂರ್ಣಿಮಾ, ವಿಕ್ರಂ' ಹುಲಿಗಳನ್ನು ದತ್ತು ಪಡೆದ ಕಾಂಗ್ರೆಸ್ ಮುಖಂಡರು!

Published : Nov 09, 2026, 11:51 AM IST
Shivamogga Tiger Adoption by BV Srinivas Fans Congress

ಸಾರಾಂಶ

ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರ ಜನ್ಮದಿನದ ಪ್ರಯುಕ್ತ ಶಿವಮೊಗ್ಗದಲ್ಲಿ ಯುವ ನಾಯಕರು ಆಡಂಬರದ ಆಚರಣೆ ಬಿಟ್ಟು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ತ್ಯಾವರೆಕೊಪ್ಪದ 'ಪೂರ್ಣಿಮಾ' ಮತ್ತು 'ವಿಕ್ರಂ' ಎಂಬ ಎರಡು ಹುಲಿಗಳನ್ನು ದತ್ತು ಪಡೆಯುವ ಮೂಲಕ ವನ್ಯಜೀವಿ ಪ್ರೇಮ ಮೆರೆದಿದ್ದಾರೆ.

ಶಿವಮೊಗ್ಗ (ನ.09): ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾದ ಬಿ.ವಿ. ಶ್ರೀನಿವಾಸ್ (BV Srinivas) ಅವರ ಜನ್ಮದಿನದ ಪ್ರಯುಕ್ತ ಶಿವಮೊಗ್ಗದಲ್ಲಿ ಅರ್ಥಪೂರ್ಣ ಹಾಗೂ ವಿಭಿನ್ನವಾದ ಕಾರ್ಯಕ್ರಮವೊಂದನ್ನು ಆಯೋಜಿಸುವ ಮೂಲಕ ಯುವ ನಾಯಕರು ಮಾದರಿಯಾಗಿದ್ದಾರೆ.

ಆಡಂಬರದ ಬರ್ತ್‌ಡೇ ಆಚರಣೆಗಳಿಗೆ ಬ್ರೇಕ್ ಹಾಕಿ, ಶಿವಮೊಗ್ಗದ ಪ್ರಸಿದ್ಧ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿದ್ದ (Tyavarekoppa Safari) ‘ಪೂರ್ಣಿಮಾ’ ಹಾಗೂ ‘ವಿಕ್ರಂ’ ಹೆಸರಿನ ಎರಡು ರಾಷ್ಟ್ರೀಯ ಪ್ರಾಣಿ ಹುಲಿಗಳನ್ನು ದತ್ತು ಪಡೆಯುವ ಮೂಲಕ ಪರಿಸರ ಕಾಳಜಿ ಮತ್ತು ವನ್ಯಜೀವಿ ಪ್ರೇಮವನ್ನು ಮೆರೆದಿದ್ದಾರೆ.

ವನ್ಯಜೀವಿ ಸಂರಕ್ಷಣೆಗೆ ಯುವ ಪಡೆಯ ಕೊಡುಗೆ

ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (SUDA) ಅಧ್ಯಕ್ಷ ಸಿ.ಜಿ. ಮಧುಸೂದನ್ ಹಾಗೂ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಗರಾಧ್ಯಕ್ಷ ಚರಣ್ ಶೆಟ್ಟಿ ಅವರ ನೇತೃತ್ವದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ (NSUI) ಜೊತೆಗೂಡಿ ಈ ದತ್ತು ಸ್ವೀಕಾರ ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು:

'ಆಡಂಬರದ ಆಚರಣೆಗಳಿಗೆ ಬ್ರೇಕ್ ಹಾಕಿ, ವನ್ಯಜೀವಿ ಸಂರಕ್ಷಣೆಗೆ ಕೊಡುಗೆ ನೀಡುವುದು ನಮ್ಮ ನಾಯಕರಿಗೆ ನೀಡುವ ನಿಜವಾದ ಗೌರವ. ಬಿ.ವಿ. ಶ್ರೀನಿವಾಸ್ ಅವರ ಜನಪರ ನಿಲುವಿಗೆ ಪೂರಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ತಿಳಿಸಿದರು.

ಹುಲಿಗಳನ್ನು ದತ್ತು ಪಡೆಯುವ ಮೂಲಕ ಪ್ರಕೃತಿ ಸಂರಕ್ಷಣೆ ಮತ್ತು ವನ್ಯಜೀವಿಗಳ ರಕ್ಷಣೆಯ ಸಂದೇಶವನ್ನು ಸಮಾಜಕ್ಕೆ ಸಾರಿದ ಯುವ ಕಾಂಗ್ರೆಸ್ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರ ಈ ವಿಭಿನ್ನ ಪ್ರಯತ್ನ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

PREV
Read more Articles on
click me!

Recommended Stories

348 ವರ್ಷಗಳ ಶಿವಾಜಿ-ಮಲ್ಲಮ್ಮಾಜಿ ಸಹೋದರತ್ವಕ್ಕೆ ಸಾಕ್ಷಿ, ಯಾದವಾಡಕ್ಕೆ ಶಿವಾಜಿ, ಮಲ್ಲಮ್ಮ, ಚೆನ್ನಮ್ಮ, ಕೆಳದಿ ಚೆನ್ನಮ್ಮಾಜಿ ವಂಶಸ್ಥರ ಆಗಮನ
ನಾಡಿನ ಪ್ರಸಿದ್ಧ ಪ್ರಸಿದ್ಧ ನಿಮಿಷಾಂಬ ದೇಗುಲದಲ್ಲಿ ಭ್ರಷ್ಟಾಚಾರ ಆರೋಪ, ಅನುಮಾನ ಮೂಡಿಸಿದ ಗುತ್ತಿಗೆ ಹಂಚಿಕೆ!